ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಸೌಲಭ್ಯ ಸದ್ಬಳಕೆ: ರೈತರಿಗೆ ಸಲಹೆ

ರೇಷ್ಮೆ ಕೃಷಿ ತರಬೇತಿ ಕಾರ್ಯಾಗಾರ
Last Updated 13 ಮಾರ್ಚ್ 2017, 6:59 IST
ಅಕ್ಷರ ಗಾತ್ರ

ಗುಡಿಬಂಡೆ: ‘ರೈತರು ಸರ್ಕಾರದ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ಲಾಭ ಪಡೆಯಬೇಕು’ ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಗಾಯತ್ರಿ ನಂಜುಂಡಪ್ಪ ತಿಳಿಸಿದರು.

ತಾಲ್ಲೂಕಿನ ಚೆಂಡೂರು ಗ್ರಾಮದ ವೆಂಕಟರಮಣ ದೇವಸ್ಥಾನದ ಆವರಣ ದಲ್ಲಿ ಶನಿವಾರ ರೇಷ್ಮೆ ಇಲಾಖೆ ಹಮ್ಮಿ ಕೊಂಡಿದ್ದ ರೇಷ್ಮೆ ಕೃಷಿ ತರಬೇತಿ ಕಾರ್ಯಾಗಾರದಲ್ಲಿ  ಅವರು ಮಾತನಾಡಿದರು.

‘ರೈತರ ಸಮಗ್ರ ಅಭಿವೃದ್ಧಿಗೆ ಸರ್ಕಾರದ ಅನೇಕ ಸೌಲಭ್ಯಗಳನ್ನು ನೀಡುತ್ತಿದೆ. ಅವುಗಳನ್ನು ರೈತರು ಸದ್ಬಳಕೆ ಮಾಡಿಕೊಳ್ಳಬೇಕು. ಇತ್ತೀಚಿಗೆ ರೇಷ್ಮೆ ಬೆಳೆಯತ್ತ ರೈತರು ನಿರಾಸಕ್ತಿ ತೋರುತ್ತಿದ್ದಾರೆ. ಈ ನಿಟ್ಟಿನಲ್ಲಿ ರೇಷ್ಮೆ ಬೆಳೆಗೆ ಹೆಚ್ಚಿನ ರೀತಿಯಲ್ಲಿ ಸರ್ಕಾರ  ಸೌಲಭ್ಯಗಳನ್ನು ನೀಡುತ್ತಿದ್ದು, ರೈತರು ರೇಷ್ಮೆ ಬೆಳೆಗೆ ಒತ್ತು ನೀಡಬೇಕು’ ಎಂದರು.

ಡಿಸಿಸಿ ಬ್ಯಾಂಕ್ ನಿರ್ದೇಶಕ ಎಚ್. ನರಸಿಂಹರೆಡ್ಡಿ ಮಾತನಾಡಿ, ‘ಮಳೆ ಅಭಾವದಿಂದ ರೈತರು ಕೃಷಿ ಚಟುವ ಟಿಕೆಗಳನ್ನು ಕೈಗೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಬಂಡವಾಳ ಕೊರತೆ ಯಿಂದ ಭೂಮಿ ಮಾರಾಟ ಮಾಡಿ ಇತರ ಕಸಬನ್ನು ಹುಡುಕಿಕೊಂಡು ಬೇರೆ ಪ್ರದೇಶಗಳಿಗೆ ವಲಸೆ ಹೋಗುತ್ತಿದ್ದಾರೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಪಾರಂಪರೀಕ ರೇಷ್ಮೆ ಕೃಷಿ ಬೆಳೆ ಪದ್ಧತಿಯ ಜೊತೆಗೆ ಆಧುನಿಕ ಪದ್ಧತಿ ಅಳವಡಿಸಿಕೊಂಡಾಗ ರೈತ ಉತ್ತಮ ಇಳುವರಿ ಹಾಗೂ ಬೆಲೆ ಪಡೆಯ ಬಹುದು’ ಎಂದರು.

‘ಕೃಷಿಯಲ್ಲಿ ತಾಂತ್ರಿಕ ಅಂಶಗಳನ್ನು ಅಳವಡಿಸಿಕೊಂಡರೆ ಲಾಭವನ್ನು ಪಡೆಯಬಹುದು’ ಎಂದು ಹೇಳಿದರು.

ತಾಲ್ಲೂಕು ರೇಷ್ಮೆ ಬೆಳೆಗಾರರ ಸಂಘದಿಂದ ರೇಷ್ಮೆ ಬೆಳೆಗಾರರಾದ ಕಂಬಾಲಹಳ್ಳಿ ಗ್ರಾಮದ ರೈತ ವೈ.ಎ. ರಾಮಚಂದ್ರರೆಡ್ಡಿ, ಗವಿಕುಂಟಹಳ್ಳಿ ಗ್ರಾಮದ ಜಿ.ವೈ.ಚಿಕ್ಕಬೈಯಣ್ಣ ಅವರನ್ನು ಸನ್ಮಾನಿಸಲಾಯಿತು. 

ಜಿಲ್ಲಾ ಪಂಚಾಯಿತಿ ಸದಸ್ಯೆ ವರಲಕ್ಷ್ಮಿ ಎವಿಟಿ ನಾರಾಯಣಸ್ವಾಮಿ, ತಾಲ್ಲೂಕು ಪಂಚಾಯಿತಿ ಸದಸ್ಯರಾದ ರಾಮಾಂಜಿ, ಜಯರಾಮರೆಡ್ಡಿ, ಮಧುಶ್ರೀ, ಆದಿನಾರಾ ಯಣಪ್ಪ, ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಅನಿಸ್‍ಸಲ್ಮಾ, ರೇಷ್ಮೆ ಇಲಾ ಖೆಯ ಎಸ್.ಅಮರನಾಥ, ಚಿನ್ನಕೈ ವಾರವಯ್ಯ, ಮಂಜುನಾಥ ಗಣಪತಿ ಹೆಗಡೆ, ಹಂಪಸಂದ್ರ ಗ್ರಾಮ ಪಂಚಾ ಯಿತಿ ಅಧ್ಯಕ್ಷೆ  ವೆಂಕಟಮ್ಮ, ಉಪಾಧ್ಯಕ್ಷ ಬಾಲಕೃಷ್ಣಾರೆಡ್ಡಿ, ರೇಷ್ಮೆ ಕೃಷಿ ಬೆಳೆಗಾರರ ಸಂಘದ ಅಧ್ಯಕ್ಷ ಪಿ.ಎನ್.ವೇಣು ಗೋಪಾಲ್, ಮುಖಂಡ ನರೇಂದ್ರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT