ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಸೇವಿಯರ್‌ ಮಿಂಚು

Last Updated 11 ಮಾರ್ಚ್ 2017, 19:51 IST
ಅಕ್ಷರ ಗಾತ್ರ

ಬೆಂಗಳೂರು: ಆ್ಯಂಟೊ ಕ್ಸೇವಿಯರ್‌ ಕಾಲ್ಚಳಕದಲ್ಲಿ ಅರಳಿದ ಎರಡು ಗೋಲುಗಳ ಬಲದಿಂದ ಓಜೋನ್‌ ಫುಟ್‌ಬಾಲ್‌ ಕ್ಲಬ್‌ ತಂಡ ಬೆಂಗಳೂರು ಜಿಲ್ಲಾ ಫುಟ್‌ಬಾಲ್‌ ಸಂಸ್ಥೆ (ಬಿಡಿಎಫ್‌ಎ) ಆಶ್ರಯದ ಸೂಪರ್‌ ಡಿವಿಷನ್‌ ಫುಟ್‌ಬಾಲ್‌ ಚಾಂಪಿಯನ್‌ ಷಿಪ್‌ನ ಪಂದ್ಯದಲ್ಲಿ ಗೆಲುವು ಗಳಿಸಿದೆ.

ಅಶೋಕನಗರದಲ್ಲಿರುವ ಬೆಂಗಳೂರು ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಓಜೋನ್‌ ಎಫ್‌ಸಿ 3–1 ಗೋಲುಗಳಿಂದ         ಎಜಿಒ ಆರ್‌ಸಿ ತಂಡವನ್ನು ಪರಾಭವಗೊಳಿಸಿತು.

ಓಜೋನ್‌ ತಂಡ ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾಯಿತು. ಈ ತಂಡದ ಪ್ರಯತ್ನಕ್ಕೆ 28ನೇ ನಿಮಿಷದಲ್ಲಿ ಮೊದಲ ಯಶಸ್ಸು ಸಿಕ್ಕಿತು.
ಡಿ. ವಿಘ್ನೇಶ್‌ ಚೆಂಡನ್ನು ಗುರಿ ಮುಟ್ಟಿಸಿ ಓಜೋನ್‌ ಪಾಳಯದಲ್ಲಿ ಖುಷಿ ಮೂಡುವಂತೆ ಮಾಡಿದರು. ಆ ಬಳಿಕ ತಂಡ ಇನ್ನಷ್ಟು ವೇಗವಾಗಿ ಆಡಿತು.

37ನೇ ನಿಮಿಷದಲ್ಲಿ ಆ್ಯಂಟೊ ಕ್ಸೇವಿಯರ್‌ ಗೋಲು ದಾಖಲಿಸಿ ಮಿಂಚಿದರು. ಹೀಗಾಗಿ ಓಜೋನ್‌ 2–0ರ ಮುನ್ನಡೆಯೊಂದಿಗೆ ವಿರಾಮಕ್ಕೆ ಹೋಯಿತು.
ದ್ವಿತೀಯಾರ್ಧದಲ್ಲಿ ಎರಡೂ ತಂಡಗಳು ಗೋಲುಗಳಿಸಲು ತೀವ್ರ ಪೈಪೋಟಿ ನಡೆಸಿದವು. ಆದ್ದರಿಂದ 73ನೇ ನಿಮಿಷದವರೆಗೂ ಆಟ ಸಮಬಲದಲ್ಲಿ ಸಾಗಿತ್ತು. 74ನೇ ನಿಮಿಷದಲ್ಲಿ ಆ್ಯಂಟೊ ವೈಯಕ್ತಿಕ ಎರಡನೇ ಗೋಲು ಬಾರಿಸಿ ಮುನ್ನಡೆಯನ್ನು 3–0ಗೆ ಹೆಚ್ಚಿಸಿದರು.

ಇದಾದ ನಾಲ್ಕು ನಿಮಿಷದ ಬಳಿಕ (79) ನಬೀಲ್‌ ಚೆಂಡನ್ನು ಗುರಿ ತಲುಪಿಸಿ ಎಜಿಒಆರ್‌ಸಿ ತಂಡದ ಖಾತೆ ತೆರೆದರು. ಇದರಿಂದ ತಂಡ ಹಿನ್ನಡೆ ತಗ್ಗಿಸಿಕೊಳ್ಳಲಷ್ಟೇ ಶಕ್ತವಾಯಿತು.

ಬಿಯುಎಫ್‌ಸಿಗೆ ಜಯ: ಇಸ್ಲಾನ್‌ ತಂದಿತ್ತ ಎರಡು ಗೋಲುಗಳಿಂದ ಬಿಯುಎಫ್‌ಸಿ ತಂಡ ‘ಎ’ ಡಿವಿಷನ್‌ ಲೀಗ್‌ ಪಂದ್ಯದಲ್ಲಿ ಜಯ ಸಾಧಿಸಿತು.
ಬಿಯುಎಫ್‌ಸಿ 3–1 ಗೋಲುಗಳಿಂದ  ಪೋಸ್ಟಲ್‌ ತಂಡವನ್ನು ಹಣಿಯಿತು.

ವಿಜಯಿ ತಂಡದ ಇಸ್ಲಾನ್‌ 10 ಮತ್ತು 50ನೇ ನಿಮಿಷಗಳಲ್ಲಿ ಗೋಲು ದಾಖಲಿಸಿ ಗಮನ ಸೆಳೆದರು. ಗಣೇಶ್‌ (5ನೇ ನಿ.) ಏಕೈಕ ಗೋಲು ಬಾರಿಸಿದರು.
ಪೋಸ್ಟಲ್‌ ತಂಡದ ಸ್ಟೀವನ್ಸನ್‌ (71ನೇ ನಿ.) ಏಕೈಕ ಗೋಲು ಬಾರಿಸಿ ಸೋಲಿನ ನಡುವೆಯೂ ಗಮನ ಸೆಳೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT