ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌಹಾರ್ದ ಪಂದ್ಯ

Last Updated 11 ಮಾರ್ಚ್ 2017, 19:54 IST
ಅಕ್ಷರ ಗಾತ್ರ

ರಿಯೊ ಡಿ ಜನೈರೊ : ಫಿಫಾ ವಿಶ್ವಕಪ್ ಸಿದ್ಧತೆಗಾಗಿ ಬ್ರೆಜಿಲ್ ಹಾಗೂ ಜರ್ಮನಿ ತಂಡಗಳು ಸೌಹಾರ್ದ ಪಂದ್ಯ ಆಡಲಿವೆ.

ಮಾರ್ಚ್ 27ರಂದು ಬರ್ಲಿನ್‌ನ ಒಲಿಂಪಿಕ್ ಕ್ರೀಡಾಂ ಗಣದಲ್ಲಿ ಈ ಪಂದ್ಯ ನಡೆಯಲಿದೆ. 2014ರ ಫಿಫಾ ವಿಶ್ವಕಪ್‌ ಸೆಮಿಫೈನಲ್‌ನಲ್ಲಿ ಈ ತಂಡಗಳು ಮುಖಾ ಮುಖಿ ಯಾಗಿದ್ದವು. ಐತಿಹಾಸಿಕ ಪಂದ್ಯದ ಬಳಿಕ  ಪೈಪೋಟಿ ನಡೆಸಿರಲಿಲ್ಲ.

‘ಪ್ರಬಲ ತಂಡದೊಂದಿಗೆ ಆಡುವುದರಿಂದ ಆಟಗಾರರಲ್ಲಿ ಆತ್ಮ ವಿಶ್ವಾಸ ಹೆಚ್ಚಲಿದೆ’ ಎಂದು ಬ್ರೆಜಿಲ್ ತಂಡದ ಸಂಯೋಜಕ ಗಾಸ್ಪರ್ ಹೇಳಿದ್ದಾರೆ.
ರಷ್ಯಾದಲ್ಲಿ 2018ರಲ್ಲಿ  ವಿಶ್ವಕಪ್ ನಡೆಯಲಿದೆ. 2014 ರ ವಿಶ್ವಕಪ್‌ ಸೆಮಿಫೈನಲ್‌ನಲ್ಲಿ ಜರ್ಮನಿ 7–1 ಗೋಲುಗಳಲ್ಲಿ ಬ್ರೆಜಿಲ್ ತಂಡವನ್ನು ಮಣಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT