ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತ್ಯೇಕ ಅನುದಾನ ಬಿಡುಗಡೆಗೆ ಆಗ್ರಹ

ಸಿಂದಗಿ; ಕರವೇ ಕಾರ್ಯಕರ್ತರಿಂದ ಅರೆಬೆತ್ತಲೆ ಪ್ರತಿಭಟನೆ, ಬಾಯಿ ಬಡಿದುಕೊಂಡು ಆಕ್ರೋಶ
Last Updated 11 ಮಾರ್ಚ್ 2017, 10:49 IST
ಅಕ್ಷರ ಗಾತ್ರ
ಸಿಂದಗಿ: ಉತ್ತರಕ ರ್ನಾಟಕ ಪ್ರದೇಶಕ್ಕೆ ಪ್ರತ್ಯೇಕ ಹಾಗೂ ವಿಶೇಷ ಅನುದಾನ­ವನ್ನು ರಾಜ್ಯ ಸರ್ಕಾರ ಮುಂಬರುವ ಬಜೆಟ್ ನಲ್ಲಿ ಕಾಯ್ದಿರಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಕಾರ್ಯಕರ್ತರು ಶುಕ್ರವಾರ ಸಿಂದಗಿ ನಗರದ ಮಿನಿ­ವಿಧಾನ­ಸೌಧ ಎದುರು ಅರೆಬೆತ್ತಲೆ   ಪ್ರತಿಭಟನೆ ನಡೆಸಿದರು.
 
ಇಲ್ಲಿಯ ಗೋಲಗೇರಿ ನಾಕಾ ರಸ್ತೆಯಿಂದ ನೂರಾರು ಕಾರ್ಯಕರ್ತರ­ನ್ನೊಳಗೊಂಡು ಪ್ರತಿಭಟನೆ ಪ್ರಾರಂಭಗೊಂಡಿತು. ಮೆರವಣಿಗೆ ವಿವೇಕಾನಂದ ವೃತ್ತದ ಮೂಲಕ ಕಾಲೇಜು ರಸ್ತೆಯಿಂದ ನೇರ­ವಾಗಿ ಮಿನಿವಿಧಾನಸೌಧ ತಲುಪಿತು. ವಿಧಾ­ನಸೌಧದ ಎದುರು ಕೆಲ ಕಾಲ ಕಾರ್ಯಕರ್ತರು ಅರೆಬೆತ್ತಲೆ ಧರಣಿ ಸತ್ಯಾಗ್ರಹ ಕೈಗೊಂಡು ರಾಜ್ಯ ಸರ್ಕಾರದ ವಿರುದ್ಧ ಹಾಗೂ ಮುಖ್ಯಮಂತ್ರಿ ಸಿದ್ದ­ರಾಮಯ್ಯ ವಿರುದ್ಧ  ಆಕ್ರೋಶ ವ್ಯಕ್ತಪಡಿಸಿದರು. 
 
ಸಿದ್ದರಾಮಯ್ಯ ನಿದ್ದೆರಾ­ಮಯ್ಯ ಆಗಿದ್ದು ಸದಾ ಕುಂಭಕರ್ಣನಂತೆ ನಿದ್ರಾ ಲೋಕಕ್ಕೆ ಹೋಗಿರುತ್ತಾರೆ. ಅಂತೆಯೇ ರಾಜ್ಯ ಅಭಿವೃದ್ಧಿ ದೃಷ್ಟಿಯಿಂದ ಶೂನ್ಯ ಸಾಧನೆ ಹೊಂದಿದೆ ಎಂದು ಟೀಕಿಸಿದರು.
 
ಅಖಂಡ ಕರ್ನಾಟಕದಲ್ಲಿ ಉತ್ತರ­ಕರ್ನಾಟಕ ಅತ್ಯಂತ ಹಿಂದುಳಿದ ಪ್ರದೇಶ ಎಂಬ ಹಣೆಪಟ್ಟಿ ಕಟ್ಟಿಕೊಂಡಿದೆ. ಕಳೆದ ಮೂರು ವರ್ಷಗಳಿಂದ ರಾಜ್ಯ ಸರ್ಕಾರ ಬಜೆಟ್ ನಲ್ಲಿ ಹಿಂದುಳಿದ ಉತ್ತರ­ಕರ್ನಾಟಕ ಪ್ರದೇಶಕ್ಕೆ ಅನ್ಯಾಯ ಮಾಡುತ್ತಲೇ ಬಂದಿದೆ. ಹೈದರಾಬಾದ್‌ aಕರ್ನಾಟಕ ಪ್ರದೇಶಕ್ಕೆ  ಈಗಾಗಲೇ ಪ್ರತ್ಯೇಕ, ವಿಶೇಷ ಅನುದಾನ ಬಿಡುಗಡೆ ಮಾಡಿದಂತೆ ಉತ್ತರಕರ್ನಾಟಕ ಪ್ರದೇ­ಶದ ಅಭಿವೃದ್ಧಿ ಗೂ ಪ್ರತ್ಯೇಕ ಅನುದಾನ ಬಿಡುಗಡೆ ಮಾಡಬೇಕು ಎಂದು ಅವರು ಆಗ್ರಹಿಸಿದರು.
 
ಅದರಂತೆ ರೈತರ ಸಾಲ ಮನ್ನಾ ಮಾಡದೇ ಹೋದಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಮುಂದುವರಿಯುತ್ತಲೇ ಇರುತ್ತವೆ ಎಂದು ಎಚ್ಚರಿಕೆ ನೀಡಿದರು.
ಸುಡು, ಸುಡು, ಪ್ರಖರ ಬಿಸಿಲಲ್ಲಿ ಕಾರ್ಯಕರ್ತರು ಮೈ ಮೇಲಿದ್ದ ಬಟ್ಟೆಗಳನ್ನು ತೆಗೆದು ಅರೆಬೆತ್ತಲೆ­ಯೊಂದಿಗೆ ಬಾಯಿ ಬಡಿದುಕೊಂಡು ಪ್ರತಿಭಟನೆ ನಡೆಯಿಸಿದರು. 
 
ತಹಶೀಲ್ದಾರ ಗ್ರೇಡ್–2 ಎಂ.ಎಸ್.­ಅರಕೇರಿ ಅವರಿಗೆ ಪ್ರತಿಭಟನಕಾರರ ಪರವಾಗಿ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಸಿ.ಮುಲ್ಲಾ ಮನವಿ ಪತ್ರ ಸಲ್ಲಿಸಿದರು. ಕರವೇ ಉತ್ತರಕರ್ನಾಟಕ ವಲಯ ಅಧ್ಯಕ್ಷ ಸಂತೋಷ ಪಾಟೀಲ ಡಂಬಳ, ಜಿಲ್ಲಾ ಘಟಕದ ಅಧ್ಯಕ್ಷ ಎಂ.ಸಿ.ಮುಲ್ಲಾ ವಿಜಯಪುರ, ವಿದ್ಯಾರ್ಥಿ ಘಟಕದ ಜಿಲ್ಲಾ ಅಧ್ಯಕ್ಷ ಸಂದೀಪ ಚೌರ, ತಾಲ್ಲೂಕು ಅಧ್ಯಕ್ಷ ಚೇತನ ರಾಂಪುರ, ಜಿಲ್ಲಾ ಕಾರ್ಯದರ್ಶಿ ರಮೇಶ ಮಸಬಿನಾಳ ದೇವರಹಿಪ್ಪರಗಿ, ರಾಜೂ ಮದರಖಾನ, ಸಾಹೇಬಣ್ಣ ಮಡಿವಾಳr, ಮಹಾದೇವ ರಾವಜಿ, ರವಿ ನಾಯ್ಕೋಡಿ, ರಮೇಶ ಚಿನ್ನಾಕಾರ, ಗೊಲ್ಲಾಳ ಬ್ಯಾಕೋಡ, ರವಿಕಾಂತ ಬಿರಾದಾರ, ಶರಣು ಕಕ್ಕಳಮೇಲಿ, ಮುತ್ತು ಹಿಪ್ಪರಗಿ, ಮಹಾಂತೇಶ ಪರಗೊಂಡ, ಸಂತೋಷ ಕ್ಷತ್ರಿ, ಮಂಜು ನಾಯ್ಕೋಡಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT