ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಣ್ಣ,ಮುಖವಾಡ ಖರೀದಿ ಭರಾಟೆ

ನಗರ ಸಂಚಾರ
Last Updated 13 ಮಾರ್ಚ್ 2017, 5:34 IST
ಅಕ್ಷರ ಗಾತ್ರ

ಕಾರವಾರ: ಹೋಳಿ ಹಬ್ಬದ ಬಣ್ಣ ದೋಕುಳಿಯಲ್ಲಿ ಮಿಂದೇಳಲು ಕಡಲನಗರಿ ಕಾರವಾರ ಸಜ್ಜು ಗೊಂಡಿದೆ. ಸೋಮವಾರ ನಡೆಯಲಿ ರುವ ಓಕುಳಿ ಗಾಗಿ ಮಕ್ಕಳು, ಯುವಕರು ಪಾಲಕ ರೊಂದಿಗೆ ಅಂಗಡಿಗಳಿಗೆ ತೆರಳಿ ಬಣ್ಣ, ಪಿಚಕಾರಿ ಹಾಗೂ ಮುಖವಾಡಗಳ ಖರೀದಿಸಿದ್ದಾರೆ.

ವ್ಯಾಪಾರಿಗಳು ಕಳೆದ ನಾಲ್ಕೈದು ದಿನಗಳಿಂದಲೇ ಬಣ್ಣಗಳ ಮಾರಾಟ ದಲ್ಲಿ ನಿರತರಾಗಿದ್ದು, ಅಂಗಡಿಗಳ ಮುಂದೆ ಮುಖವಾಡ ಹಾಗೂ ಪಿಚಕಾರಿಗಳು ಗ್ರಾಹಕರನ್ನು ಆಕರ್ಷಿ ಸುತ್ತಿವೆ. ಓಕುಳಿಗೆ ಕ್ಷಣಗಣನೆ ಆರಂಭ ವಾಗುತ್ತಿದ್ದಂತೆ ಬಣ್ಣದ ಅಂಗಡಿಗಳ ಮುಂದೆ ಜನರು ಗಿಜಿಗಿಡುತ್ತಿದ್ದಾರೆ. ನೆಚ್ಚಿನ ಬಣ್ಣಗಳನ್ನು ಕೊಂಡೊಯ್ಯುತ್ತಿದ್ದ ದೃಶ್ಯ ನಗರದಲ್ಲಿ ಕಂಡುಬರುತ್ತಿದೆ.

ನಗರದ ಗಾಂಧಿ ಮಾರುಕಟ್ಟೆ, ಜನತಾ ಬಜಾರ್‌, ಗ್ರೀನ್‌ಸ್ಟ್ರೀಟ್‌ ರಸ್ತೆಯಲ್ಲಿನ ಅನೇಕ ಅಂಗಡಿಯಲ್ಲಿ ತರಹೇವಾರಿ ಬಣ್ಣಗಳು, ವಿವಿಧ ನಮೂನೆಯ ಮುಖವಾಡಗಳು ಬಿಕರಿ ಯಾಗುತ್ತಿವೆ. ಶಿವಾಜಿ ವೃತ್ತ, ಕಮಲಾಕರ ರಸ್ತೆ, ಸವಿತಾ ಸರ್ಕಲ್‌, ಸುಭಾಷ್‌ ಸರ್ಕಲ್‌ ಬಳಿಯಲ್ಲೂ ತಾತ್ಕಾಲಿಕ ಮಳಿಗೆಗಳು ತಲೆ ಎತ್ತಿವೆ.‌

ಬಣ್ಣದ ದರ ತುಸು ಏರಿಕೆ: ಕಳೆದ ವರ್ಷಕ್ಕೆ ಹೋಲಿಸಿದರೆ ಬಣ್ಣಗಳು, ಮುಖವಾಡ ದರದಲ್ಲಿ ತುಸು ಏರಿಕೆಯಾಗಿದೆ. ಆದರೆ ಇವುಗಳ ಖರೀದಿಗೆ ಜನತೆ ಹಿಂದೆ ಬಿದ್ದಿಲ್ಲ. 250 ಗ್ರಾಂ ತೂಕದ ಬಣ್ಣದ ಪೊಟ್ಟಣ ₹20 ರಿಂದ ₹25ಕ್ಕೆ, ಪಿಚಕಾರಿಗಳು ಒಂದಕ್ಕೆ ₹30 ರಿಂದ ₹70ರವರೆಗೆ ದರವಿದೆ. ಇನ್ನೂ ಮುಖವಾಡಗಳು ಒಂದಕ್ಕೆ ₹ 30ರಿಂದ ₹150ರವರೆಗೆ ಮಾರಾಟ ವಾಗುತ್ತಿದೆ.

‘ಮಳಿಗೆಯಲ್ಲಿ ತರಹೇವಾರಿ ಬಣ್ಣಗಳು, ಪಿಚಕಾರಿಗಳು ಮಾತ್ರವಲ್ಲದೇ ರಾಕ್ಷಸ, ಕರಡಿ, ಗಣೇಶ, ಭೂತ, ಹುಲಿ, ಬೆಕ್ಕು ಹೀಗೆ ನಾನಾ ತರಹದ ಮುಖವಾಡಗಳು ಜನರನ್ನು ಆಕರ್ಷಿಸುತ್ತಿವೆ. ಬಣ್ಣದ ಮಳಿಗೆಗಳು ಹೆಚ್ಚಾಗಿರುವುದರಿಂದ ವ್ಯಾಪಾರ ಅಷ್ಟಕಷ್ಟೇ. ಬಣ್ಣದೋಕುಳಿಗೆ ಇನ್ನು ಒಂದೇ ದಿನ ಬಾಕಿಯಿದ್ದು, ಗ್ರಾಹಕರು ಬಣ್ಣದ ಖರೀದಿಯತ್ತ ಮುಖಮಾಡಿ ರುವುದು ಸ್ವಲ್ಪ ನಿಟ್ಟುಸಿರು ಬಿಡುವಂತಾ ಗಿದೆ’ ಎನ್ನುತ್ತಾರೆ ಬಣ್ಣದ ವ್ಯಾಪಾರಿ ನಾಗೇಶ್‌ ಶೆಟ್ಟಿ.

‘ನಗರದಲ್ಲಿ ಸೋಮವಾರ ಓಕುಳಿ ಯಾಟ ನಡೆಯಲಿದ್ದು, ಮಧ್ಯಾಹ್ನ ದವರೆಗೆ ಎಲ್ಲ ಅಂಗಡಿಗಳು ಸ್ವಯಂ ಘೋಷಿತ ಬಂದ್‌ ಆಗಿರುತ್ತವೆ. ಹೀಗಾಗಿ ಈಗಲೇ ಬಣ್ಣಗಳು ಖರೀದಿ ಸಿದ್ದೇನೆ. ಮಕ್ಕಳಿಗಾಗಿ ಇಷ್ಟವಾದ ಪಿಚಕಾರಿ ಹಾಗೂ ಮುಖವಾಡ ಕೊಂಡಿದ್ದೇನೆ’ ಎಂದು ಸ್ಥಳೀಯ ದಿನಕರ ನಾಯ್ಕ ಹೇಳಿದರು.

**

ವೇಷಧಾರಿಗಳ ಮೆರುಗು
ನಗರದ ಬೀದಿ ಬೀದಿಗಳಲ್ಲಿ ಸಂಚರಿಸುತ್ತಿರುವ ವಿವಿಧ ವೇಷಧಾರಿಗಳು ಹೋಳಿ ಹಬ್ಬಕ್ಕೆ ಮತ್ತಷ್ಟು ಮೆರುಗು ನೀಡಿದ್ದಾರೆ. ರಾವಣ, ಭೂತ ಹೀಗೆ ಬಗೆ ಬಗೆಯ ವೇಷ ಗಳನ್ನು ತೊಟ್ಟು, ನಗರದಲ್ಲಿ ಅಡ್ಡಾಡುತ್ತಿರುವ ಅವರು ಎಲ್ಲರ ಗಮನ ಸೆಳೆಯುತ್ತಿದ್ದಾರೆ.

**

ದ್ವಿತೀಯ ಪಿಯುಸಿ ಪರೀಕ್ಷೆ ನಡೆಯುತ್ತಿದೆ. ಅಲ್ಲದೇ ಎಸ್ಸೆಸ್ಸೆಲ್ಸಿ ಪರೀಕ್ಷೆ ಸಮೀಪಿಸಿದೆ. ಹೀಗಾಗಿ ಈ ಬಾರಿಯ ಹೋಳಿ ಹಬ್ಬದಲ್ಲಿ ಬಣ್ಣದ ವ್ಯಾಪಾರ ಸ್ವಲ್ಪ ಕುಸಿತ ಕಂಡಿದೆ.
–ರಾಜೇಂದ್ರ ಕೊಠಾರಕರ, ಬಣ್ಣದ ವ್ಯಾಪಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT