ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧೂಮಪಾನ ಮತ್ತು ದೃಷ್ಟಿಸಮಸ್ಯೆಗಳು

Last Updated 10 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ತಂಬಾಕು, ಧೂಮಪಾನ ಅನೇಕ ಅನಾರೋಗ್ಯ ಪರಿಣಾಮಗಳಿಗೆ ಕಾರಣವಾಗಲಿದೆ. ತಂಬಾಕು ಧೂಮಪಾನದಲ್ಲಿ ಸುಮಾರು ನಾಲ್ಕು ಸಾವಿರ ಅಂಶಗಳಿದ್ದು, ಇದರಲ್ಲಿ ಕಾರ್ಸಿನೊಜೆನ್ಸ್, ಇರಿಟಂಟ್ಸ್, ಇನ್‌ಫ್ಲೇಮಟರಿ ಏಜೆಂಟ್ಸ್, ನಿಕೊಟೈನ್, ಕಾರ್ಬನ್ ಮಾನಾಕ್ಸೈಡ್ ಮತ್ತು ಫಾರ್ಮಲ್‌ಡೆಹೈಡ್ ಸೇರಿವೆ.

ಧೂಮಪಾನ ರಕ್ತದೊತ್ತಡ ಹೆಚ್ಚಲು, ಹೃದ್ರೋಗ, ಯಕೃತ್ತು ಕ್ಯಾನ್ಸರ್ ಮತ್ತಿತರ ಸಮಸ್ಯೆಗಳಿಗೆ ಕಾರಣವಾಗಲಿದೆ. ಆದರೆ, ಈಗ ಇದರಿಂದ ದೃಷ್ಟಿಸಮಸ್ಯೆಗಳು ಕೂಡ ಹೆಚ್ಚುತ್ತಿವೆ ಎಂಬ ಅಂಶ ಬಯಲಾಗಿದೆ. ಧೂಮಪಾನ ಮಾಡುವವರಿಗೆ ಮಾತ್ರವೇ ಅಲ್ಲ; ನಿಯಮಿತವಾಗಿ ಧೂಮಪಾನದ ಪ್ರಭಾವಕ್ಕೆ ಒಳಗಾಗುವವರಿಗೂ ಈ ಸಮಸ್ಯೆ ಕಾಡಲಿದೆ.

ಧೂಮಪಾನ ಮತ್ತು ದೃಷ್ಟಿ ಸಮಸ್ಯೆ: ಧೂಮಪಾನದಿಂದ ಕಣ್ಣಿನಲ್ಲಿ ಕ್ಯಾಟರಾಕ್ಟ್ ರೂಪುಗೊಳ್ಳುವ ಸಂಭವ ಹೆಚ್ಚಿರುತ್ತದೆ. ಇದು, ಪ್ರಕೃತಿದತ್ತವಾದ ದೃಷ್ಟಿಯನ್ನು ಮಂಜಾಗಿಸುತ್ತದೆ. ಅಧ್ಯಯನದ ಅನುಸಾರ ಕ್ಯಾಟರಾಕ್ಟ್ ಪ್ರಮಾಣ ಧೂಮಪಾನಿಗಳಲ್ಲಿ ಹೆಚ್ಚಿದೆ. ಧೂಮಪಾನ ಮಾಡಿದಷ್ಟು ಈ ಸಮಸ್ಯೆಯ ಸಾಧ್ಯತೆಗಳು ಹೆಚ್ಚು.

ಧೂಮಪಾನ ಮತ್ತು ಎಎಂಡಿ: ವಯೋ ಸಂಬಂಧಿ ಮ್ಯಾಕುಲರ್ ಡಿಜನರೇಷನ್ (ಎಎಂಡಿ) ರೆಟಿನಾದ ಕೇಂದ್ರಬಿಂದುವಿನ ಮೇಲೆ ಪರಿಣಾಮ ಬೀರಲಿದೆ.  ಸ್ಪಷ್ಟ ದೃಷ್ಟಿ, ಕೇಂದ್ರ ದೃಷ್ಟಿಕೋನ ಮೂಡಲು ರೆಟಿನಾ ಮುಖ್ಯಪಾತ್ರವನ್ನು ವಹಿಸುತ್ತದೆ. ಧೂಮಪಾನಿಗಳಲ್ಲದವರಿಗೆ ಹೋಲಿಕೆ ಮಾಡಿದಲ್ಲಿ  ಧೂಮಪಾನಿಗಳಿಗೆ ಎಎಂಡಿ ಮೂಡುವ ಸಾಧ್ಯತೆಗಳು ಕಿರುವಯಸ್ಸಿಗೆ ಹೆಚ್ಚಿರುತ್ತವೆ.

ಧೂಮಪಾನ ಮತ್ತು ಮಧುಮೇಹ: ಧೂಮಪಾನವು ಮಧುಮೇಹ ಸಂಬಂಧಿತ ಸಮಸ್ಯೆಗಳು ಹೆಚ್ಚಲು ಕಾರಣವಾಗುತ್ತವೆ. ಥೈರಾಯ್ಡ್ ಸಮಸ್ಯೆ ಇರುವ ರೋಗಿಗಳಿಗೆ ಕಣ್ಣಿನ ಸಮಸ್ಯೆಯೂ ಇರುತ್ತದೆ. ಧೂಮಪಾನ ಇದರ ಸೂಚನೆಯನ್ನು ನೀಡಲಿದೆ. ಅನೇಕ ಸಂದರ್ಭಗಳಲ್ಲಿ ದೃಷ್ಟಿಯ ವಿಷಯದಲ್ಲಿ ರಾಜಿ ಮಾಡಿಕೊಳ್ಳಬೇಕಾಗುತ್ತದೆ.

ಧೂಮಪಾನ ಮತ್ತು ಆಪ್ಟಿಕ್ ನರ್ವ್: ಧೂಮಪಾನದಿಂದ ಕಣ್ಣಿನ ಭಾಗಕ್ಕೆ ರಕ್ತದ ಚಲನೆ ಕುಗ್ಗಲಿದೆ. ಇದರಿಂದ ನೈಕೋಟಿನ್ ಪ್ರಮಾಣ ಕಡಿಮೆಯಾಗಲಿದೆ. ನರವ್ಯವಸ್ಥೆಯ ಮೇಲೂ ಪರಿಣಾಮ ಬೀರಲಿದೆ. ಇದರಿಂದ ಶಾಶ್ವತವಾಗಿ ಅಂಧತ್ವ ಮೂಡಬಹುದು.  ಧೂಮಪಾನಿಯೇತರಿಗೆ ಹೋಲಿಸಿದಲ್ಲಿ ಧೂಮಪಾನಿಗಳಲ್ಲಿ ಈ ಸಮಸ್ಯೆ ಕಿರುವಯಸ್ಸಿನಲ್ಲಿಯೇ ಬರಲಿದೆ.

ಧೂಮಪಾನ, ಕುಡಿತದ ಅಭ್ಯಾಸದೊಂದಿಗೆ ಆಹಾರಸೇವನೆಯ ಪ್ರಮಾಣವೂ ಕಡಿಮೆಯಾದರೆ ದೃಷ್ಟಿಶಕ್ತಿ ಕುಗ್ಗುವ ಸಾಧ್ಯತೆ ಹೆಚ್ಚು. ಇದನ್ನು ವೈದ್ಯಕೀಯ ಭಾಷೆಯಲ್ಲಿ (ಟೊಬ್ಯೊಕೊ ಅಲ್ಕೊಹಾಲ್ ಅಂಬ್ಲಿಯೊಪಿಯ) ಎಂದು ಗುರುತಿಸಲಿದ್ದು, ಟಾಕ್ಸಿನ್ ಮತ್ತು ನ್ಯೂಟ್ರಿಷನಲ್ ಕೊರತೆಯಿಂದ ಮೂಡಲಿದೆ.
ಧೂಮಪಾನದಿಂದ ಗ್ಲುಕೊಮಿಯಾ (ಕಣ್ಣಿನ ಮೇಲೆ ಹೆಚ್ಚಿನ ಒತ್ತಡ ಬೀಳುವುದು) ಮತ್ತು ಯವಿಟಿಸ್ (ಕಣ್ಣಿನ ಮಧ್ಯಭಾಗದಲ್ಲಿ ಉರಿ ಕಾಣಿಸಿಕೊಳ್ಳುವುದು) ಸಮಸ್ಯೆ ಬರಲಿದೆ.

ತಂಬಾಕು ಧೂಮಪಾನ ಸೇವನೆಯಿಂದ ಕಣ್ಣಿಗೆ ಇರಿಸು–ಮುರಿಸಾಗಲಿದ್ದು, ಧೂಮಪಾನದ ಹೊಗೆಯನ್ನು ಸೇವಿಸಿದರೂ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಧೂಮಪಾನಿಗಳಲ್ಲಿ ಕಣ್ಣು ಒಣಗುವ ಸಾಧ್ಯತೆಗಳೂ ಹೆಚ್ಚು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT