ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಕೃತಿ– ಪ್ರಪಂಚ: ಎಷ್ಟು ಪರಿಚಿತ?

Last Updated 11 ಮಾರ್ಚ್ 2017, 19:30 IST
ಅಕ್ಷರ ಗಾತ್ರ

1. ಉತ್ತರ ಅಮೆರಿಕ ವಿಶ್ವ ಪ್ರಸಿದ್ಧ ‘ರಾಷ್ಟ್ರೀಯ ಉದ್ಯಾನ’ ವೊಂದರ ಒಂದು ದೃಶ್ಯ ಚಿತ್ರ 1ರಲ್ಲಿದೆ. ಇಲ್ಲಿ ಪಟ್ಟಿ ಮಾಡಿರುವ ವಿಶ್ವ ವಿಖ್ಯಾತ ರಾಷ್ಟ್ರೀಯ ಉದ್ಯಾನಗಳನ್ನೂ ಅವು ನೆಲೆಗೊಂಡಿರುವ ರಾಷ್ಟ್ರಗಳನ್ನೂ ಸರಿ ಹೊಂದಿಸಿ:
1. ಎಲ್ಲೋ ಸ್ಟೋನ್ ರಾಷ್ಟ್ರೀಯ ಉದ್ಯಾನ
2. ಕ್ರೂಗರ್ ರಾಷ್ಟ್ರೀಯ ಉದ್ಯಾನ
3. ಖಜಿರಂಗಾ ರಾಷ್ರೀಯ ಉದ್ಯಾನ
4. ಸೆರೆಂಗೆಟಿ ರಾಷ್ಟ್ರಿಯ ಉದ್ಯಾನ
5. ಪ್ಯಾಂಟಿನಾಲ್ ರಾಷ್ಟ್ರೀಯ ಉದ್ಯಾನ
6. ಚಿತ್ವಾನ್ ರಾಷ್ಟ್ರೀಯ ಉದ್ಯಾನ

ಅ. ಭಾರತ
ಬ. ಬ್ರೆಜಿಲ್
ಕ. ತಾಂಜಾನಿಯಾ
ಡ. ದಕ್ಷಿಣ ಆಫ್ರಿಕ
ಇ. ನೇಪಾಳ
ಈ. ಯು.ಎಸ್.ಎ.

2. ಭಾರೀ ನದಿಗಳಿಗೆ (ಚಿತ್ರ.2) ಅಡ್ಡನಾಗಿ ಅಣೆಕಟ್ಟುಗಳನ್ನು ನಿರ್ಮಿಸಿ ಜಲವಿದ್ಯುತ್ ಅನ್ನು ಉತ್ಪಾದಿಸುವ ಕ್ರಮ ಗೊತ್ತಲ್ಲ? ಈ ಕೆಳಗೆ ಪಟ್ಟಿ ಮಾಡಿರುವ ಬೃಹತ್ ಜಲಾಶಯಗಳಲ್ಲಿ ಯಾವುದು ವಿಶ್ವದ ಅತ್ಯಂತ ದೊಡ್ಡ ಜಲವಿದ್ಯುತ್ ಯೋಜನೆಗೆ ಆಕರವಾಗಿದೆ?
ಅ. ಆಸ್ಟಾನ್ ಜಲಾಶಯ 
ಬ. ಹೂವರ್ ಜಲಾಶಯ
ಕ. ಇಟಾಯಿಪು ಜಲಾಶಯ 
ಡ. ತ್ರೀ ಗಾರ್ಜಸ್ ಡ್ಯಾಂ
ಇ. ಕೊಯ್ನಾ ಡ್ಯಾಂ

3. ಮನುಷ್ಯರ ಗಾಳಕ್ಕೆ ಬಲಿಯಾಗಿರುವ ‘ಕಡಲಾಮೆ’ಯೊಂದು ಚಿತ್ರ-3ರಲ್ಲಿದೆ. ಇಲ್ಲಿ ಹೆಸರಿಸಿರುವ ಪ್ರಬೇಧಗಳಲ್ಲಿ ಯಾವುದು ಕಡಲಾಮೆ ಅಲ್ಲ?
ಅ. ಲೆದರ್ ಬ್ಯಾಕ್ ಬ. ಡೈಮಂಡ್ ಬ್ಯಾಕ್
ಕ. ಲಾಗರ್ ಹೆಡ್ ಡ. ಆಲಿವ್ ರಿಡ್ಲೀ

4. ಚಿತ್ರ -4ರಲ್ಲಿರುವ ಈಗ ಅತ್ಯಂತ ಅಪರೂಪವಾಗಿರುವ ಎಂಜಿನ್ ಅನ್ನು ಗಮನಿಸಿ.
ಅ. ಈ ಎಂಜಿನ್‌ನ ವರ್ಗ ಯಾವುದು?
ಬ. ಇದರಲ್ಲಿ ಬಳಸುವ ‘ಇಂಧನ’ ಯಾವುದು?
ಕ. ಇದನ್ನು ಬಳಕೆಯಿಂದ ದೂರ ಮಾಡಲು ಕಾರಣ ಏನು?

5. ವ್ಯೋಮಯಾನ ಕ್ಷೇತ್ರದಲ್ಲಿ ಯುಗಪ್ರವರ್ತಕ ಸಾಧನೆಗೆ ದಾರಿ ಮಾಡಿದ ಅದ್ಭುತ ವಾಹನ ಚಿತ್ರ-5ರಲ್ಲಿದೆ. ವ್ಯೋಮಯಾನ ಕ್ಷೇತ್ರದ ಈ ವಿಶ್ವಪ್ರಸಿದ್ಧ ಸಂಸ್ಥೆಗಳಲ್ಲಿ ಯಾವುದು
‘ಖಾಸಗೀ ಒಡೆತನ’ದ ಸಂಸ್ಥೆಯಾಗಿದೆ.
ಅ. ಇಸ್ರೋ  ಬ. ಸ್ಪೇಸ್ ಎಕ್ಸ್
ಕ. ನ್ಯಾಸಾ  ಡ. ಈಸಾ
ಇ. ರಾಸ್‌ಕಾಸ್ಮಾಸ್

6. ಜಪಾನ್ ದೇಶದ ಮಹಾನಗರವೊಂದರ ಒಂದು ದೃಶ್ಯ ಚಿತ್ರ-6ರಲ್ಲಿದೆ. ಈ ಕೆಳಗಿನ ಮಹಾನಗರಗಳ ಪಟ್ಟಿಯಲ್ಲಿ ಯಾವುವು ಜಪಾನ್ ದೇಶದವಲ್ಲ?
ಅ. ನಾಗೋಯಾ ಬ. ಮನಿಲಾ
ಕ. ಕೋಬೆ  ಡ. ಕ್ಯೋಟೋ
ಇ. ಶಾಂಘಾಯ್ ಈ. ಕಗೋಶೀಮಾ
ಉ. ಒಸಾಣ  ಟ. ಬ್ಯಾಂಕಾಕ್

7. ಚಿತ್ರ-7ರಲ್ಲಿ ವಿಸ್ಮಯಕರ ರೂಪದ ಸಾಗರ ಜೀವಿಯನ್ನು ಗಮನಿಸಿ. ಇದನ್ನು ಗುರುತಿಸಬಲ್ಲಿರಾ?
ಅ. ಸಾಗರ ಸಿಂಹ ಬ. ಕಡಲ ಕುದುರೆ
ಕ. ಸೀ ಅರ್ಚಿನ್ ಡ. ಸೀ ಡ್ರಾಗನ್

8. ಹಣ್ಣುಗಳನ್ನು ಆಹಾರವಾಗಿ ಸೇವಿಸುವ ಬಾವಲಿ ಪ್ರಭೇದವೊಂದು ಚಿತ್ರ-8ರಲ್ಲಿದೆ. ಬಾವಲಿಗಳ ಬಗೆಗೆ ಮೂರು ಪ್ರಶ್ನೆಗಳು:
ಅ. ಬಾವಲಿಗಳಲ್ಲಿ ಸುಮಾರು ಎಷ್ಟು ಪ್ರಭೇದಗಳಿವೆ?
ಬ. ಹಣ್ಣು ತಿನ್ನುವ ಬಾವಲಿಗಳ ‘ಸಾಮಾನ್ಯ ಹೆಸರು’ ಏನು?
ಕ. ರಕ್ತ ಹೀರುವ ಬಾವಲಿ ಯಾವುದು?

9. ‘ಚಿಕ್ಕ ಬೆಕ್ಕು’ಗಳ ವರ್ಗದ ಪ್ರಸಿದ್ಧ ಪ್ರಭೇದವೊಂದು ಚಿತ್ರ-9ರಲ್ಲಿದೆ. ಈ ಬೆಕ್ಕು ಯಾವುದು?
ಅ. ಕ್ಯಾರಕಲ್
ಬ. ಲಿಂಕ್ಸ್
ಕ. ಸೆರ್ವಲ್
ಡ. ಓಸಿಯಲಾಟ್
ಇ. ಕಾಗ್ವಾರ್

10. ವಿಶಾಲ ರೆಕ್ಕೆಗಳ ಭಾರೀ ಹಕ್ಕಿಯೊಂದು ಚಿತ್ರ-10 ರಲ್ಲಿದೆ. ಇಲ್ಲಿ ಹೆಸರಿಸಿರುವ ಹಕ್ಕಿಗಳಲ್ಲಿ ಯಾವುವು ವಿಸ್ತಾರ ಹರವಿನ ರೆಕ್ಕೆಗಳನ್ನು ಹೊಂದಿವೆ?
ಅ. ಫಿಂಚ್  ಇ. ಕಿಂಗ್ ಫಿಶರ್
ಬ. ಆಲ್ ಬಟ್ರಾಸ್  ಈ. ರಣಹದ್ದು
ಕ. ಪೆಲಿಕನ್  ಉ. ಸನ್ ಬರ್ಡ್
ಡ. ಪೆಂಗ್ವಿನ್   ಟ. ಟರ್ನ್

11. ನಮ್ಮ ಧರೆಯನ್ನು ಆವರಿಸಿರುವ ವಾಯುಮಂಡಲದಲ್ಲಿನ ಮೋಡಾಚ್ಛಾದನೆಯ ಒಂದು ದೃಶ್ಯ ಚಿತ್ರ-11ರಲ್ಲಿದೆ. ಮೋಡಾಚ್ಛಾದನೆ ಭೂ ಹಲೆಯ ಒಂದು ವಿದ್ಯಮಾನವೇ ಹೌದಲ್ಲ? ಇಲ್ಲಿ ಹೆಸರಿಸಿರುವ ವಿದ್ಯಮಾನಗಳಲ್ಲಿ ಯಾವುವು ಹವಾ ವಿದ್ಯಮಾನವೇ ಹೌದಲ್ಲ? ಇಲ್ಲಿ ಹೆಸರಿಸಿರುವ ವಿದ್ಯಮಾನಗಳಲ್ಲಿ ಯಾವುವು ಹವಾ ವಿದ್ಯಮಾನ ಅಲ್ಲ?
ಅ. ಎಲ್ ನೈನೋ ಬ. ಸೈಕ್ಲೋನ್
ಕ. ತ್ಸೂನಾಮಿ ಡ. ಅರೋಣ
ಇ. ಚಾರ್ನೆಡೋ ಈ. ಸಿಡಿಲು
ಉ. ಮಂಜು – ಹಿಮಪಾತ

12. ಸುಂದರ, ಜನಪ್ರಿಯ ಕೃತಕ ನಿರ್ಮಿತಿಯಾದ ‘ಪಿಂಗಾಣಿ’ ಚಿತ್ರ-12ರಲ್ಲಿದೆ. ಪಿಂಗಾಣಿ ಮೂಲತಃ ತಯಾರಿಯಾದ ರಾಷ್ಟ್ರ ಯಾವುದು?
ಅ. ಚೀನಾ  ಬ. ಜಪಾನ್
ಕ. ಭಾರತ  ಡ. ಶ್ರೀಲಂಕಾ
ಇ. ಇಟಲಿ

13. ಚಿತ್ರ-13ರಲ್ಲಿರುವ ವಿಶಿಷ್ಟ ಮಹಾವೃಕ್ಷವನ್ನು ನೋಡಿ. ಯಾವುದು ಈ ವೃಕ್ಷ?
ಅ. ಆಲದ ಮರ      ಬ. ಅರಳಿ ಮರ
ಕ. ಸೆಕ್ಟೋಯಾ (ರೆಡ್ ವುಡ್) ಡ. ಬಾವೋಬಾಬ್
ಇ. ನೀಲಗಿರಿ

14. ಬಹು ವರ್ಣಗಳ ಸುಪ್ರಸಿದ್ಧ ರತ್ನ ‘ಓಪಾಲ್’ ಚಿತ್ರ-14ರಲ್ಲಿದೆ. ಈ ರತ್ನವನ್ನು ಗರಿಷ್ಠ ಪ್ರಮಾಣದಲ್ಲಿ ಉತ್ಪಾದಿಸುವ ರಾಷ್ಟ್ರ ಯಾವುದು?
ಅ. ದಕ್ಷಿಣ ಆಫ್ರಿಕ ಬ. ಆಸ್ಟ್ರೇಲಿಯಾ
ಕ. ಚಿಲಿ  ಡ. ಯು.ಎಸ್.ಎ.
ಇ. ಮೆಕ್ಸಿಕೋ

ಉತ್ತರಗಳು

1. 1–ಈ, 2–ಡ, 3–ಅ, 5–ಬ, 6–ಇ
2. ಡ– ತ್ರೀಗಾರ್ಜಸ್ ಡ್ಯಾಂ (ಚೀನಾ)
3. ಬ. ಡೈಮಂಡ್ ಬಾಕ್ಸ್
4. ಅ. ಬಹಿರ್ದಹನ ಎಂಜಿನ್,
ಬ. ಕಲ್ಲಿದ್ದಿಲು,
ಕ. ಬಹು ಕಡಿಮೆ ಸಾಮರ್ಥ್ಯ
5. ಬ. ಸ್ಪೇಸ್ ಎಕ್ಸ್
6. ಬ, ಇ ಮತ್ತು ಟ
7. ಡ. ಸೀ ಡ್ರಾಗನ್
8. ಅ. ಸುಮಾರು 1300,
ಬ. ‘ಹಾರುವ ನರಿ’,
ಕ. ವಾಂಪೈರ್
9. ಬ. ಲಿಂಕ್ಸ್
10. ಬ, ಕ ಮತ್ತು ಈ
11. ಕ ಮತ್ತು ಡ
12. ಅ. ಚೀನಾ
13. ಡ. ಬಾವೊಬಾಬ್
14. ಆಸ್ಟ್ರೇಲಿಯಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT