ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಶ್ವಿನ್ ಎದುರಿಸಲು ಹಿಂಜರಿಕೆ ಇಲ್ಲ’

Last Updated 11 ಮಾರ್ಚ್ 2017, 19:40 IST
ಅಕ್ಷರ ಗಾತ್ರ

ಬೆಂಗಳೂರು: ರವಿಚಂದ್ರನ್ ಅಶ್ವಿನ್ ಅವರು ಉತ್ತಮ ಬೌಲರ್. ಆದರೆ ಅವರ ಎಸೆತಗಳನ್ನು ಎದುರಿಸಲು ನನಗೆ ಈಗಲೂ ಹಿಂಜರಿಕೆಯಿಲ್ಲ ಎಂದು ಆಸ್ಟ್ರೇಲಿಯಾ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಹೇಳಿದ್ದಾರೆ.

ಬಾರ್ಡರ್–ಗಾವಸ್ಕರ್ ಟ್ರೋಫಿ ಕ್ರಿಕೆಟ್ ಸರಣಿಯಲ್ಲಿ ಕಳೆದ ಎರಡೂ ಟೆಸ್ಟ್ ಪಂದ್ಯಗಳ ಮೂರು ಇನಿಂಗ್ಸ್‌ಗಳಲ್ಲಿ ವಾರ್ನರ್ ಅವರು ಅಶ್ವಿನ್ ಬೌಲಿಂಗ್‌ನಲ್ಲಿ ಔಟಾಗಿದ್ದರು.

‘ಟೆಸ್ಟ್‌ ಕ್ರಿಕೆಟ್‌ನಲ್ಲಿ ಒಟ್ಟಾರೆ ಒಂಬತ್ತು ಬಾರಿ ಅವರು ನನ್ನನ್ನು ಔಟ್ ಮಾಡಿದ್ದಾರೆ .  ಹೋದ ಪಂದ್ಯದಲ್ಲಿ ಅವರ ಎಸೆತವನ್ನು  ಸ್ವಿಚ್ ಹಿಟ್ ಮಾಡಲು ಪ್ರಯತ್ನಿಸಿದ್ದೆ. ಆ ಮೂಲಕ ಅಶ್ವಿನ್ ಅವರ ಬೌಲಿಂಗ್ ಲಯವನ್ನು ಭಂಗಗೊಳಿಸುವ ಯತ್ನ ಮಾಡಿದ್ದೆ. ಆದರೆ ಅದು ನನಗೇ ತಿರುಗೇಟು ನೀಡಿತ್ತು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT