ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸೌಹಾರ್ದದಿಂದ ಹಬ್ಬದ ಸಂಭ್ರಮ ಹೆಚ್ಚು’

ಹುಬ್ಬಳ್ಳಿ– ಧಾರವಾಡ ಪೊಲೀಸ್ ಕಮಿಷನರೇಟ್‌ನಿಂದ ಹೋಳಿ ಅಂಗವಾಗಿ ಸೌಹಾರ್ದ ಸಭೆ ಆಯೋಜನೆ
Last Updated 11 ಮಾರ್ಚ್ 2017, 10:53 IST
ಅಕ್ಷರ ಗಾತ್ರ
ಹುಬ್ಬಳ್ಳಿ: ‘ಎಲ್ಲ ಧರ್ಮೀಯರೂ ಸೌಹಾರ್ದ­ದಿಂದ ಹಬ್ಬವನ್ನು ಆಚರಣೆ ಮಾಡಿದರೆ ಅದರ ಸಂಭ್ರಮ ಇಮ್ಮಡಿಸುತ್ತದೆ. ಅದೇ ಸಂಗತಿಯನ್ನು ಗಮನದಲ್ಲಿ ಇಟ್ಟುಕೊಂಡು ಹೋಳಿ ಹಬ್ಬ ಆಚರಿಸಬೇಕು’ ಎಂದು ಮೂರು ಸಾವಿರ ಮಠದ ಗುರುಸಿದ್ಧ ರಾಜ­ಯೋಗೀಂದ್ರ ಸ್ವಾಮೀಜಿ ಹೇಳಿದರು.
 
ಹುಬ್ಬಳ್ಳಿ– ಧಾರವಾಡ ಪೊಲೀಸ್‌ ಕಮಿಷನರೇಟ್‌ ವತಿಯಿಂದ ಹೋಳಿ ಹಬ್ಬದ ಅಂಗವಾಗಿ ಶುಕ್ರವಾರ ಕಾರ­ವಾರ ರಸ್ತೆಯ ಹಳೆ ಸಿಎಆರ್‌ ಮೈದಾ­ನದಲ್ಲಿ ನಡೆದ ಸೌಹಾರ್ದ ಸಭೆಯ ಸಾನ್ನಿಧ್ಯ ವಹಿಸಿ ಅವರು ಮಾತ­ನಾಡಿದರು.
 
‘ಒಂದು ಧರ್ಮೀಯರು ತಮ್ಮ ಹಬ್ಬವನ್ನು ಆಚರಿಸುವಾಗ ಅನ್ಯ ಧರ್ಮೀಯರು ಅದಕ್ಕೆ ಸಹಕಾರ ನೀಡ­ಬೇಕು. ಭಾರತದಂತಹ ಬಹು ವೈವಿಧ್ಯ­ಮಯ ದೇಶದಲ್ಲಿ ಇದು ಅಗತ್ಯ’ ಎಂದರು.
 
ಮೇಯರ್‌ ಡಿ.ಕೆ. ಚವ್ಹಾಣ ಮಾತ­ನಾಡಿ, ‘ಇಷ್ಟು ವರ್ಷಗಳಿಂದ ಅದ್ಧೂರಿ­­ಯಾಗಿ ಹೋಳಿ ಹಬ್ಬ ಆಚರಿಸುತ್ತಾ ಬಂದರೂ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ. ಮುಂದೆಯೂ ಇದನ್ನೇ ಕಾಯ್ದುಕೊಂಡು ಹೋಗಬೇಕು. ಬಣ್ಣ ಆಡುವಾಗ ಹೆಚ್ಚು ನೀರಿನ ಅವಶ್ಯಕತೆ ಇದ್ದು, ಅಗತ್ಯ­ವಿರುವಷ್ಟು ನೀರು ಪೂರೈಸಲು ಕ್ರಮ ಕೈಗೊಳ್ಳುವಂತೆ ಪಾಲಿಕೆ ಆಯುಕ್ತರಿಗೆ ಸೂಚನೆ ನೀಡಿದ್ದೇನೆ’ ಎಂದರು.
 
ಜಿಲ್ಲಾಧಿಕಾರಿ ಎಸ್.ಬಿ. ಬೊಮ್ಮನ­ಹಳ್ಳಿ, ‘ಇದೀಗ ಪಿಯುಸಿ ಪರೀಕ್ಷೆಗಳು ಬಂದಿದ್ದು, ಮಕ್ಕಳಿಗೆ ಈ ಸಮಯ ಅತ್ಯಂತ ಅಮೂಲ್ಯವಾದುದು. ಆದ್ದ­ರಿಂದ ಅವರ ಓದಿಗೆ ಅಡ್ಡಿಯಾಗದಂತೆ ಹಲಗೆ ಬಾರಿಸಿ, ಬಣ್ಣ ಆಡುವ ಸಂಭ್ರಮ ಮುಗಿಸಬೇಕು. ಯಾವುದೇ ಅಹಿತಕರ ಘಟನೆ ನಡೆಯದಂತೆ ಸೂಕ್ತ ವ್ಯವಸ್ಥೆ ಮಾಡಿ­ಕೊಳ್ಳಲಾಗಿದೆ. ಜಿಲ್ಲಾಡಳಿತ ನಿಮ್ಮ ಜೊತೆಗಿರುತ್ತದೆ’ ಎಂದು ಹೇಳಿದರು.
 
ಉಪಮೇಯರ್‌ ಲಕ್ಷ್ಮಿಬಾಯಿ ಬಿಜ­ವಾಡ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ಸದಾನಂದ ಡಂಗನವರ, ಮಾಜಿ ಶಾಸಕ ವೀರ­-ಭದ್ರಪ್ಪ ಹಾಲ­ಹರವಿ, ಮಹೇಶ ಟೆಂಗಿನಕಾಯಿ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT