ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಸಿಗರ ಸ್ನೇಹಿತರು!

ತಮ್ಮ ಕಿಸೆಯಲ್ಲಿರುವ ಸ್ಮಾರ್ಟ್‌ ಫೋನ್‌ನಲ್ಲೇ ಮಾಹಿತಿ
Last Updated 13 ಮಾರ್ಚ್ 2017, 19:30 IST
ಅಕ್ಷರ ಗಾತ್ರ
ಬೆಂಗಳೂರು, ದೆಹಲಿ, ಮುಂಬೈನಂತ  ಮಹಾನಗರಗಳಿಗೆ ಮೊದಲ ಬಾರಿ ಹೋಗುವ ಮಂದಿ ಅನೇಕ ಸಮಸ್ಯೆಗಳನ್ನು ಎದುರಿಸುತ್ತಾರೆ.  ಸ್ವಂತ ವಾಹನದಲ್ಲಿ ಬಂದವರಿಗೆ ತಾವು ತಲುಪುವ ಸ್ಥಳಕ್ಕೆ ಯಾವ ರಸ್ತೆಯಲ್ಲಿ ಹೋಗಬೇಕು, ಸಂಚಾರ ದಟ್ಟಣೆ ಇಲ್ಲದ ರಸ್ತೆ ಯಾವುದು?, ಎಲ್ಲಿ ಪಾರ್ಕಿಂಗ್‌ ಸ್ಥಳವಿದೆ, ಉಳಿದುಕೊಳ್ಳಲು ಬಜೆಟ್‌ ಹೋಟೆಲ್‌ಗಳು ಎಲ್ಲಿವೆ ಎಂಬಂತಹ ಮಾಹಿತಿ ಸಿಗದೆ ಗೊಂದಲಕ್ಕೀಡಾಗುತ್ತಾರೆ.
 
ಇಂಥ ತೊಂದರೆಗಳಿಗೆ ಸಿಲುಕದಿರಲು ಹಲವು ಮಾರ್ಗಗಳಿವೆ. ತಮ್ಮ ಕಿಸೆಯಲ್ಲಿರುವ ಸ್ಮಾರ್ಟ್‌ ಫೋನ್‌ನಲ್ಲೇ ಮಾಹಿತಿ ಪಡೆಯಬಹುದು. ಗೂಗಲ್ ಪ್ಲೇನಲ್ಲಿ ವಿವಿಧ ಆ್ಯಪ್‌ಗಳನ್ನು ಡೌನ್‌ಲೋಡ್‌ ಮಾಡಿಕೊಂಡು ಮಾಹಿತಿ ಪಡೆಯಬಹುದು. 
 
ಗೂಗಲ್‌ ಮ್ಯಾಪ್‌ ಬಳಸಿ ದೂರದ ಸ್ಥಳಗಳಿಗೆ ಸುಲಭವಾಗಿ  ಹೋಗುವುದನ್ನು ತಿಳಿಯಬಹುದು. ವೈಫೈರ್‌ ಆ್ಯಪ್‌ ನಿಮಗೆ ಎಲ್ಲಿ ಉಚಿತ ವೈಫೈ ಸಿಗುತ್ತದೆಯೋ ಅದನ್ನು ಕನೆಕ್ಟ್‌ ಮಾಡುತ್ತದೆ. ನಿಮ್ಮ ನೆಚ್ಚಿನ ವೈಫೈ ಪಾಸ್‌ವರ್ಡ್‌ಅನ್ನು ಒಮ್ಮೆ ಸೇವ್‌ ಮಾಡಿದರೆ ಸಾಕು, ಪದೇಪದೇ ಟೈಪ್‌ ಮಾಡುವ ಅಗತ್ಯವಿಲ್ಲ.
 
ಜಿಪಿಎಸ್‌ ರೂಟ್‌ಫೈಂಡರ್‌  ಆ್ಯಪ್‌ (GPS Route Finder) ವಿಮಾನನಿಲ್ಡಾಣ, ಬ್ಯಾಂಕ್‌ಗಳು, ಎಟಿಂ, ಅಂಚೆ ಕಚೇರಿ, ಶಾಲೆ, ಕಾಲೇಜು, ವಿಶ್ವವಿದ್ಯಾನಿಲಯ, ಆಸ್ಪತ್ರೆ ಹಾಗೂ  ಪೋಲಿಸ್‌ ಠಾಣೆಗಳ ಸ್ಥಳಗಳನ್ನು ಗುರುತಿಸುತ್ತದೆ. ದ್ವಿಚಕ್ರವಾಹನ ಸವಾರರಿಗೂ  ಶಾರ್ಟ್‌ಕಟ್‌ಗಳ ಮಾಹಿತಿ ಸಿಗುತ್ತದೆ. 
 
ಸಾರ್ವಜನಿಕ ಸ್ಥಳಗಳಲ್ಲಿ ಪಾರ್ಕಿಂಗ್‌ ಜಾಗ ಎಲ್ಲಿದೆ, ಹಣ ಪಾವತಿಸುವ ಮತ್ತು ಉಚಿತ ಪಾರ್ಕಿಂಗ್‌ ಸ್ಥಳ ಎಲ್ಲಿದೆ ಎಂಬುದನ್ನು ತಿಳಿಯಲು ಆ್ಯಪ್‌ಗಳು ಇವೆ (ಉದಾಹರಣೆಗೆ Trafflin).  ಕಾರ್ಯಕ್ರಮಗಳ ಮಾಹಿತಿ: ನಗರದಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳು, ಕಾರ್ಯಾಗಾರಗಳು, ನಾಟಕ ಪ್ರದರ್ಶನ, ಸಿನಿಮಾ ಟಿಕೆಟ್‌ ಬುಕ್‌ ಮಾಡುವುದು. 
 
ಟಿಕೆಟ್‌ ಬುಕ್ಕಿಂಗ್‌ ಆ್ಯಪ್‌ಗಳು
BookMyShow, TicketNew, Justickets, Movie Ticket. ಬಾಡಿಗೆ ಉಡುಪುಗಳು ಸಿಗುವ ವೆಬ್‌ ತಾಣಗಳಿವೆ (ಉದಾಹರಣೆಗೆ zivaza) . ಹಸಿವಾದಾಗ ಊಟ ಬೇಕಲ್ಲವೆ, ಅದಕ್ಕೆಂದೇ ಹಲವು ಆ್ಯಪ್‌ಗಳಿವೆ. ನೀವಿರುವ ಸ್ಥಳಕ್ಕೇ ನಿಮ್ಮಿಷ್ಟದ ತಿಂಡಿ, ಊಟವನ್ನು ತರಿಸಿಕೊಳ್ಳಬಹುದು.
 
ಫುಡ್‌ ಆ್ಯಪ್‌ಗಳು
freshmenu, chaipoint, Swiggy,Zomato,foodpanda,
 
ಮೈಸೂರು ಆ್ಯಪ್‌ (Mysore App): ಈ ಅಪ್ಲಿಕೇಶನ್‌ನಲ್ಲಿ ಮೈಸೂರಿನ ಇತಿಹಾಸ, ಸುತ್ತಮುತ್ತಲಿನ ಪ್ರವಾಸಿ ತಾಣಗಳು, ಹೋಟೆಲ್‌, ಕೆಫೆ, ಐತಿಹಾಸಿಕ ದೇವಾಲಯಗಳು, ರೈಲು, ಬಸ್‌, ವಿಮಾನಗಳ ಮಾಹಿತಿ ದೊರೆಯುತ್ತದೆ. ಈ ಆ್ಯಪ್‌ಅನ್ನು ಯುವಿಕಾರ್ಪ್‌ ಅಭಿವೃದ್ಧಿಪಡಿಸಿದೆ. 
 
ಮೈಸೂರು (Mysuru): ಈ ಅಪ್ಲಿಕೇಶನ್‌ ಸಾಂಸ್ಕೃತಿಕ ಕಾರ್ಯಕ್ರಮಗಳು, ರಸ್ತೆಗಳು, ಶಾಲೆ, ಪ್ರವಾಸಿ ತಾಣಗಳ ಮಾಹಿತಿ ಜೊತೆಗೆ ಮೈಸೂರಿನ ಸುದ್ದಿಗಳನ್ನೂ ನೀಡುತ್ತದೆ. ಫೋರೆಕ್ಸ್‌ ವೇದ ಈ ಅಪ್ಲಿಕೇಶನ್‌ ಅಭಿವೃದ್ಧಿಪಡಿಸಿದೆ.
 
ವಿಸಿಟ್‌ ಮೈಸೂರು (Visit Mysuru): ಸೇಫ್‌ವೀಲ್ಸ್‌ಗ್ರೂಪ್‌ ಅಭಿವೃದ್ಧಿಪಡಿಸಿರುವ ಈ ಆ್ಯಪ್‌ನಲ್ಲಿ ಮೈಸೂರಿನ ಪ್ರವಾಸಿ ತಾಣಗಳು, ತುರ್ತು ಫೋನ್‌ ನಂಬರ್‌ಗಳು, ಶಾಪಿಂಗ್‌ ಫೆಸ್ಟಿವಲ್‌ಗಳ ಬಗ್ಗೆ ಮಾಹಿತಿ ಲಭ್ಯವಿವೆ.
 
ಹೈಬಿಸ್‌ಕಾಸ್‌ ಅಭಿವೃದ್ಧಿಪಡಿಸಿರುವ ಟ್ರಾವೆಲ್‌ ಸ್ಮಾರ್ಟ್‌ ಮೈಸೂರು ಆ್ಯಪ್‌ (Travel Smart Mysore) ಸಹ ಪ್ರವಾಸಿಗರಿಗೆ ಉಪಯುಕ್ತವಾಗಲಿದೆ.
ಮಂಗಳೂರಿನ ಸುತ್ತಮುತ್ತಲಿನ    ಕಡಲ ಕಿನಾರೆಗಳು, ಹೋಟೆಲ್‌ಗಳ ಮಾಹಿತಿಗೆ ಅರೌಂಡ್‌ ಮಂಗಳೂರು (Around Mangalore) ಆ್ಯಪ್‌ ಸಹಾಯ ಮಾಡುತ್ತದೆ.
ಮಂಗಳೂರಿನ ಖಾಸಗಿ ಬಸ್‌ಗಳ ಮಾಹಿತಿ ನೀಡುವ (Mangalore City Bus) ಆ್ಯಪ್‌ ಪ್ರವಾಸಿಗರಿಗೆ ನೆರವಾಗುತ್ತದೆ. 
 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT