ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೋಷಣೆ ಮುಕ್ತ ಸಮಾಜಕ್ಕೆ ಕೈಜೋಡಿಸಿ

‘ಪಂಚಾಯಿತಿ ನಡಿಗೆ ಕೊರಗ ಸಮುದಾಯದೆಡೆಗೆ’ ಕಾರ್ಯಕ್ರಮ
Last Updated 13 ಮಾರ್ಚ್ 2017, 6:18 IST
ಅಕ್ಷರ ಗಾತ್ರ

ಉಡುಪಿ: ಜಿಲ್ಲೆಯ ಮೂಲ ನಿವಾಸಿಗ ಳಾದ ಕೊರಗ ಸಮುದಾಯ ಶಿಕ್ಷಣ ಮತ್ತು ಮಾಹಿತಿಯ ಕೊರತೆಯಿಂದಾಗಿ ಶೋಷಣೆಗೆ ಒಳಗಾಗಿದೆ. ಹಾಗಾಗಿ, ಅಗತ್ಯ ಶಿಕ್ಷಣ ಮತ್ತು ಮಾಹಿತಿ ಪಡೆದು ಕೊಂಡಲ್ಲಿ ಇತರೆ ಸಮುದಾಯಗಳಂತೆ ಈ ಸಮುದಾಯದ ಅಭಿವೃದ್ಧಿ ಸಾಧ್ಯ. ಈ ಬಗ್ಗೆ ಕೊರಗ ಸಮುದಾಯದವರು ಎಚ್ಚೆ ತ್ತುಕೊಳ್ಳುವ ಅವಶ್ಯಕತೆ ಇದೆ ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್‌ ಹೇಳಿದರು.

ಅಲೆವೂರು ಗ್ರಾಮ ಪಂಚಾಯಿತಿ ವತಿಯಿಂದ ಅಲೆವೂರು ಗ್ರಾಮ ಪಂಚಾ ಯಿತಿಯ ಸಿದ್ದಾರ್ಥನಗರದ ಕೊರಗ ಕಾಲೊನಿಯಲ್ಲಿ ಭಾನುವಾರ ನಡೆದ ‘ಪಂಚಾಯಿತಿ ನಡಿಗೆ ಕೊರಗ ಸಮುದಾ ಯದೆಡೆಗೆ’ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಾನವ ಅಭಿವೃದ್ಧಿ ಸೂಚ್ಯಂಕ ಸೇರಿ ದಂತೆ ಎಲ್ಲ ಕ್ಷೇತ್ರಗಳಲ್ಲಿ ಉಡುಪಿ ಜಿಲ್ಲೆ ಮುಂಚೂಣಿಯಲ್ಲಿದೆ. ಆದರೆ, ದಲಿತರ ಶೋಷಣೆ ಸಂಪೂರ್ಣವಾಗಿ ನಿಂತಿದೆ ಎಂದೂ ಹೇಳಲು ಸಾಧ್ಯವಿಲ್ಲ. ಪ್ರಸ್ತುತ ಸಮಾಜದಲ್ಲಿಯೂ ಅಸ್ಪೃಶ್ಯತೆ ಆಚರಣೆ ಯಲ್ಲಿದ್ದು, ಕೆಳಮಟ್ಟದ ಮನಃಸ್ಥಿತಿ ಹಾಗೂ ಕೆಲ ವೃತ್ತಿಗಳಲ್ಲಿ ಅದು ಅಡಗಿದೆ. ಅದರ ಬದಲಾವಣೆಗೆ ಪ್ರತಿಯೊಬ್ಬರು ಕೈಜೋಡಿ ಸಬೇಕು ಎಂದರು.

ಅತ್ಯಂತ ಮುಗ್ಧರಾಗಿರುವ ಕಾರಣ ಈ ಸಮುದಾಯದ ಮೇಲೆ ನಿರಂತರ ಶೋಷಣೆ ನಡೆಯುತ್ತಿದೆ. ಜಿಲ್ಲೆಯ ಕೊರಗ ಸಮುದಾಯದ ಅಭಿವೃದ್ಧಿಗೆ ಸರ್ಕಾರದ ಕಾರ್ಯಕ್ರಮಗಳ ಸಂಪೂರ್ಣ ಮಾಹಿತಿ ಮತ್ತು ಶಿಕ್ಷಣ ಸೌಲಭ್ಯ ಒದಗಿ ಸಬೇಕಾಗಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲ ಇಲಾಖೆಗಳು ಮತ್ತು ಗ್ರಾಮ ಪಂಚಾ ಯಿತಿಗಳು ತಮ್ಮ ವ್ಯಾಪ್ತಿಯಲ್ಲಿನ ಕೊರಗ ಕಾಲೊನಿಗಳಿಗೆ ಭೇಟಿ ನೀಡಿ, ಮಾಹಿತಿ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊ ಳ್ಳುತ್ತಿವೆ. ಹಲವಾರು ವರ್ಷಗಳಿಂದ ಶೋಷಣೆಗೆ ಒಳಗಾಗಿರುವ ಈ ಸಮು ದಾಯದಲ್ಲಿ ಬದಲಾವಣೆ ತರಬೇಕಿದೆ ಎಂದು ಅಭಿಪ್ರಾಯಪಟ್ಟರು.

ಉದ್ಯೋಗ ಖಾತರಿ ಯೋಜನೆಯಲ್ಲಿ ಪ್ರತಿಯೊಬ್ಬರೂ ಜಾಬ್‌ ಕಾರ್ಡ್‌ ಮಾಡಿ ಸಿಕೊಂಡಲ್ಲಿ ವಾರ್ಷಿಕ ಹೆಚ್ಚುವರಿಯಾಗಿ ₹22 ಸಾವಿರ ಆದಾಯ ಗಳಿಸಬಹುದು. ಕೆಲಸವಿಲ್ಲದ ಸಮಯದಲ್ಲಿ ಈ ಕಾರ್ಡ್‌ ಹೊಂದಿದವರಿಗೆ ಪಂಚಾಯಿತಿ ಉದ್ಯೋಗ ನೀಡಲಿದೆ. ಐಟಿಡಿಪಿ ಇಲಾಖೆ ಹಾಗೂ ಇತರೆ ಇಲಾಖೆಗಳಲ್ಲಿ ತಮಗೆ ಇರುವ ಕಾರ್ಯಕ್ರಮಗಳ ಮಾಹಿ ತಿ ಪಡೆದು, ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳುವಂತೆ ಸಲಹೆ ನೀಡಿದರು.

ವಿಧಾನ ಪರಿಷತ್‌ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾ ಪಂಚಾ ಯಿತಿ ಅಧ್ಯಕ್ಷ ದಿನಕರ ಬಾಬು, ಉಪಾ ಧ್ಯಕ್ಷೆ ಶೀಲಾ ಕೆ. ಶೆಟ್ಟಿ, ಅಲೆವೂರು ಗ್ರಾ. ಪಂ. ಅಧ್ಯಕ್ಷ ಶ್ರೀಕಾಂತ ನಾಯಕ್‌, ತಾಲ್ಲೂಕು ಪಂಚಾಯಿತಿ ಸದಸ್ಯೆ ಬೇಬಿ ರಾಜೇಶ್‌, ನೀಲಾವರ ಮಹಿಷ ಮರ್ಧಿನಿ ದೇವಾಲಯದ ಆಡಳಿತ ಮೊಕ್ತೇಸರ ಬೈಕಾಡಿ ಸುಪ್ರಸಾದ್‌ ಶೆಟ್ಟಿ, ಪಿಡಿಒ ಬೂದ ಪೂಜಾರಿ, ಕೊರಗ ಮುಖಂಡ ರಾದ ರವಿ, ಲಕ್ಷ್ಮೀ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಸುರೇಶ್‌ ಮತ್ತಿತರರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸುಂದರಿ ಮತ್ತು ತುಕ್ರ ಕೊರಗ ದಂಪತಿ ಮನೆಯಲ್ಲಿ ಜಿಲ್ಲಾಧಿಕಾರಿ ಹಾಗೂ ಜನಪ್ರತಿನಿಧಿಗ ಳಿಂದ ಸಹಭೋಜನ ಕಾರ್ಯಕ್ರಮ ನಡೆಯಿತು. ಸುಧಾಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT