ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಬೇಡ್ಕರ್‌ ವ್ಯಾಸಂಗ ಕ್ರಮ ಅನುಸರಿಸಿ

ಹುಲಕೋಟಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ವಿಚಾರ ಸಂಕಿರಣ; ವಿದ್ಯಾರ್ಥಿಗಳಿಗೆ ಜಕ್ಕಪ್ಪನವರ ಸಲಹೆ
Last Updated 11 ಮಾರ್ಚ್ 2017, 11:16 IST
ಅಕ್ಷರ ಗಾತ್ರ
ಗದಗ: ವಿದೇಶ ವ್ಯಾಸಂಗ ಸಂದರ್ಭದಲ್ಲಿ ಹೆಚ್ಚಿನ ಸಾಧನೆ ಮಾಡಬೇಕೆನ್ನುವ ಛಲದಿಂದ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಎಂಟು ವರ್ಷಗಳಲ್ಲಿ ಕಲಿಯುವ ಸ್ನಾತ್ತಕೋತ್ತರ ಶಿಕ್ಷಣವನ್ನು ಕೇವಲ ಎರಡು ವರ್ಷ ಮೂರು ತಿಂಗಳಲ್ಲಿ ಪೂರ್ಣಗೊಳಿಸಿದ ಡಾ.ಬಿ.ಆರ್. ಅಂಬೇಡ್ಕರ್‌ ಅವರ ಸಾಧನೆ ಎಲ್ಲ ಯುವ ಜನರಿಗೆ ಮಾದರಿ ಎಂದು ಕೇಂದ್ರ ಸರ್ಕಾರದ ಸಾಮಾಜಿಕ ಸಬಲೀಕರಣ ಇಲಾಖೆ, ಡಾ.ಬಿ.ಆರ್. ಅಂಬೇಡ್ಕರ್‌ ಪ್ರತಿಷ್ಠಾನದ ಮಾಜಿ ಅಧ್ಯಕ್ಷ ಎಫ್.ಎ.ಜಕ್ಕಪ್ಪನವರ ಹೇಳಿದರು. 
 
ತಾಲ್ಲೂಕಿನ ಹುಲಕೋಟಿಯ ಆರ್‌ಟಿಇ ಸಮಿತಿಯ ರೂರಲ್ ಎಂಜಿನಿಯರಿಂಗ ಕಾಲೇಜಿನ ಸಹಯೋಗದಲ್ಲಿ ಜಿಲ್ಲಾಡ ಳಿತ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಡಾ.ಬಿ.ಆರ್. ಅಂಬೇಡ್ಕರವರ 125ನೇ ವರ್ಷಾಚರಣೆ ಅಂಗವಾಗಿ ಏರ್ಪಡಿಸಿದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
 
ಸ್ವಾತಂತ್ರ್ಯ ಪೂರ್ವ ಭಾರತ ಅನೇಕ ರಾಜ ವಂಶಗಳ ಹಾಗೂ ಬ್ರಿಟಿಷರ ಆಳ್ವಿಕೆಯಲ್ಲಿತ್ತು ಅದರಲ್ಲಿ ಕೊಲ್ಲಾಪುರದ ಶಾಹು ಹಾಗೂ ಬರೋಡದ ರಾಜರು ಅಸ್ಪೃಶ್ಯತೆ ನಿವಾರಣೆಗೆ ಉಪಕ್ರಮ ಆರಂಭಿಸಿದರು. ಆ ಸಂದರ್ಭದಲ್ಲಿ ಅಂಬೇಡ್ಕರ್ ಅವರ ವಿದೇಶ ವ್ಯಾಸಂಗಕ್ಕೆ ಬರೋಡಾದ ರಾಜ ಆಸಕ್ತಿ ವಹಿಸಿ ಸಹಾಯ ಕಲ್ಪಿಸಿದ್ದು ವಿಶೇಷವಾಗಿತ್ತು.
 
ನನ್ನ ದೇಶಕ್ಕೆ ಸ್ವಾತಂತ್ರ್ಯ ಜತೆಗೆ ನನಗೂ ಸ್ವಾತಂತ್ರ್ಯ ಬರಬೇಕು ಎನ್ನುವ ವಿಚಾರಧಾರೆ ಪ್ರತಿಪಾದಿಸಿದ ಡಾ.ಬಿ.ಆರ್.ಅಂಬೇಡ್ಕರ್‌ ಅವರು  ಕುಡಿಯುವ ನೀರು, ದೇಗುಲ ಪ್ರವೇಶ ಮುಂತಾದ ಸಹಜ ವಿಷಯಗಳಲ್ಲಿ ಸರ್ವರಿಗೂ ಅವಕಾಶ ಇರಬೇಕು ಎನ್ನುವ ಆಶಯದೊಂದಿಗೆ ತಮ್ಮ ಹೋರಾಟ ಆರಂಭಿಸಿದರು.
 
ನಂತರ ಸ್ವಾತಂತ್ರ್ಯ ಪಡೆದ ಭಾರತಕ್ಕೆ ಉತ್ತಮ ಆಡಳಿತ ವ್ಯವಸ್ಥೆ ನೀಡಬಹುದಾದ ಸಂವಿಧಾನ ರೂಪಿಸುವಲ್ಲಿ ನಿರ್ಣಾಯಕ ಪಾತ್ರಧಾರಿಯಾಗುವ ಮೂಲಕ ಇಡೀ ದೇಶ ಅಭಿವೃದ್ಧಿಯತ್ತ ಹೆಜ್ಜೆ ಹಾಕಲು ಕಾರಣರಾದರು. 
 
ವಿದ್ಯೆ, ಪ್ರಾವಿಣ್ಯತೆ, ಸ್ವಂತಿಕೆಯು ಜತೆಗೆ ಸಮಾಜದ ಅಸ್ತಿತ್ವ ರೂಪಿಸಲು ಸಹಾಯಕವಾಗಬೇಕು. ದೇಶದ ವೈವಿಧ್ಯ ದಿಂದಾಗಿ ಇರುವ ಹಲವಾರು ಸಮಸ್ಯೆಗಳಿಗೆ ಉತ್ತರ ಹೊಂದಿದ್ದ ಅಂಬೇಡ್ಕರ ಪ್ರಧಾನಿ ಪಟ್ಟಕ್ಕಿಂತ ದೇಶದ ಹಿತಾಸಕ್ತಿ ಮುಖ್ಯ ಎಂದಿದ್ದರು. ಉತ್ತಮ ಭಾರತದ ಆಶಯ ಹೊಂದಿದ್ದರು. ಇಂತಹ ಮಹ ನೀಯ ಹಾಗೂ ಭಾರತದ ನಿಜವಾದ ಇತಿಹಾಸದ ಕುರಿತು ಈ ತಲೆಮಾರು ಹೆಚ್ಚಿನ ಅರಿವು ಹೊಂದಿರಬೇಕು ಎಂದು ಜಕ್ಕಪ್ಪನವರ ಹೇಳಿದರು. 
 
ವಿಚಾರ ಸಂಕೀರಣ ಉದ್ಘಾಟಿಸಿದ ರೂರಲ್ಎಂಜಿನಿಯರಿಂಗ್‌  ಕಾಲೇಜಿನ ಪ್ರಾಚಾರ್ಯ ಡಾ.ವಿ.ಎಂ.ಪಾಟೀಲ ಮಾತ ನಾಡಿ, ವೈವಿಧ್ಯಮಯ ಜನ, ಸಂಸ್ಕೃತಿ, ಭಾಷೆಯ ಭಾರತಕ್ಕೆ ಉತ್ತಮ ಆಡಳಿತಾ ತ್ಮಕ ಸಂವಿಧಾನ ಒದಗಿಸುವಲ್ಲಿ ಪ್ರಮುಖ ಪಾತ್ರವಹಿಸಿದ ಡಾ.ಬಿ.ಆರ್.ಅಂಬೇಡ್ಕರ ವ್ಯಾಸಂಗ ಸಾಧನೆ ಪ್ರತಿ ವಿಧ್ಯಾರ್ಥಿಗೂ ಪ್ರೇರಣೆಯಾಗಿದೆ ಎಂದರು.
 
ವಿದ್ಯಾರ್ಥಿಗಳೊಂದಿಗೆ ಸಂವಾದ: ಅತ್ಯಂತ ಕಿರುವಯಸ್ಸಿನಲ್ಲಿ 3ಡಿ ತಂತ್ರ ಜ್ಞಾನ ಬಳಸಿ ಕ್ಷಣಾರ್ಧದಲ್ಲಿ ರೇಖೆಗಳ ಆಧಾರದಲ್ಲಿ ನಿರ್ಮಾಣಗೊಳ್ಳಬೇಕಾದ ಆಕೃತಿಯ ಚಿತ್ರಣ ಮುಂದಿಡುವ ಸಾಫ್ಟ ವೇರ್ ಅಭಿವೃದ್ಧಿಪಡಿಸಿರುವ ಸ್ನ್ಯಾಪ್ ಟ್ರೂಡ್ ಸಂಸ್ಥೆಯನ್ನು ಸ್ಥಾಪಿಸಿ ಅದರ ಸಿಇಓ ಆಗಿರುವ ಅಲ್ತಾಫ್ ಗನೀಹಾರ ಎಂಜಿನಿಯರಿಂಗ್‌ ವಿಧ್ಯಾರ್ಥಿಗಳ ವೃತ್ತಿಯಲ್ಲಿ ಉಪಯುಕ್ತವಾಗುವ ಈ ವಿಷಯದ ಬಗ್ಗೆ ಹಾಗೂ ಅದನ್ನು ಸಾಧಿಸುವ ನಿಟ್ಟಿನಲ್ಲಿ ತಮ್ಮ ವಿಧ್ಯಾರ್ಥಿ ಜೀವನದಲ್ಲಿ ಎದುರಿಸಿದ ಸಮಸ್ಯೆ ಹಾಗೂ ಸವಾಲುಗಳ ಕುರಿತು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. 
 
ಕಾಲೇಜಿನ ಪ್ರೊ. ಎಸ್.ಪಿ.ವಾಸನ್, ಪ್ರೊ.ಎ.ಕೆ.ಹಿಪ್ಪರಗಿ ಇದ್ದರು. ರೇಖಾ ಪಾಟೀಲ ಸ್ವಾಗತಿಸಿದರು. ಪ್ರೊ.ಸುರೇಶ ಸದಮಲ್ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT