ರಾಂಚಿ

ಸ್ಟಾರ್ಕ್‌ ಬದಲು ಕಮಿನ್ಸ್‌ಗೆ ಸ್ಥಾನ

ಗಾಯಗೊಂಡಿರುವ ಮಿಷೆಲ್  ಸ್ಟಾರ್ಕ್‌ ಬದಲಿಗೆ ವೇಗಿ ಪ್ಯಾಟ್ರಿಕ್‌ ಕಮಿನ್ಸ್‌ ಅವರು ಭಾರತ ವಿರುದ್ಧದ ಉಳಿದ ಎರಡು ಟೆಸ್ಟ್‌ ಪಂದ್ಯಗಳಿಗೆ ಆಸ್ಟ್ರೇಲಿಯಾ  ತಂಡದಲ್ಲಿ ಸ್ಥಾನ ಗಳಿಸಿದ್ದಾರೆ.

ರಾಂಚಿ : ಗಾಯಗೊಂಡಿರುವ ಮಿಷೆಲ್  ಸ್ಟಾರ್ಕ್‌ ಬದಲಿಗೆ ವೇಗಿ ಪ್ಯಾಟ್ರಿಕ್‌ ಕಮಿನ್ಸ್‌ ಅವರು ಭಾರತ ವಿರುದ್ಧದ ಉಳಿದ ಎರಡು ಟೆಸ್ಟ್‌ ಪಂದ್ಯಗಳಿಗೆ ಆಸ್ಟ್ರೇಲಿಯಾ  ತಂಡದಲ್ಲಿ ಸ್ಥಾನ ಗಳಿಸಿದ್ದಾರೆ.

ಕ್ರಿಕೆಟ್‌ ಆಸ್ಟ್ರೇಲಿಯಾ (ಸಿಎ) ಶನಿವಾರ ಈ ವಿಷಯವನ್ನು ತಿಳಿಸಿದೆ.

ಪುಣೆಯಲ್ಲಿ ನಡೆದಿದ್ದ ಆರಂಭಿಕ ಪಂದ್ಯದಲ್ಲಿ ಆಲ್‌ರೌಂಡ್್ ಆಟ ಆಡಿ ಕಾಂಗರೂಗಳ ನಾಡಿನ ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ಎಡಗೈ ವೇಗಿ ಸ್ಟಾರ್ಕ್‌, ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದ ಎರಡನೇ ಪಂದ್ಯದ ವೇಳೆ ಗಾಯಗೊಂಡಿದ್ದರು.

‘ಮಿಷೆಲ್‌ ಅವರ ಕಾಲಿಗೆ ಆಗಿರುವ ಗಾಯ ಗಂಭೀರ ಸ್ವರೂಪದ್ದೇನೂ ಅಲ್ಲ. ಆದರೆ ವೈದ್ಯಕೀಯ ಸಿಬ್ಬಂದಿಗಳು ಅವ ರಿಗೆ  ವಿಶ್ರಾಂತಿ ಪಡೆಯಲು ಸೂಚಿಸಿ ದ್ದಾರೆ. ಹೀಗಾಗಿ ಮಿಷೆಲ್‌, ಭಾರತ ವಿರುದ್ಧದ ಮೂರು ಮತ್ತು ನಾಲ್ಕನೇ ಟೆಸ್ಟ್‌ ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ. ಅವರ ಬದಲಿಗೆ ಕಮಿನ್ಸ್‌ಗೆ           ಆಡುವ ಬಳಗದಲ್ಲಿ ಸ್ಥಾನ ಕಲ್ಪಿಸಲಾಗಿದೆ’ ಎಂದು ರಾಷ್ಟ್ರೀಯ ಆಯ್ಕೆ ಸಮಿತಿ ಮುಖ್ಯಸ್ಥ ಟ್ರೆವೊರ್‌ ಹೊಹಾನ್ಸ್‌ ತಿಳಿಸಿದ್ದಾರೆ.

‘ಭಾರತ ವಿರುದ್ಧದ ಮೂರನೇ ಟೆಸ್ಟ್‌ ಪಂದ್ಯ ಮಾರ್ಚ್‌ 16ರಿಂದ ಆರಂಭವಾಗ ಲಿದ್ದು ಕಮಿನ್ಸ್‌, ಶನಿವಾರ ರಾತ್ರಿ ತಂಡ ಸೇರಿಕೊಳ್ಳಲಿದ್ದಾರೆ’ ಎಂದೂ ಅವರು ಹೇಳಿದ್ದಾರೆ.

ಕಮಿನ್ಸ್‌ ಅವರು 2011ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್‌ ಮಾದರಿಗೆ ಪದಾರ್ಪಣೆ ಮಾಡಿದ್ದರು. ಆ ಪಂದ್ಯದಲ್ಲಿ  ಅವರು ಒಟ್ಟು 7 ವಿಕೆಟ್‌ ಉರುಳಿಸಿ ಗಮನ ಸೆಳೆದಿದ್ದರು. ಹೋದ ಋತುವಿನಲ್ಲಿ ಬಿಗ್‌ಬಾಷ್‌ ಲೀಗ್‌ ಮತ್ತು ಶೆಫಿಲ್ಡ್‌ ಶೀಲ್ಡ್‌ ಟೂರ್ನಿ ಗಳಲ್ಲಿ ಉತ್ತಮ ಸಾಮರ್ಥ್ಯ ತೋರಿದ್ದ ಅವರು  ಆರು ವರ್ಷಗಳ ಬಳಿಕ ಮತ್ತೆ ಟೆಸ್ಟ್‌್ ತಂಡದಲ್ಲಿ ಸ್ಥಾನ ಗಳಿಸಿದ್ದಾರೆ. ಆದ್ದರಿಂದ ಅವರ ಮೇಲೆ ಸಾಕಷ್ಟು ನಿರೀಕ್ಷೆಯಿದೆ

 

Comments
ಈ ವಿಭಾಗದಿಂದ ಇನ್ನಷ್ಟು

ಕ್ರೀಡೆ
ಆನಂದ್‌, ಹರಿಕಾ ಶುಭಾರಂಭ

ಐದು ಬಾರಿ ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿದ್ದ ವಿಶ್ವನಾಥನ್ ಆನಂದ್ ಮತ್ತು ಭಾರತೀಯ ಗ್ರ್ಯಾಂಡ್‌ ಮಾಸ್ಟರ್‌ ಹರಿಕಾ ದ್ರೋಣವಲ್ಲಿ ಅವರು ಇಸ್ಲೆ ಆಫ್ ಮ್ಯಾನ್...

25 Sep, 2017

ದುಬೈ
ಲಂಕಾ ಕ್ರಿಕೆಟ್‌: ಭ್ರಷ್ಟಾಚಾರದ ತನಿಖೆ

ಶ್ರೀಲಂಕಾ ಕ್ರಿಕೆಟ್‌ನಲ್ಲಿ ನಡೆದಿದೆ ಎಂದು ಶಂಕಿಸಲಾಗಿರುವ ಅವ್ಯವಹಾರ ಮತ್ತು ಭ್ರಷ್ಟಾಚಾರದ ಬಗ್ಗೆ ತನಿಖೆಗೆ ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಮುಂದಾಗಿದೆ.

25 Sep, 2017
ಸೈಕ್ಲಿಂಗ್‌: ಕರ್ನಾಟಕಕ್ಕೆ 7 ಪದಕ

ಹುಬ್ಬಳ್ಳಿ
ಸೈಕ್ಲಿಂಗ್‌: ಕರ್ನಾಟಕಕ್ಕೆ 7 ಪದಕ

25 Sep, 2017
ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್‌: ಭಾರತ ‘ಎ’ ತಂಡಕ್ಕೆ ಇನಿಂಗ್ಸ್ ಮುನ್ನಡೆ

ವಿಜಯವಾಡ
ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್‌: ಭಾರತ ‘ಎ’ ತಂಡಕ್ಕೆ ಇನಿಂಗ್ಸ್ ಮುನ್ನಡೆ

25 Sep, 2017
ಪ್ರೊ ಕಬಡ್ಡಿ; ತಲೈವಾಸ್‌ಗೆ ರೋಚಕ ಜಯ

ನವದೆಹಲಿ
ಪ್ರೊ ಕಬಡ್ಡಿ; ತಲೈವಾಸ್‌ಗೆ ರೋಚಕ ಜಯ

25 Sep, 2017