ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತಿದೂಷಕ ವ್ಯಂಗ್ಯ

Last Updated 12 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ನಾನೊಬ್ಬ ಭೌತಶಾಸ್ತ್ರದ ನಿವೃತ್ತ ಪ್ರೊಫೆಸರ್ ಮತ್ತು ದೊಂಬರ ಸಮಾಜಕ್ಕೆ ಸೇರಿದವ. ಇತ್ತೀಚಿನ ದಿನಗಳಲ್ಲಿ, ವಿಶೇಷವಾಗಿ ರಾಜಕೀಯದ ಟೀಕೆ ಟಿಪ್ಪಣಿ ಮತ್ತು ಕೆಸರೆರಚಾಟದಲ್ಲಿ, ಟಿ.ವಿ ಮಾಧ್ಯಮಗಳ ರೋಚಕ ಶೀರ್ಷಿಕೆಗಳಲ್ಲಿ ‘ದೊಂಬರಾಟ’ ಎನ್ನುವ ಪದ ಎಗ್ಗಿಲ್ಲದೆ ಅತ್ಯಂತ ಕೀಳು ಅಭಿರುಚಿಯ ವ್ಯಂಗ್ಯದಲ್ಲಿ ಬಳಕೆಯಾಗುತ್ತಿದೆ. ಇದು ನನ್ನ ಸಮುದಾಯದ ಬಂಧುಗಳಿಗೆ ತೀವ್ರ ನೋವನ್ನು ಉಂಟುಮಾಡುತ್ತಿದೆ.

ಪತ್ರಿಕೆಗಳನ್ನು ಓದುವಾಗ ಮತ್ತು ವಿಶೇಷವಾಗಿ ಟಿ.ವಿ  ನೋಡುವಾಗ ಈ ಪದದ ಪ್ರಯೋಗವನ್ನು ಗಮನಿಸಿ ನನ್ನ ಮಕ್ಕಳು ಒಂದು ರೀತಿಯ ಅವಮಾನ ಮತ್ತು ಅಸಹಾಯಕತೆಯಿಂದ ನನ್ನ ಕಡೆ ನೋಡುತ್ತವೆ. ಆಗ ನನಗಾಗುವ ಯಾತನೆಯನ್ನು ಹೇಗೆ ವ್ಯಕ್ತಪಡಿಸಲಿ?

ದೊಂಬರು ಎನ್ನುವ ಒಂದು ಸಮುದಾಯ ತನ್ನ ಸ್ವಾಭಿಮಾನದ ಬದುಕಿಗಾಗಿ ಕಷ್ಟಕರವೂ ಅಪಾಯಕಾರಿಯೂ ಆದ ಕಲೆಯನ್ನು ಪರಿಶ್ರಮದಿಂದ ಸಾಧಿಸಿ, ಅದರ ಮುಖಾಂತರ ಮನರಂಜನೆ ನೀಡಿ ನಾಲ್ಕು ಪುಡಿಗಾಸನ್ನು ಸಂಪಾದಿಸಿ, ಕಡು ಕಷ್ಟದ ಜೀವನ ನಡೆಸುವುದು ನಾಗರಿಕ ಸಮಾಜಕ್ಕೆ ತಮಾಷೆ, ವ್ಯಂಗ್ಯದ ವಿಚಾರವೇ?

ನಮ್ಮ ನಿವೇದನೆ ಇಷ್ಟೆ: ಕತ್ತೆ ಎಂದು ಬೈದರೆ ಒಂದು ಅಮಾಯಕ ಪ್ರಾಣಿಗೆ ಮಾಡುವ ಅವಮಾನ ಎಂದು ಪ್ರಾಣಿ ಸ್ವಾಭಿಮಾನವನ್ನು ರಕ್ಷಿಸಲು ಹೋರಾಡುವ ಈ ನಾಗರಿಕ ಸಮಾಜದಲ್ಲಿ, ಒಂದು ಸಮುದಾಯದ ಹೊಟ್ಟೆಪಾಡಿನ ಬದುಕನ್ನು ಅವಮಾನಿಸುವ ಭಾಷೆಯನ್ನು ಬಳಸುವುದು ಬೇಡ.

ತಮ್ಮ ವ್ಯಂಗ್ಯಕ್ಕೆ ಬೇಕಾದ ಪದಪುಂಜಗಳು ಕನ್ನಡದ ನಿಘಂಟಿನಲ್ಲಿ ಸಾಕಷ್ಟಿವೆ. ಅವನ್ನು ಹುಡುಕಿ ತೆಗೆದು ಉಪಯೋಗಿಸಿ. ಜಾತಿ ದೂಷಕ ವ್ಯಂಗ್ಯವನ್ನು ಬಿಟ್ಟು ಬಿಡಿ.
-ಪ್ರೊ. ತುಮಕೂರು ಚಂದ್ರಕಾಂತ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT