ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹3 ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಾಣ

ಶೃಂಗೇರಿ ಪಟ್ಟಣ ಪಂಚಾಯಿತಿ ಕಟ್ಟಡಕ್ಕೆ ಸ್ವಾಮೀಜಿ ಶಂಕುಸ್ಥಾಪನೆ
Last Updated 13 ಮಾರ್ಚ್ 2017, 6:27 IST
ಅಕ್ಷರ ಗಾತ್ರ

ಶೃಂಗೇರಿ: ಪಟ್ಟಣ ಪಂಚಾಯಿತಿಯ ₹ 3 ಕೋಟಿ ವೆಚ್ಚದ ನೂತನ ಕಟ್ಟಡ ನಿರ್ಮಾ ಣಕ್ಕೆ ಗುರುವಾರ ಶೃಂಗೇರಿ ಶಾರದ ಪೀಠದ ಭಾರತೀತೀರ್ಥ ಸ್ವಾಮೀಜಿ ಹಾಗೂ ವಿಧುಶೇಖರ ಭಾರತೀ ಸ್ವಾಮೀಜಿ ಅವರಿಂದ ಶಂಕುಸ್ಥಾಪನೆ ನಡೆಯಿತು.

ಪಟ್ಟಣದ ಹರಿಹರ ಬೀದಿಯಲ್ಲಿ ಈಗಾಗಲೇ ನೆಲಸಮಗೊಳಿಸಿರುವ ಪಟ್ಟಣ ಪಂಚಾಯಿತಿ 8 ದಶಕಗಳ ಹಿಂದಿನ ಕಚೇರಿ ಕಟ್ಟಡ ಇದ್ದ ಸ್ಥಳದಲ್ಲಿ ಎಸ್.ಎಸ್.ಎಫ್. ವಿಶೇಷ ಯೋಜನೆ ಅಡಿಯಲ್ಲಿ ಹೊಸದಾಗಿ ‘ಚಂದ್ರಶೇಖರ ಭಾರತೀ ಸಭಾಭವನ’ ಹಾಗೂ ಪಟ್ಟಣ ಪಂಚಾಯಿತಿಯ  ನೂತನ ಕಚೇರಿ ಸಂಕೀರ್ಣವನ್ನು ನಿರ್ಮಿಸಲಾಗುತ್ತಿದೆ.

ಸ್ವಾಮೀಜಿಗಳು ಶಂಕುಸ್ಥಾಪನಾ ಶಿಲೆಯ ಮೇಲೆ ಪ್ರಾರ್ಥನಾ ಪೂರ್ವಕ ವಾಗಿ ನವರತ್ನಗಳನ್ನು ಇರಿಸಿ, ತೆಂಗಿನ ಕಾಯಿ ಒಡೆದು ಆರತಿ ಸಲ್ಲಿಸಿದರು. ನಂತರ ಯೋಜನಾ ಶಿಲಾಫಲಕಗಳ ಅನಾವರಣ ಮಾಡಿದರು. ಈ ಸಂದರ್ಭ ದಲ್ಲಿ ಹಿಂದಿದ್ದ ಕಟ್ಟಡವನ್ನು 1938ರಲ್ಲಿ ಶಾರದ ಪೀಠದ ಚಂದ್ರಶೇಖರ ಭಾರತೀ ಮಹಾಸ್ವಾಮಿಗಳು ಉದ್ಘಾಟಿಸಿದ ಫಲಕವನ್ನು ನೋಡಿ ಸಂತಸಪಟ್ಟರು.

ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸುಮಾಸೋಮಶೇಖರ್, ಶಾಸಕ ಡಿ.ಎನ್.ಜೀವರಾಜ್, ಪಟ್ಟಣ ಪಂಚಾ ಯಿತಿಯ ಸದಸ್ಯರಾದ ನಾಗೇಶ್‌ ಕಾಮತ್, ಮುಖ್ಯಾಧಿಕಾರಿ ಅಶೋಕ್, ಎಂಜಿನಿಯರ್ ದಿನೇಶ್, ಕಟ್ಟಡ ನಿರ್ಮಾಣ ಗುತ್ತಿಗೆದಾರ ಶೃಂಗೇಶ್ವರ ಹೆಗಡೆ ಇದ್ದರು.

ಮಠದ ಆಡಳಿತಾಧಿಕಾರಿ ಡಾ.ವಿ.ಆರ್.ಗೌರೀಶಂಕರ್, ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ಶಿವಶಂಕರ್, ಬಿಜೆಪಿ ಜಿಲ್ಲಾ ಉಪಾಧ್ಯಾಕ್ಷ ಎ.ಎಸ್ ನಯನ ,ತಾಲ್ಲೂಕು ಅಧ್ಯಕ್ಷ ನಟೇಶ್, ಹಾಗೂ ನೂತನ್ ಕುಮಾರ್ , ಪೂರ್ಣಿಮಾ ಸಿದ್ದಪ್ಪ,  ಪಟ್ಟಣ ಪಂಚಾಯಿತಿ ಸಿಬ್ಬಂದಿ ಉಪಸ್ಥಿತರಿದ್ದರು.

ಶತಮಾನದ ನಂಟು
ಶೃಂಗೇರಿ ಪಟ್ಟಣ ಪಂಚಾಯಿತಿ ಮತ್ತು ಶಾರದಾ ಪೀಠದ ಗುರುಗಳ ಸಂಸ್ಥಾನಕ್ಕೆ ಶತಮಾನಕ್ಕೂ ಹಿಂದಿನ ನಂಟು ಇದೆ. ಶೃಂಗೇರಿ ಪುರಸಭೆಯು 1887ರಲ್ಲಿ ಅಸ್ತಿತ್ವಕ್ಕೆ ಬಂದಿತ್ತು. ಆಗ ಪುರಸಭೆಯಿಂದ ವಿಧಿಸಲಾಗುತ್ತಿದ್ದ ಆಕ್ಟ್ರಾಯ್ ಸುಂಕದಲ್ಲಿ ಅರ್ಧ ಮೊತ್ತವು ಮಠಕ್ಕೆ ಸಲ್ಲುತ್ತಿತ್ತು. 1893ರಲ್ಲಿ ಸಚ್ಚಿದಾ ನಂದ ಶಿವಾಭಿನವ ನೃಸಿಂಹಭಾರತೀ ಸ್ವಾಮಿಗಳು ಮಠಕ್ಕೆ ಸಲ್ಲುತ್ತಿದ್ದ ಅರ್ಧ ಮೊತ್ತದ ಭಾಗವನ್ನು ಜನರ ಸೌಕರ್ಯ ಕ್ಕಾಗಿ ಬಳಸುವಂತೆ ಪುರಸಭೆಗೆ ಹಿಂದಿ ರುಗಿಸುವ ಆಜ್ಞೆ ಮಾಡಿರುವುದು ಮಠದ ದಾಖಲೆಗಳಲ್ಲಿ ಉಲ್ಲೇಖ ವಾಗಿದೆ ಎಂದು ಶಾರದ ಪೀಠದ ಭಾರತೀ ತೀರ್ಥ ಸ್ವಾಮೀಜಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT