ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಕಲಿ ಪತ್ರಕರ್ತರು

ವಾಚಕರ ವಾಣಿ
Last Updated 9 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ರಾಜ್ಯದಲ್ಲಿ ಇತ್ತೀಚೆಗೆ ನಕಲಿ ಪತ್ರಕರ್ತರ ಹಾವಳಿ ಹೆಚ್ಚಾಗುತ್ತಿದೆ. ಕೇವಲ ಪತ್ರಿಕೆ ಟೈಟಲ್ ಇಟ್ಟುಕೊಂಡು ಹಫ್ತಾ ವಸೂಲಿಗಾಗಿ ಕಚೇರಿಯಿಂದ ಕಚೇರಿಗೆ ಅಲೆದಾಡುವ ಇವರಿಗೆ ಪತ್ರಿಕೆ ನಡೆಸುವ ಕನಿಷ್ಠ ಜ್ಞಾನವೂ ಇರುವುದಿಲ್ಲ.

ದಿನ, ವಾರ, ಮಾಸಿಕ ಪ್ರಕಟಣೆಯ ಪತ್ರಿಕೆಗಳೆಂದು ಹೆಸರಿಟ್ಟು, ಅವುಗಳನ್ನು ಸರ್ಕಾರಿ ಜಾಹೀರಾತುಗಳು ಬಂದಾಗ ಮಾತ್ರ ಪ್ರಕಟಿಸುತ್ತಾರೆ. ಜಾಹೀರಾತು ಬಾರದಿದ್ದಾಗ ಸರ್ಕಾರಿ ಕಚೇರಿಗಳಿಗೆ ಎಡತಾಕಿ ಅಲ್ಲಿರುವ ಅಧಿಕಾರಿ, ನೌಕರರಿಗೆ ಮಾನಸಿಕ ಕಿರುಕುಳ ಕೊಟ್ಟು ಹಣ ವಸೂಲಿ ದಂಧೆಗೆ ಇಳಿಯುತ್ತಾರೆ. ಇಂತಹವರ ವಿರುದ್ಧ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಬೇಕು.
-ವಿ.ಜಿ.ಇನಾಮದಾರ, ಸಾರವಾಡ, ವಿಜಯಪುರ ಜಿಲ್ಲೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT