ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಿಧೆಡೆ ಹೋಳಿ ಹಬ್ಬ ಆಚರಣೆ, ಸಂಭ್ರಮ

Last Updated 13 ಮಾರ್ಚ್ 2017, 6:30 IST
ಅಕ್ಷರ ಗಾತ್ರ

ಅಕ್ಕಿಆಲೂರ: ಇಲ್ಲಿಗೆ ಸಮೀಪವಿರುವ ಹಿರೇಬಾಸೂರು ಗ್ರಾಮದಲ್ಲಿ ಭಾನುವಾರ ಹೋಳಿ ಹುಣ್ಣಿಮೆಯನ್ನು ಸಡಗರದಿಂದ ಆಚರಿಸಲಾಯಿತು. ಬೆಳಿಗ್ಗೆಯಿಂದ ಸಂಜೆಯವರೆಗೆ ಮಕ್ಕಳು, ಯುವಕರು ಪರಸ್ಪರ ಬಣ್ಣದಾಟದಲ್ಲಿ ಮಿಂದೆದ್ದರು.

ವಿವಿಧೆಡೆ ಮುಂಜಾನೆ 7 ಗಂಟೆಯಿಂದಲೇ ಪುಟ್ಟ ಪುಟ್ಟ ಮಕ್ಕಳು ಬಣ್ಣ ಹಿಡಿದು ಬೀದಿಗೆ ಬಂದು ಹೋಳಿ ಹುಣ್ಣಿಮೆಗೆ ಚಾಲನೆ ನೀಡಿದರು. 10 ಗಂಟೆಯ ಹೊತ್ತಿಗೆ ದೊಡ್ಡವರೂ ಸಹ ಹೊರಬಂದು ಬಣ್ಣದಾಟಕ್ಕೆ ಮೆರಗು ನೀಡಿದರು.  ಯುವಕ–ಯುವತಿಯರು ಗುಂಪು ಗುಂಪಾಗಿ ಸಮೀಪದ ಗಳೆಯರ ಮನೆಗಳಿಗೆ ತೆರಳಿ ಬಣ್ಣ ಎರಚಿ ಸಂತಸಪಟ್ಟರು. ಬಣ್ಣ ಹಚ್ಚಿಕೊಂಡು ಹಾಡುಗಳಿಗೆ ಹೆಜ್ಜೆ ಹಾಕುತ್ತಿದ್ದ ಯುವಕರ ಗುಂಪು ಹೋಳಿಗೆ ವಿಶೇಷ ಮೆರುಗು ತಂದುಕೊಟ್ಟಿತು.

ಸಂಜೆ 4 ಗಂಟೆಗೆ ವಿವಿಧ ಸ್ಥಳಗಳಲ್ಲಿ ಕಾಮದಹನ ನೆರವೇರಿಸಿ ಓಕುಳಿ ಆಡಲಾಯಿತು. ಕಾಮನ ಮೂರ್ತಿಯ ಚಿತ್ರಪಟವಿಟ್ಟು ಕಾಮಣ್ಣನ ಮಕ್ಕಳು.. ಕಳ್ಳನನ್ನ ಮಕ್ಕಳು.. ಎಂದು ಹಾಡಿ ಕುಣಿದಾಡಿದರು. ನಂತರ ಅಲ್ಲಲ್ಲಿ ಕಳವು ಮಾಡಿ ತಂದ ಕುಳ್ಳು, ಕಟ್ಟಿಗೆಯಿಂದ ಕಾಮಣ್ಣನನ್ನು ದಹಿಸಿ, ಹೋಳಿ ಹುಣ್ಣಿಮೆಯ ಸಂಭ್ರಮಕ್ಕೆ ತೆರೆ ಎಳೆದರು.

ಕಾಮರತಿ ಮೂರ್ತಿ ಪ್ರತಿಷ್ಠಾನೆ

ರಾಣೆಬೆನ್ನೂರು: ನಗರದ ದುರ್ಗಾ ದುರ್ಗಾ ವೃತ್ತದಲ್ಲಿ ಹಿಂದೂ ಪರ ಸಂಘಟನೆಗಳು, ಎಬಿವಿಪಿ, ವಿರಾಟ ಹಿಂದೂ ಸಂಘಟನೆ ಹಾಗೂ ಆರ್ಎಸ್ಎಸ್ ಸಂಘಟನೆಗಳ ಆಶ್ರಯ ದಲ್ಲಿ ಹೋಳಿ ಹುಣ್ಣಿಮೆ ಹಬ್ಬದ ಪ್ರಯುಕ್ತ ಕಾಮ-ರತಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ.

ಬಿಜೆಪಿ ರಾಜ್ಯ ಕಾರ್ಯಕರಿಣಿ ಸದಸ್ಯ ಎ.ಬಿ.ಪಾಟೀಲ ಮಾತನಾಡಿದರು.

ಉಮೇಶ ಹೊನ್ನಾಳಿ ಪ್ರಕಾಶ ಮಣೇಗಾರ, ವೆಂಕಟೇಶ ಏಕಬೋಟೆ, ಜಿ.ಜಿ.ಹೊಟ್ಟಿಗೌಡ್ರ, ಪ್ರಕಾಶ ಪೂಜಾರ ಹಾಗೂ ವಿವಿಧ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಇದ್ದರು.

ಬಣ್ಣದಾಟ
ಸವಣೂರ:
ರಂಗಪಂಚಮಿ ಅಂಗವಾಗಿ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಭಾನುವಾರ ಬಣ್ಣದಾಟವನ್ನು ಆಡಲಾಯಿತು. ನಂತರ, ಕಾಮದಹನ ಮಾಡಲಾಯಿತು.

ಹುರಳೀಕುಪ್ಪಿ ಗ್ರಾಮದಲ್ಲಿ ಯುವ ಕರು ಉತ್ಸಾಹದಿಂದ ಪರಸ್ಪರ ಬಣ್ಣ ಎರಚುವ ಮೂಲಕ ಓಕಣಿಯಲ್ಲಿ ಪಾಲ್ಗೊಂಡು, ಕಾಮಣ್ಣನ ಮೆರವಣಿಗೆ ಯನ್ನು ಕೈಗೊಂಡು ಕಾಮದಹನ ಮಾಡಿದರು.

**

ಮೇದೂರ ಕಾಮದಹನ ಸಂಪನ್ನ
ರಟ್ಟೀಹಳ್ಳಿ:
ಸಮೀಪದ ಮೇದೂರ ಗ್ರಾಮದ ಕಾಮದಹನೋತ್ಸವ ಶನಿವಾರ ರಾತ್ರಿ 11 ಗಂಟೆಗೆ ಮೆರವಣಿಗೆ ಪ್ರಾರಂಭವಾಗಿ ಭಾನುವಾರ ಬೆಳಿಗ್ಗೆ 5.30 ರ ತನಕ ನಡೆದು ಹುಬ್ಬಾ ನಕ್ಷತ್ರದಲ್ಲಿ ಕಾಮ ದಹನ ಮಾಡುವುದರೊಂದಿಗೆ ಸಂಪನ್ನಗೊಂಡಿತು.

ಗ್ರಾಮದ ತುಂಬೆಲ್ಲಾ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿತ್ತು. ಬಸ್ ನಿಲ್ದಾಣದಿಂದ ಹುಟ್ಟು ಕಾಮೇಶ್ವರ ದೇವಸ್ಥಾನದ ಎರಡೂ ಬದಿಯಲ್ಲಿ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿತ್ತು. ಗ್ರಾಮಸ್ಥರು ಎಲ್ಲರೂ ಸೇರಿ ದಹನ ಮಾಡುವ ಸ್ಥಳದಲ್ಲಿ ಉರುವಲು ಸಂಗ್ರಹಿಸಿದ್ದರು. ಬೆರಣಿಗಳನ್ನು ಅಲಂಕಾರಿಕವಾಗಿ ಜೋಡಿಸಿದ ರೀತಿ ಕಣ್ಮನಗಳನ್ನು ಸೆಳೆಯುವಂತಿತ್ತು.

ಶನಿವಾರ ಸಂಜೆಯಿಂದ ಪ್ರಾರಂಭವಾದ ಜನ ಸಂದಣಿ ಬೆಳಿಗ್ಗೆ ತನಕ ಮುಂದುವರಿಯಿತು.ಈ ಸಂದರ್ಭದಲ್ಲಿ ನಡೆದ ಜಾತ್ರೆ ಜನರ ಮನಸ್ಸನ್ನು ಸೂರೆಗೊಂಡಿತು. ಮಧ್ಯರಾತ್ರಿಯಲ್ಲೂ ಜಾತ್ರೆ ಮುಂದುವರಿಯುವುದು ವಿಶೇಷವಾಗಿದೆ. ಮಕ್ಕಳೂ ಎಚ್ಚರವಾಗಿದ್ದು ಜಾತ್ರೆಯಲ್ಲಿ ಭಾಗವಹಿಸಿದ್ದುದು ಕಂಡು ಬಂದಿತು. ಇಡೀ ಗ್ರಾಮವೇ ಎಚ್ಚರವಾಗಿದ್ದು ಕಾಮದಹನಕ್ಕೆ ಸಾಕ್ಷಿಯಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT