ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಧ್ಯಯನಶೀಲ ಪ್ರವೃತ್ತಿಯಿಂದ ಪರಿಪೂರ್ಣ ವ್ಯಕ್ತಿತ್ವ’

ಸರ್ಕಾರಿ ಶಾಲೆಗೆ ಉಚಿತ ಗ್ರಂಥಾಲಯ ಅರ್ಪಣೆ ಸಮಾರಂಭ
Last Updated 13 ಮಾರ್ಚ್ 2017, 5:28 IST
ಅಕ್ಷರ ಗಾತ್ರ

ಜಗಳೂರು: ‘ಆಳವಾದ ಅಧ್ಯಯನ ದಿಂದ ಮಾತ್ರ  ಶಿಕ್ಷಕರು ತರಗತಿಗಳಲ್ಲಿ ವಿದ್ಯಾರ್ಥಿಗಳಿಗೆ ಪರಿಣಾಮಕಾರಿಯಾಗಿ  ಬೋಧನೆ ಮಾಡಲು ಸಾಧ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಶಿಕ್ಷಕ ವರ್ಗ ಸದಾ  ಅಧ್ಯಯನಶೀಲ ಆಗಿರಬೇಕು’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಈಶ್ವರ ಚಂದ್ರ ಹೇಳಿದರು.
ಜಗಳೂರು ಗೊಲ್ಲರಹಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಯೂತ್‌ ಫಾರ್‌ ಸೇವಾ ಸಂಸ್ಥೆಯಿಂದ ದೇಣಿಗೆ ನೀಡಲಾದ 800 ಪುಸ್ತಕಗಳ ಗ್ರಂಥಾ ಲಯ ಸಮರ್ಪಣೆ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಅಧ್ಯಯನ ಪ್ರತಿಯೊಬ್ಬರ ವ್ಯಕ್ತಿತ್ವ  ವನ್ನು ಪರಿಪೂರ್ಣವಾಗಿಸುತ್ತದೆ. ತರಗತಿ ಗಳಲ್ಲಿ ಪಾಠ ಹೇಳುವ ಶಿಕ್ಷಕರು ಆಯಾ ವಿಷಯಗಳಲ್ಲಿ ಆಳವಾದ ಜ್ಞಾನವನ್ನು ಹೊಂದಿರಬೇಕು. ಇದು ನಿರಂತರ ಓದಿ ನಿಂದ ಲಭಿಸುತ್ತದೆ. ವಿದ್ಯಾರ್ಥಿಗಳಿಗೂ ಸಹ ಪಠ್ಯೇತರ ಪುಸ್ತಕಗಳನ್ನು ಓದಲು ಪ್ರೇರೇಪಿಸಬೇಕು. ಪುಸ್ತಕಗಳು ಅತ್ಯುತ್ತಮ ಸ್ನೇಹಿತರಿದ್ದಂತೆ. ಬಾಲ್ಯದಲ್ಲೇ ಓದನ್ನು ಮೈಗೂಡಿಸಿಕೊಂಡಲ್ಲಿ ಭವಿಷ್ಯದಲ್ಲಿ ವ್ಯಕ್ತಿತ್ವ ಬೆಳವಣಿಗೆಗೆ ನೆರವಾಗಲಿದೆ’ ಎಂದರು.

ಅಕ್ಷರದಾಸೋಹ ಇಲಾಖೆ ಸಹಾ ಯಕ ನಿರ್ದೇಶಕ ಎನ್‌.ಆರ್‌. ತಿಪ್ಪೇ ಸ್ವಾಮಿ ಮಾತನಾಡಿ, ‘ಯೂತ್ ಫಾರ್‌ ಸೇವಾ ಸಂಸ್ಥೆಯಿಂದ ತಾಲ್ಲೂಕಿನ ಕುಗ್ರಾ ಮಗಳ ಹಲವಾರು ಸರ್ಕಾರಿ ಶಾಲೆಗಳಿಗೆ ಉಚಿತವಾಗಿ ಕಂಪ್ಯೂಟರ್‌ ಪ್ರಯೋಗಾ ಲಯ, ಉತ್ತಮ ಗ್ರಂಥಗಳನ್ನು ಒಳಗೊಂಡ ಗ್ರಂಥಾಲಯ, ಶುದ್ಧ ಕುಡಿಯುವ ನೀರಿನ ಘಟಕಗಳು ಮತ್ತು ಶಾಲಾ ಕಿಟ್‌ಗಳನ್ನು ಕಳೆದ ಹಲವು ವರ್ಷಗಳಿಂದ ನೀಡುತ್ತಿದ್ದಾರೆ’ ಎಂದರು.

‘ಕೆಲವು  ಶಾಲೆಗಳಲ್ಲಿ ಉಚಿತವಾಗಿ ನೀಡಲಾದ ಕಂಪ್ಯೂಟರ್‌ಗಳನ್ನು ಬಳಕೆ ಮಾಡದೆ ವ್ಯರ್ಥವಾಗಿ ಶಾಲಾ ಕೊಠಡಿ ಯಲ್ಲಿ ಇಡಲಾಗಿದೆ. ಇದು ಸರಿಯಲ್ಲ.  ಹಳ್ಳಿಗಾಡಿನ ಬಡ ಮಕ್ಕಳಿಗೆ ಕಂಪ್ಯೂ ಟರ್‌ ಜ್ಞಾನ ಲಭಿಸಲಿ ಎಂಬ ಕಾಳಜಿ ಯಿಂದ ಸಂಸ್ಥೆ ದೇಣಿಗೆ ನೀಡಿರುವುದು ಸದುಪಯೋಗ ಆಗಬೇಕು. ತಾಲ್ಲೂಕಿನಲ್ಲಿ ಸರ್ಕಾರಿ ಶಾಲೆಗಳಿಗೆ  ಮೂಲ ಸೌಕರ್ಯ ಕಲ್ಪಿಸುತ್ತಿರುವ ಸಂಸ್ಥೆಯ ಪ್ರಶಾಂತ್‌ ಅವರ ಸಮಾಜ ಸೇವೆ ಯುವಕರಿಗೆ ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಯೂತ್ ಫಾರ್‌ ಸೇವಾ ಸಂಸ್ಥೆಯ ಡಿ.ಎಸ್‌. ಪ್ರಶಾಂತ್‌, ಬೆಂಗಳೂರಿನ ಕೆಲವು ಸಾಫ್ಟ್‌ವೇರ್‌ ಕಂಪೆನಿಗಳ ನೆರವಿನಿಂದ  ಹಿಂದುಳಿದ ಜಗಳೂರು ತಾಲ್ಲೂಕಿನ ಸರ್ಕಾರಿ ಶಾಲೆಗಳಲ್ಲಿ ಆಧುನಿಕ ಶಿಕ್ಷಣ ಸೌಲಭ್ಯ ಕಲ್ಪಿಸಲು ಶ್ರಮಿಸಲಾಗುತ್ತಿದೆ. ಸಂಸ್ಥೆಯಿಂದ ಹಲವು ಶಾಲೆಗಳಿಗೆ ಇಂಗ್ಲಿಷ್‌ ಶಿಕ್ಷಕರ ನೇಮಕ  ಮತ್ತು ಕಂಪ್ಯೂಟರ್‌ ಲ್ಯಾಬ್‌ ಅಳವಡಿಸಲಾಗಿದ್ದು, ಮತ್ತಷ್ಟು  ಶಾಲೆಗಳಿಗೆ ನೆರವು ನೀಡಲಾಗುವುದು ಎಂದು ಸ್ಪಷ್ಟಪಡಿಸಿದರು.

ವಕೀಲ ಡಿ. ಶ್ರೀನಿವಾಸ್‌, ಗ್ರಾಮ ಪಂಚಾಯ್ತಿ ಸದಸ್ಯೆ ಪದ್ಮಾ, ಮುಖ್ಯ ಶಿಕ್ಷಕಿ ಜಯಮ್ಮ, ಸಹ ಶಿಕ್ಷಕಿ ಖೈರುನ್ನಿಸಾ, ಎಸ್‌ಡಿಎಂಸಿ ಅಧ್ಯಕ್ಷ ಗಿರೀಶ್‌, ತಾಲ್ಲೂಕು ನೌಕರರ ಸಂಘದ ಮಾಜಿ ಅಧ್ಯಕ್ಷ ಸತೀಶ್‌, ಹರೀಶ್‌, ತಿಪ್ಪೇಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT