ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಡು ಪ್ರಾಣಿಗಳಿಗಾಗಿ ನೀರಿನ ತೊಟ್ಟಿ ನಿರ್ಮಾಣ

Last Updated 12 ಮಾರ್ಚ್ 2017, 20:05 IST
ಅಕ್ಷರ ಗಾತ್ರ

ಶಿರಸಿ/ ಮುಂಡಗೋಡ (ಉತ್ತರಕನ್ನಡ): ವನ್ಯಜೀವಿಗಳ ಕುಡಿಯುವ ನೀರಿನ ಕೊರತೆಯನ್ನು ನೀಗಿಸಲು ಅರಣ್ಯ ಇಲಾಖೆಯು ಕಾಡಿನೊಳಗೆ ನೀರಿನ ತೊಟ್ಟಿ ನಿರ್ಮಿಸಲು ಮುಂದಾಗಿದೆ.

ದಾಹದಿಂದ ಕಂಗೆಟ್ಟು ಕಾಡಿನಿಂದ ನಾಡಿನತ್ತ ಬರುತ್ತಿರುವ ವನ್ಯಜೀವಿಗಳು ನಾಯಿ ದಾಳಿ ಹಾಗೂ ವಾಹನಗಳು ಡಿಕ್ಕಿಯಾಗಿ ಸಾವಿಗೀಡಾಗುತ್ತಿವೆ. ವನ್ಯಜೀವಿಗಳು ನಾಡಿಗೆ ಬರುವುದನ್ನು ತಪ್ಪಿಸಲು ಕಾಡಿನಲ್ಲಿಯೇ ತೊಟ್ಟಿ ನಿರ್ಮಿಸಿ, ಟ್ಯಾಂಕರ್‌ ಮೂಲಕ ನೀರು ಪೂರೈಸಲಾಗುತ್ತಿದೆ. ತೊಟ್ಟಿಯಿಂದ ನೀರು ವ್ಯರ್ಥವಾಗದಂತೆ ಪ್ಲಾಸ್ಟಿಕ್ ಶೀಟ್ ಬಳಸಲಾಗಿದೆ.

ಬನವಾಸಿ ವಲಯದ ಬೈಲೂರದಲ್ಲಿ ಈ ಪ್ರಯೋಗ ಈಗಾಗಲೇ ಅನುಷ್ಠಾನಗೊಂಡಿದೆ. ಬದನಗೋಡ ಹಾಗೂ ದಾಸನಕೊಪ್ಪ ಭಾಗದ ಅರಣ್ಯದಲ್ಲಿ ತಯಾರಿ ನಡೆದಿದೆ ಎಂದು ಶಿರಸಿಯ ಉಪ ಸಂರಕ್ಷಣಾ ಅಧಿಕಾರಿ ಕೆ.ಬಿ.ಮಂಜುನಾಥ ತಿಳಿಸಿದರು.

ಮುಂಡಗೋಡ ಅರಣ್ಯ ವಲಯದ ಸನವಳ್ಳಿ, ಇಂದೂರ, ಚವಡಳ್ಳಿ, ಕಾತೂರ ಅರಣ್ಯ ವಲಯದ ಭದ್ರಾಪುರ, ಮಳಗಿ ಧರ್ಮಾಕಾಲೊನಿ, ಹರಗನಹಳ್ಳಿ ಸೇರಿದಂತೆ ಹಲವು ಕಡೆ ತೊಟ್ಟಿಗಳನ್ನಿಟ್ಟು, ನೀರು ತುಂಬಿಸಲಾಗುತ್ತಿದೆ. ಕಳೆದ ವರ್ಷದ ಮೇ ನಲ್ಲಿ ಕಾತೂರ ಅರಣ್ಯ ವಲಯದಲ್ಲಿ ಈ ರೀತಿ ಪ್ರಯೋಗ ಮಾಡಿ ಯಶಸ್ವಿಯಾಗಿದ್ದರು. ಆದರೆ ಈ ಸಲ, ತಾಲ್ಲೂಕಿನಲ್ಲಿ ಬರದ ತೀವ್ರತೆ ಹೆಚ್ಚು ಇರುವುದರಿಂದ ಅರಣ್ಯ ಇಲಾಖೆ ಈ ಕಾರ್ಯಕ್ಕೆ ಮುಂದಾಗಿದೆ. ಕೆಲ ರೈತರೂ ಈ ಪ್ರಯತ್ನಕ್ಕೆ ಕೈಜೋಡಿಸಿದ್ದಾರೆ ಎಂದು ಕಾತೂರಿನ ವಲಯ ಅರಣ್ಯಾಧಿಕಾರಿ ಶ್ರೀಧರ ತೆಗ್ಗಿನಮನಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT