ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಯಾನ್ ಟವರ್‌ ತುದಿಯಲ್ಲಿ ವಿಕಿ!

ರಕ್ಷಕಾ ಸಾಧನಗಳ ಸಹಾಯವಿಲ್ಲದೆ ಫೋಟೊ ಶೂಟ್‌
Last Updated 12 ಮಾರ್ಚ್ 2017, 19:30 IST
ಅಕ್ಷರ ಗಾತ್ರ
ವಿಶ್ವದ ಎತ್ತರದ ಗಗನಚುಂಬಿ ಕಟ್ಟಡ ದುಬೈನ ‘ಕಯಾನ್ ಟವರ್‌’. ಈ ಟವರ್ ತುದಿಯಲ್ಲಿ ನಿಂತು ಯಾವುದೇ ರಕ್ಷಕಾ ಸಾಧನಗಳ ಸಹಾಯವಿಲ್ಲದೆ ಫೋಟೊ ಶೂಟ್‌ ಮಾಡಿಸಿದ್ದಾರೆ ರೂಪದರ್ಶಿ ವಿಕಿ ಒಡಿಂಟ್ಕೊವಾ.
 
 
 
23ರ ಹರೆಯದ ರೂಪದರ್ಶಿ ವಿಕಿ ಒಡಿಂಟ್ಕೊವಾ ರಷ್ಯಾ ಮೂಲದ ರೂಪದರ್ಶಿ. ಕಣ್ಸೆಳೆವ ಮೈಮಾಟ, ಗ್ಲಾಮರ್ ಲುಕ್‌ನಿಂದ ಹೆಸರುವಾಸಿಯಾದಾಕೆ. ಇದೀಗ ಈ  ಫೋಟೊಶೂಟ್‌ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿದೆ. ಫೋಟೊಗಳನ್ನು ಅವರೇ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು 8 ಲಕ್ಷಕ್ಕೂ ಅಧಿಕ ಜನ ವೀಕ್ಷಿಸಿದ್ದಾರೆ.
 
ಒಡಿಂಟ್ಕೊವಾಗೆ ಸಾಮಾಜಿಕ ಮಾಧ್ಯಮದಲ್ಲಿ ಮೂರು ಲಕ್ಷಕ್ಕೂ ಅಧಿಕ ಮಂದಿ ಫಾಲೋವರ್ಸ್‌ ಇದ್ದಾರೆ. ‘ನನಗೆ ಇದನ್ನು ನಂಬಲು ಸಾಧ್ಯವಾಗುತ್ತಿಲ್ಲ. ಈ ವಿಡಿಯೊ ವೀಕ್ಷಿಸಿದಾಗೆಲ್ಲ ನನ್ನ ಮೈ ಬೆವರುತ್ತದೆ’ ಎಂದು ತಮ್ಮ ವಿಡಿಯೊ ನೋಡಿ ತಾವೇ ಪ್ರತಿಕ್ರಿಯಿಸಿದ್ದಾರೆ.

ನೆಲದಿಂದ ಬರೋಬ್ಬರಿ 1004 ಅಡಿ ಎತ್ತರವಿರುವ ದುಬೈನ ಕಯಾನ್ ಟವರ್‌ ಮೇಲೆ ಜೀವ ರಕ್ಷಕಗಳ ನೆರವಿಲ್ಲದೆ  ಫೋಟೊಶೂಟ್‌ ಮಾಡಿಸಿಕೊಂಡಿರುವ  ಬಗ್ಗೆ ಸಾರ್ವಜನಿಕರಿಂದ ಟೀಕೆಯೂ ವ್ಯಕ್ತವಾಗಿದೆ. ಹಾಗೇ ಈ ವಿಡಿಯೊ ಚಿತ್ರೀಕರಿಸಿರುವ ಬಗ್ಗೆ ಅಚ್ಚರಿಯೂ ವ್ಯಕ್ತವಾಗಿದೆ.
 

Full video (link in bio)! @a_mavrin #MAVRINmodels #MAVRIN #VikiOdintcova #Dubai

A post shared by Viki Odintcova (@viki_odintcova) on

<div>&#13; <br/>&#13; ಈ ಹಿಂದೆ 23 ವರ್ಷದ ರೂಪದರ್ಶಿ ಏಂಜೆಲಾ ನಿಕೋಲಾ 90 ಡಿಗ್ರಿ ಸುರುಳಿಯಂತಿರುವ ಕಯಾನ್‌ ಟವರ್‌ ತುದಿಯಲ್ಲಿ ನಿಂತು ಸೆಲ್ಫಿ ಶೂಟ್‌ ಮಾಡಿ ದಾಖಲೆ ನಿರ್ಮಿಸಿದ್ದರು. ಒಡಿಂಟ್ಕೊವಾ ಅವರನ್ನು ಅನುಸರಿಸಿದ್ದಾರೆ, ಹೊಸದೇನೂ ಮಾಡಿಲ್ಲ ಎನ್ನುವ ಅಭಿಪ್ರಾಯವೂ ವ್ಯಕ್ತವಾಗಿದೆ.</div><div>&#13;  </div></div>

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT