ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾಸ್ಥ್ಯ ಸಮಾಜ ನಿರ್ಮಾಣ ಅಗತ್ಯ

ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಹೇಳಿಕೆ
Last Updated 13 ಮಾರ್ಚ್ 2017, 6:16 IST
ಅಕ್ಷರ ಗಾತ್ರ

ಉಜಿರೆ: ಮದ್ಯಪಾನ ಮಾಡುವುದ ರಿಂದ ಸಮಾಜ ಸ್ವಾಸ್ಥ್ಯ ಹಾಳಾಗುತ್ತಿದೆ. ಇದು ವಿಷಾದನೀಯ ಸಂಗತಿ.  ವ್ಯಸನ ಮುಕ್ತ  ಆರೋಗ್ಯಪೂರ್ಣ ಸಮಾಜ ರೂಪಿಸುವಲ್ಲಿ ಬೀದಿ ನಾಟಕ ಅತ್ಯಂತ ಪ್ರಭಾವಿ ಹಾಗೂ ಪರಿಣಾಮಕಾರಿ ಮಾಧ್ಯಮ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅವರು ಹೇಳಿದರು.

ಅವರು ಭಾನುವಾರ ಧರ್ಮಸ್ಥಳ ದಲ್ಲಿ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ, ಪುತ್ತೂರು ವಕೀಲರ ಸಂಘ ಹಾಗೂ ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನಜಾಗೃತಿ ಸಪ್ತಾಹದ ಅಂಗವಾಗಿ ಆಯೋಜಿಸ ಲಾದ ಬೀದಿ ನಾಟಕ ವೀಕ್ಷಿಸಿದ ಬಳಿಕ ಅವರು ಮಾತನಾಡಿದರು.

ಯುವಜನತೆ ದೇಶದ ಅಮೂಲ್ಯ ಮಾನವ ಸಂಪನ್ಮೂಲವಾಗಿದ್ದು, ಅವ ರನ್ನು ಸರಿದಾರಿಗೆ ತಂದು ವ್ಯಸನಮು ಕ್ತರನ್ನಾಗಿ ಮಾಡುವಲ್ಲಿ ಬೀದಿ ನಾಟಕ ಪರಿಣಾಮಕಾರಿ ಸಂದೇಶ ನೀಡುತ್ತದೆ. ಮದ್ಯಪಾನದ ಬಗ್ಗೆ ಪ್ರತಿಭಟನೆ ಮತ್ತು ವಿರೋಧಕ್ಕಿಂತ ಮನ:ಪರಿವರ್ತನೆ ಮಾಡುವುದು ಅಗತ್ಯವಾಗಿದೆ. ಜನಜಾ ಗೃತಿ ವೇದಿಕೆ ಹಾಗೂ ಬೀದಿ ನಾಟಕ ಪ್ರದರ್ಶನದ ಮೂಲಕ ದುಶ್ಚಟಮುಕ್ತ ಆರೋಗ್ಯಪೂರ್ಣ ಸಮಾಜ ನಿರ್ಮಾಣ ಆದಾಗ ಮಾತ್ರ ಸಮಾಜದ ಎಲ್ಲ ಕುಟುಂಬದಲ್ಲಿ ನೆಮ್ಮದಿಯ ವಾತಾವರಣ ನಿರ್ಮಾಣ ಆಗಲಿದೆ ಎಂದರು.

ಸವಣೂರಿನ ಶ್ರವಣರಂಗ ಪ್ರತಿಷ್ಠಾನದ ಕಲಾವಿದರು ಹೆಣದೂರು ಬೀದಿ ನಾಟಕದ ಮೂಲಕ ಮದ್ಯಪಾನದ ದುಶ್ಪರಿಣಾಮಗಳನ್ನು ಹೃದಯಸ್ಪರ್ಶಿ ಯಾಗಿ ಮನವರಿಕೆ ಮಾಡಿದರು.

ಹೇಮಾವತಿ ವಿ. ಹೆಗ್ಗಡೆ ಅವರು ಉಪಸ್ಥಿತರಿದ್ದರು. ಜನಜಾಗೃತಿ ವೇದಿಕೆ ನಿರ್ದೇಶಕ ವಿವೇಕ್ ಪ್ಯಾಸ್ ಮತ್ತು ಯೋಜನಾಧಿಕಾರಿ ತಿಮ್ಮಯ್ಯ ನಾಯ್ಕ,  ಯೋಜನೆಯ ನಿರ್ದೇಶಕ ಸೀತಾರಾಮ ಶೆಟ್ಟಿ ಹಾಗೂ ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT