ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಜನೆ ಮೂಲಕ ಜನಾಂದೋಲನ

ಬ್ರಹ್ಮಾವರ: 6ನೇ ದಿನಕ್ಕೆ ಕಾಲಿಟ್ಟ ಹೋರಾಟ
Last Updated 13 ಮಾರ್ಚ್ 2017, 6:16 IST
ಅಕ್ಷರ ಗಾತ್ರ

ಬ್ರಹ್ಮಾವರ: ಈ ಬಾರಿಯ ಬಜೆಟ್‌ನಲ್ಲಿ ಬ್ರಹ್ಮಾವರವನ್ನು ತಾಲ್ಲೂಕು ಆಗಿ ಅನು ಮೋದಿಸುವುದರೊಂದಿಗೆ ಪುರಸಭೆಗೆ ಸ್ಪಷ್ಟ ನಿರ್ಣಯ ಕೈಗೊಳ್ಳುವಂತೆ ಆಗ್ರಹಿಸಿ ತಾಲ್ಲೂಕು ಹೋರಾಟ ಸಮಿತಿ ಮತ್ತು ಬ್ರಹ್ಮಾವರ ಸುತ್ತಮುತ್ತಲಿನ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ವಿವಿಧ ಸಂಘಟನೆಗಳ ಸದಸ್ಯರು ನಡೆಸು ತ್ತಿರುವ ಜನಾಂದೋಲನ ಕಾರ್ಯಕ್ರಮ 6ನೇ ದಿನವಾದ ಭಾನುವಾರವೂ ನಡೆಯಿತು.

ಬ್ರಹ್ಮಾವರ ಬಸ್‌ ನಿಲ್ದಾಣದ ಬಳಿ ಸಭೆ ಸೇರಿ ಮಾತನಾಡಿದ ಸಮಿತಿಯ ಅಧ್ಯಕ್ಷ ಬಾರ್ಕೂರು ಸತೀಶ್ ಪೂಜಾರಿ, 2013ರ ಫೆ. 8ರಂದು ಹಿಂದಿನ ಸರ್ಕಾರ ತಾಲ್ಲೂಕು ಘೋಷಣೆ ಮಾಡಿತ್ತು. ಘೋಷಣೆಯಾಗಿ ಈಗಾಗಲೇ 4 ವರ್ಷ ಕಳೆದಿದ್ದು ಒಂದು ರೀತಿಯಲ್ಲಿ ಬ್ರಹ್ಮಾವರ ದ ಸುತ್ತಮುತ್ತಲ ಗ್ರಾಮದ ಜನರ ಆಶೋ ತ್ತರಗಳಿಗೆ ಧಕ್ಕೆಯಾಗಿದೆ ಎಂದರು.

ಉಡುಪಿ ಜಿಲ್ಲೆಯಲ್ಲಿಯೇ ಬ್ರಹ್ಮಾವರ ಅತೀ ಜನನಿಬಿಡ ಪ್ರದೇಶವಾಗಿದ್ದು, ಕೊಳಚೆ ನಿರ್ಮೂಲನೆ ಮತ್ತಿತ್ತರ ಮೂಲ ಸೌಕರ್ಯ ವಂಚಿತ ಪೇಟೆ ಭಾಗಗಳಿಂದ ಕೂಡಿದ ಈ ಬ್ರಹ್ಮಾವರವನ್ನು ಪುರಸಭೆ ಯಿಂದಲೂ ಕೈಬಿಟ್ಟಿದ್ದು ಈ ಪ್ರದೇಶದ ಅಭಿವೃದ್ಧಿಗೆ ಅಡಚಣೆಯಾಗಿದೆ. ಒಂದು ಕಡೆ ವಿಧಾನಸಭಾ ಕ್ಷೇತ್ರ ವಂಚಿತ ವಾಗಿದ್ದು, ಸರ್ಕಾರದ ಯೋಜನೆಗಳು ಬೇರೆ ಕ್ಷೇತ್ರದ ಪಾಲಾಗುತ್ತಿದೆ. ಒಟ್ಟಾರೆ ಯಾಗಿ ಅಭಾಗ್ಯವಾದ ಬ್ರಹ್ಮಾವರಕ್ಕೆ ವಿಶೇಷ ತಹಶೀಲ್ದಾರರ ನೇಮಕವಾಗಿ 15ವರ್ಷ ಕಳೆಯುತ್ತಾ ಬಂದರೂ ತಾಲ್ಲೂಕು ಕೇಂದ್ರವಾಗಲು ಹೋರಾಟ ಅನಿವಾರ್ಯವಾಗಿದೆ ಎಂದರು.

ಈ ಬಾರಿಯ ಬಜೆಟ್‌ನಲ್ಲಿ ಬ್ರಹ್ಮಾವ ರವನ್ನು ತಾಲ್ಲೂಕು ಕೇಂದ್ರವನ್ನಾಗಿ ಅನುಮೋದಿಸಿ ಅನುದಾನ ಬಿಡುಗಡೆ ಮಾಡಬೇಕು. ಇದರಿಂದ ವಿದ್ಯಾರ್ಥಿ ಗಳಿಗೆ, ಕಾರ್ಮಿಕರಿಗೆ, ಸಾರ್ವಜನಿಕರಿಗೆ ಉಡುಪಿ ಅಥವಾ ಕುಂದಾಪುರಕ್ಕೆ ದಿನನಿತ್ಯ ಅಲೆದಾಡುವುದು ತಪ್ಪುವುದು ಎಂದು ತಿಳಿಸಿದರು.

ಭಾನುವಾರವಾದರೂ ಮನವಿ: 5ದಿನ ಗಳಿಂದ ಜನಾಂದೋಲನದ ಮೂಲಕ ವಿಶೇಷ ತಹಶೀಲ್ದಾರ್‌ ಅವರ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿಯನ್ನು ನೀಡುತ್ತಿದೆ. ಭಾನುವಾರ ವಿಶೇಷ ತಹಶೀ ಲ್ದಾರ್‌ ಅವರ ಪರವಾಗಿ ಬ್ರಹ್ಮಾವರದ ಕಂದಾಯ ಪರಿವೀಕ್ಷಕ ಲಕ್ಷ್ಮೀನಾರಾ ಯಣ ಭಟ್ ಮನವಿ ಸ್ವೀಕರಿಸಿದ್ದು ವಿಶೇಷವಾಗಿತ್ತು.

ಜನಾಂದೋಲನದಲ್ಲಿ ಬಾರ್ಕೂರು, ಹಂದಾಡಿಯ ಬಿಲ್ಲವ ಸೇವಾ ಸಂಘ, ಹನೆಹಳ್ಳಿ ಕಂಬಳಕಟ್ಟು ಮಿತ್ರ ಮಂಡಳಿ, ವೀರಮಾರುತಿ ಜಿಮ್‌ನ ಸದಸ್ಯರು, ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರು, ಶ್ರೀರಾಮ ಮಂದಿರ ಭಜನಾ ಮಂಡಳಿ, ಬೈಕಾಡಿ ಫ್ರೆಂರ್ಡ್ಸ್, ರಿಕ್ಷಾ ಮತ್ತು ಕಾರು ಮಾಲೀಕರ ಸಂಘದ ಸದಸ್ಯರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT