ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

4 ತಿಂಗಳಾದರೂ ಕ್ರಮ ಜರುಗಿಸದ ಕೇಂದ್ರ

ಫೇಸ್‌ಬುಕ್‌ ಪುಟಗಳಲ್ಲಿ ಕೋಮುದ್ವೇಷ ಪ್ರಸಾರ
Last Updated 11 ಮಾರ್ಚ್ 2017, 6:42 IST
ಅಕ್ಷರ ಗಾತ್ರ
ಮಂಗಳೂರು: ಕಟೀಲು ದುರ್ಗಾಪರ ಮೇಶ್ವರಿ ದೇವಿಯ ವಿರುದ್ಧ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಅವಹೇಳನ ಮಾಡಲು ಬಳಸಿದ ಪುಟಗಳನ್ನು ಸ್ಥಗಿತಗೊಳಿಸುವಂತೆ ನ್ಯಾಯಾಲಯದ ಆದೇಶದ ಸಹಿತ ನಗರ ಪೊಲೀಸರು ಸಲ್ಲಿಸಿದ್ದ ಪ್ರಸ್ತಾವಕ್ಕೆ ಕೇಂದ್ರ ಮಾಹಿತಿ ತಂತ್ರಜ್ಞಾನ ಇಲಾಖೆ ನಾಲ್ಕು ತಿಂಗಳಾ ದರೂ ಸ್ಪಂದಿಸಿಲ್ಲ!
 
ಆ ಪ್ರಕರಣದಲ್ಲಿ ಸ್ಥಗಿತಕ್ಕೆ ಶಿಫಾರ ಸುಗೊಂಡಿದ್ದ ಕೆಲವು ಫೇಸ್‌ಬುಕ್‌ ಪುಟಗಳಲ್ಲಿ ಈಗ ಝೀ ಕನ್ನಡ ವಾಹಿನಿಯ ಸರಿಗಮಪ ಸಂಗೀತ ಸ್ಪರ್ಧೆಯಲ್ಲಿ ಹಾಡುತ್ತಿರುವ ಮುಸ್ಲಿಂ ಸಮುದಾಯದ ಗಾಯಕಿ ಸುಹಾನಾ ಸೈಯ್ಯದ್‌ ವಿರುದ್ಧ ಬೆದರಿಕೆ ದಾಟಿಯ ಸಂದೇಶಗಳನ್ನು ಪ್ರಕಟಿಸಲಾಗುತ್ತಿದೆ. ಈ ಬೆಳವಣಿಗೆ ಕೇಂ ದ್ರ ಮಾಹಿತಿ ತಂತ್ರಜ್ಞಾನದ ವಿಳಂಬ ನೀತಿಯ ಕುರಿತು ಪೊಲೀಸ್‌ ಅಧಿಕಾ ರಿಗಳ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
 
ಫೇಸ್‌ಬುಕ್‌ನಲ್ಲಿ ಕಟೀಲು ದೇವಿಯ ಅವಹೇಳನ ಮತ್ತು ಕೋಮುದ್ವೇಷದ ಬರಹಗಳನ್ನು ಪ್ರಕಟಿಸುತ್ತಿದ್ದ ಆರೋ ಪದ ಮೇಲೆ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣದಲ್ಲಿ ಹತ್ತು ಫೇಸ್‌ಬುಕ್‌ ಪುಟಗಳ ಸ್ಥಗಿತಕ್ಕೆ ಆದೇಶ ನೀಡುವಂತೆ ಪೊಲೀಸರು ನಗರದ ಎರಡನೇ ಜೆಎಂ ಎಫ್‌ಸಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ ಆದೇಶವೊಂದನ್ನು ನೀಡಿದ್ದ ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವಾಲಯದ ಸೈಬರ್‌ ಅಪರಾಧ ನಿಯಂತ್ರಣ ವಿಭಾಗದ ಅಧಿಸೂಚಿತ ಅಧಿಕಾರಿಗೆ ಪ್ರಸ್ತಾವ ಸಲ್ಲಿಸುವಂತೆ ನಿರ್ದೇಶಿಸಿತ್ತು.
 
ಜಬ್ಬಾರ್‌ ಬಿಸಿ ರೋಟ್‌, ಜಬ್ಬಾರ್‌ ಕುದ್ರೋಳಿ, ಮಝೀನ್‌ ಮಂಗಳೂರು, ಶಾಫಿ ಬಿಎಂ, ಸೂರಜ್‌ ಗಾಣಿಗ ಮಿತ್ತೂರು, ಮುಸ್ಲಿಂ ಯುವಸೇನೆ, ಮಂಗಳೂರು ಮುಸ್ಲಿಮ್ಸ್‌, ನಾನೊಬ್ಬ ಕಟ್ಟಾ ಬ್ಯಾರಿ, ಮೈಕಾಲ್ತೊ ಬ್ಯಾರಿ ಮತ್ತು ನಾನೊಬ್ಬ ಹಿಂದೂ ಎಂಬ ಹೆಸರಿನ ಫೇಸ್‌ಬುಕ್‌ ಪುಟಗಳಲ್ಲಿ ಮತೀಯ ದ್ವೇಷ ಬಿತ್ತುವುದು ಮತ್ತು ಅವಹೇಳ ನಕ್ಕೆ ಕಾರಣವಾಗುವಂತಹ ಬರಹಗ ಳನ್ನು ಪ್ರಕಟಿಸಿರುವ ಕುರಿತು ಪೊಲೀಸರು ದಾಖಲೆ ಸಂಗ್ರಹಿಸಿದ್ದರು.
 
ಈ ಎಲ್ಲಾ ಪುಟಗಳನ್ನು ಸ್ಥಗಿತಗೊಳಿಸುವಂತೆ ನ್ಯಾ ಯಾಲಯ ನೀಡಿರುವ ಆದೇಶವನ್ನು ಅನುಷ್ಠಾನಕ್ಕೆ ತರುವಂತೆ ನಗರ ಪೊಲೀಸ್‌ ಕಮಿಷನರ್‌ ಎಂ.ಚಂದ್ರಶೇಖರ್‌ ಅವರು ಮಾಹಿತಿ ತಂತ್ರಜ್ಞಾನ ಸಚಿವಾಲ ಯದ ಸೈಬರ್‌ ಕಾನೂನು ಗುಂಪು ಸಂಯೋಜ ನಾಧಿಕಾರಿ ಡಾ.ಬಿ.ಕೆ.ಮೂರ್ತಿ ಅವರಿಗೆ 2016ರ ಅಕ್ಟೋಬರ್‌ನಲ್ಲಿ ಪತ್ರ ಬರೆದಿದ್ದರು.
 
ಗಾಯಕಿ ವಿರುದ್ಧ ದ್ವೇಷ
‘ಕಟೀಲು ಪ್ರಕರಣದಲ್ಲಿ ಸ್ಥಗಿತಕ್ಕೆ ಶಿಫಾರಸು ಮಾಡಿದ್ದ ಕೆಲವು ಫೇಸ್‌ಬುಕ್‌ ಪುಟಗಳಲ್ಲಿ ಗಾಯಕಿ ಸುಹಾನಾ ಅವರಿಗೆ ಬೆದರಿಕೆ ಒಡ್ಡುವಂತಹ ಬರಹಗಳನ್ನು ಪ್ರಕಟಿಸಿರುವ ಮಾಹಿತಿ ಲಭ್ಯವಾಗಿದೆ. ಸುಹಾನಾ ಮತ್ತು ಅವರ ಕುಟುಂಬವನ್ನು ಅವಹೇಳನ ಮಾಡುವಂತಹ ಬರಹಗಳನ್ನೂ ಕೆಲವು ಪುಟಗಳಲ್ಲಿ ಪ್ರಕಟಿಸಲಾಗಿದೆ.

ಕಟೀಲು ಪ್ರಕರಣದಲ್ಲಿ ನ್ಯಾಯಾಲಯದ ಆದೇಶವನ್ನು ಮಾಹಿತಿ ತಂತ್ರಜ್ಞಾನ ಇಲಾಖೆ ಜಾರಿಗೊಳಿಸಿದ್ದರೆ ಪುನಃ ಅದೇ ಬಗೆಯ ಚಟುವಟಿಕೆಯಲ್ಲಿ ಪಾಲ್ಗೊಳ್ಳಲು ಅವಕಾಶ ದೊರೆಯುತ್ತಿರಲಿಲ್ಲ’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT