ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಫಿ ಬಟ್ಟಲಿನಲ್ಲಿ ಕಂಪನ: ಬೆಳೆಗಾರರು ಕಂಗಾಲು

ಚಿಕ್ಕಮಗಳೂರು: ಸುಡು ಬಿಸಿಲು, ಬರಗಾಲಕ್ಕೆ ಒಣಗಿದ ಕಾಫಿ, ಕಾಳುಮೆಣಸು ಬೆಳೆ
Last Updated 10 ಮಾರ್ಚ್ 2017, 9:40 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಸತತ ಬರಗಾಲ ದಿಂದ ಈಗ ಮಲೆನಾಡಿನ ‘ಕಾಫಿ ಬಟ್ಟಲಿನಲ್ಲಿ ಕಂಪನ’ ಶುರುವಾಗಿದೆ. ಎರಡು ವರ್ಷ ಗಳಿಂದ ಮಳೆ ಪ್ರಮಾಣ ಕಡಿಮೆಯಾದ ಪರಿಣಾಮ ಕಾಫಿ ಬೆಳೆಯುವ ಪ್ರಮುಖ ಜಿಲ್ಲೆಗಳಾದ ಚಿಕ್ಕಮಗಳೂರು, ಹಾಸನ ಹಾಗೂ ಕೊಡಗು ಭಾಗದಲ್ಲಿ ಅರೆಬಿಕಾ ಕಾಫಿ ಗಿಡಗಳು ಮತ್ತು ಕಾಳುಮೆಣಸು ಬಳ್ಳಿಗಳು ಒಣಗುತ್ತಿವೆ.

ಇದು ಮುಂದಿನ ವರ್ಷದ ಇಳುವರಿ ಕುಂಠಿತಗೊಳಿಸಲಿದೆ. ಅರೆಬಿಕಾ ಕಾಫಿಗೆ ಬಿಳಿಕಾಂಡಕೊರಕ ಬಾಧೆ ಹೆಚ್ಚಿಸಲಿದೆ. ಜತೆಗೆ ಕಾಫಿ ಮರುನಾಟಿ ಮಾಡಬೇಕಾದ ಅನಿವಾರ್ಯತೆಗೆ ದೂಡಲಿದ್ದು, ಆರ್ಥಿಕ ನಷ್ಟಕ್ಕೆ ಸಿಲುಕಿಸಲಿದೆ ಎನ್ನುವುದು ಬೆಳೆಗಾರರ ಆತಂಕದ ನುಡಿ.

ಸತತ ಬರಗಾಲದಿಂದ ಭತ್ತ, ಶುಂಠಿ ಇನ್ನಿತರ ಬೆಳೆಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಈ ಮೂರು ಜಿಲ್ಲೆಗಳ ಅರೆಮಲೆನಾಡಿನ ರೈತರಿಗೆ ಕೊಂಚ ಆಸರೆಯಂತಿದ್ದ ಕಾಫಿ, ಕಾಳುಮೆಣಸು ಈ ಬಾರಿಯ ಭೀಕರ ಬರಗಾಲಕ್ಕೆ ನೆಲಕಚ್ಚಿದೆ. ಬದುಕಿಗೆ ಮುಂದೇನು? ಎನ್ನುವ ಪ್ರಶ್ನೆ ರೈತರಿಗೆ ಎದುರಾಗಿದೆ. 

ಈಗಲೇ ಮಳೆ ಸುರಿದರೂ ಬಹಳಷ್ಟು ತೋಟಗಳಲ್ಲಿ ಕಾಫಿಗಿಡಗಳು ಬದುಕುಳಿಯುವ ಸ್ಥಿತಿಯಲ್ಲಿಲ್ಲ. ಬೆಂಕಿ ಬಿದ್ದು ಸುಟ್ಟುಹೋದಂತೆ ಬಿಸಿಲಿಗೆ ಇಡೀ ತೋಟಗಳೇ ಸುಟ್ಟುಹೋಗಿವೆ. ಬೇಸಿಗೆ ಯಲ್ಲಿ ಕಾಫಿ ಗಿಡಗಳಿಗೆ ನೆರಳು ಕೊಡ ಬೇಕಿದ್ದ ಸಿಲ್ವರ್‌, ಹಾಲುವಾಣ ಮರಗಳು ಬಿಸಿಲ ಹೊಡೆತಕ್ಕೆ ಎಲೆ ಉದುರಿಸಿ ಇಡೀ ತೋಟ ಬಿಸಿಲಿಗೆ ಒಡ್ಡಿ ನಿಲ್ಲಿಸಿವೆ.

ಫಸಲು ಕೊಡುತ್ತಿದ್ದ ಕಾಫಿ ಮತ್ತು ಕಾಳು ಮೆಣಸು ಬಳ್ಳಿಗಳು ಕಣ್ಣೆದುರೇ ಒಣಗುತ್ತಿದ್ದರೂ ಗಿಡಗಳಿಗೆ ನೀರುಣಿಸಲು ಕೆರೆಕಟ್ಟೆ, ಹಳ್ಳ ತೊರೆ ಗಳಲ್ಲಿ, ಕೊಳವೆ ಬಾವಿಗಳಲ್ಲಿ ನೀರಿ ಲ್ಲದೆ ಬೆಳೆಗಾರರು ಅಸಹಾಯಕರಾಗಿ ದ್ದಾರೆ. ಮಳೆ ಎಷ್ಟು ಬೇಗ ಸುರಿಯುತ್ತ ದೆಯೋ ಎಂದು ವರುಣನ ಕಡೆಗೆ ಚಾತಕ ಪಕ್ಷಿಯಂತೆ ಎದುರು ನೋಡುತ್ತಿದ್ದಾರೆ.

ಚಿಕ್ಕಮಗಳೂರು ತಾಲ್ಲೂಕಿನ ಮತ್ತಾ ವರ, ಶಿರಗುಂದ, ದುಂಬಿಗೆರೆ, ಕಂಚೇನ ಹಳ್ಳಿ, ಕೆಸವಿನಮನೆ, ವಳಗೆರೆಹಳ್ಳಿ, ಕೆ.ಆರ್‌.ಪೇಟೆ, ತಿರುಗುಣ, ಬಿಲ್ಲೇನಹಳ್ಳಿ, ಬಿಗ್ಗನಹಳ್ಳಿ, ಹಳುವಳ್ಳಿ, ಮಳಲೂರು, ಕದ್ರಿಮಿದ್ರಿ, ಮತ್ತೀಕೆರೆ, ಬಾಣಾವರ, ಗಂಜಲಗೋಡು ಭಾಗದಲ್ಲಿ ಕಾಫಿ ಗಿಡಗಳು ಚೇತರಿಸಿಕೊಳ್ಳಲಾಗದ ಮಟ್ಟದಲ್ಲಿ ಸುಟ್ಟು ಹೋಗಿವೆ.

ಮಲೆನಾಡಿನ ಸೆರಗಿನಲ್ಲಿರುವ ಬಸ್ಕಲ್‌, ಹಾಂದಿ, ಆಲ್ದೂರು ಸುತ್ತ ಮುತ್ತ ಲೂ ಕಾಫಿ ಗಿಡಗಳು ಒಣಗಿವೆ. ಬಾಬಾ ಬುಡನ್‌ಗಿರಿಗೆ ಹೋಗುವ ಮಾರ್ಗದ ಕೈಮರದ ಬಳಿ ಮತ್ತು ಮಲ್ಲೇನಹಳ್ಳಿ ಸುತ್ತಮುತ್ತಲೂ ತೋಟ ಗಳು ಒಣಗಿವೆ.

ಚಿಕ್ಕಮಗಳೂರು ತಾಲ್ಲೂಕಿಗೆ ಹೊಂದಿಕೊಂಡಿರುವ ಬೇಲೂರು ತಾಲ್ಲೂಕಿನ ಬಹುತೇಕ ಅರೆಮಲೆನಾಡು ಪ್ರದೇಶಗಳ ವ್ಯಾಪ್ತಿಯ ಕೋಟಿಗನಹಳ್ಳಿ, ಬಳ್ಳೂರು, ನವಿಲಹಳ್ಳಿ, ದಬ್ಬೆ, ಸುಗ್ಗ ಲೂರು, ಗಬ್ಬಲಗೋಡು, ಹೊಸ ಹಳ್ಳಿ, ಸಿಂಗಾಪುರ, ಐರವಳ್ಳಿ, ಮರೂರು, ಸುಗ್ಗಲೂರು, ವಾಗಿನಕೆರೆ, ಕಲ್ಲಹಳ್ಳಿ, ಅಗ್ಗಡಲು, ಸೋಮನಹಳ್ಳಿ, ಅಡಮನ ಹಳ್ಳಿ, ದೇವಲಾಪುರ, ಬಾಣ ಸವಳ್ಳಿ, ಸಿಂಗಾಪುರ, ಮತ್ತುಗದಹಾಳು, ಗೆಂಡೇ ಹಳ್ಳಿ, ಬಿರಣಗೋಡು ಭಾಗದಲ್ಲಿ ಅರೆ ಬಿಕಾ ಕಾಫಿ ಮತ್ತು ಕಾಳುಮೆಣಸು ಬೆಂಕಿ ಯಲ್ಲಿ ಬೆಂದಂತೆ  ಸುಟ್ಟುಹೋಗಿವೆ.

ಇಂತಹದೇ ಪರಿಸ್ಥಿತಿ ಅರೇಹಳ್ಳಿ ಮತ್ತು ಬಿಕ್ಕೋಡು ಭಾಗದಲ್ಲೂ ಇದೆ. ವಾರ್ಷಿಕ ಕನಿಷ್ಠ 80 ಇಂಚು ಮಳೆ ಸುರಿ ಯುತ್ತಿದ್ದ ನಾಗೇನಹಳ್ಳಿ, ಚೀಕನಹಳ್ಳಿ ಸುತ್ತಮುತ್ತಲೂ ಕಳೆದ ಮುಂಗಾರಿನಲ್ಲಿ 40 ಇಂಚು ಮಾತ್ರ ಮಳೆ ಬಂದಿದೆ. ಬೇಸಿಗೆ ತಾಪವನ್ನು ಕಾಫಿ, ಕಾಳುಮೆಣಸು ಬಳ್ಳಿ ತಡೆದುಕೊಳ್ಳುತ್ತಿಲ್ಲ.

ಮಳೆ ಬೀಳು ವುದು ವಿಳಂಬವಾದರೆ ಭಾರೀ ಪ್ರಮಾ ಣದಲ್ಲಿ ಬೆಳೆಗಾರರು ನಷ್ಟ ಅನುಭವಿ ಸುವುದು ಖಚಿತ ಎನ್ನುತ್ತಾರೆ ಕಾಫಿ ಬೆಳೆಗಾರ ನಾಗೇನಹಳ್ಳಿಯ ಬಸವೇಗೌಡ.

‘ಭತ್ತ, ರಾಗಿ, ಆಲೂಗಡ್ಡೆ, ಜೋಳ ಸೇರಿದಂತೆ ಧಾನ್ಯ ಮತ್ತು ತರಕಾರಿ ಬೆಳೆಗಳು ಬೆಲೆ ಕಳೆದುಕೊಂಡಾಗ ಅನಿ ವಾರ್ಯವಾಗಿ ಕಾಫಿ ಮತ್ತು ಕಾಳು ಮೆಣಸು ಬೆಳೆಯುವ ದುಸ್ಸಾಹಸಕ್ಕೆ ಕೈಹಾಕಬೇಕಾಯಿತು. ಒಂದು ದಶಕದಿಂದ ತಪಸ್ಸಿನಂತೆ ಮನೆಮಂದಿ ಶ್ರಮಪಟ್ಟು ಕಾಫಿ ತೋಟ ಮಾಡಿದ್ದೆವು.

ಕಳೆದ ಎರಡು ವರ್ಷಗಳಿಂದ ಸರಿಯಾಗಿ ಮಳೆ ಇಲ್ಲದೆ, ಕೆರೆಕಟ್ಟೆ, ಹಳ್ಳದಲ್ಲೂ ನೀರಿಲ್ಲ. ಕೊಳವೆಬಾವಿಗಳೂ ಬತ್ತಿವೆ. ತೋಟಕ್ಕೆ ನೀರುಣಿಸಲಾಗದೆ, ಕೆಲವರು ಕಾಫಿ, ಸಿಲ್ವರ್‌ ಗಿಡ ಕಡಿದು ಹಾಕಿದ್ದಾರೆ. ಒಂದೆರಡು ವಾರದೊಳಗೆ ಮಳೆ ಬಾರ ದಿದ್ದರೆ ಒಂದೇ ಒಂದು ತೋಟವೂ ಉಳಿಯುವುದಿಲ್ಲ’ ಎನ್ನುತ್ತಾರೆ ತಾಲ್ಲೂ ಕಿನ ಮತ್ತೀಕೆರೆಯ ಬೆಳೆಗಾರ ದಿನೇಶ್‌.

‘40 ಎಕರೆ ತೋಟದಲ್ಲಿ ಕನಿಷ್ಠ 10 ಸಾವಿರಕ್ಕೂ ಹೆಚ್ಚು ಕಾಫಿ ಗಿಡಗಳು ಸಂಪೂರ್ಣ ಬಿಸಿಲಿಗೆ ಸುಟ್ಟು ಹೋಗಿವೆ. ಕಳೆದ ಜೂನ್‌ನಿಂದಲೂ ನೀರು ಕೊಟ್ಟು ಕಾಳು ಮೆಣಸು ಬಳ್ಳಿಗಳನ್ನು ಮಾತ್ರ ಉಳಿಸಿಕೊಂಡಿದ್ದೇವೆ. ನೀರಾವರಿ ಸೌಲಭ್ಯ ಇಲ್ಲದ ಬೆಳೆಗಾರರಿಗೆ ಕಾಳುಮೆಣಸು ಬಳ್ಳಿಗಳನ್ನು ಉಳಿಸಿಕೊಳ್ಳಲು ಆಗಿಲ್ಲ. ಎನ್ನುತ್ತಾರೆ  ವಾಜುವಳ್ಳಿ ರಮೇಶ್‌.

*
‘ಒಂದೆರಡು ದಿನಗಳಲ್ಲಿ ಮಳೆ ಬಿದ್ದರೂ ತೋಟದಲ್ಲಿ ಅರ್ಧ ದಷ್ಟು ಕಾಫಿ ಗಿಡ ಉಳಿಯುವ ಸ್ಥಿತಿಯ ಲ್ಲಿಲ್ಲ. ಈ ತಿಂಗಳ ಕೊನೆವರೆಗೂ ಮಳೆ ಬೀಳದಿದ್ದರೆ  ತೋಟ ನಾಶವಾಗಲಿದೆ’.
-ರಮೇಶ್,
ಕಾಫಿ ಬೆಳೆಗಾರ, ಕಂಚೇನಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT