ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರ ಪ್ರದರ್ಶನಕ್ಕಾಗಿ ಬೆನ್ನು ಮಾರಾಟ!

Last Updated 13 ಮಾರ್ಚ್ 2017, 19:30 IST
ಅಕ್ಷರ ಗಾತ್ರ
ಹಾಳೆ, ಬಟ್ಟೆ ಹಾಗೂ ಕಲ್ಲಿನ ಮೇಲೆ ಬಣ್ಣ ಬಣ್ಣದ ಚಿತ್ತಾರಗಳನ್ನು ಬಿಡಿಸಿರುವುದನ್ನು ನೋಡಿದ್ದೇವೆ. ಆದರೆ ಈ ವ್ಯಕ್ತಿ ತನ್ನ ಶರೀರವನ್ನೇ ಕ್ಯಾನ್ವಾಸ್‌ನಂತೆ ಬಳಸಿಕೊಳ್ಳಲು ಅವಕಾಶ ನೀಡಿದ್ದಾನೆ.
 
ಮೈ ಮೇಲೆ ಚಿತ್ರ ಬಿಡಿಸಿಕೊಂಡಿರುವ ವ್ಯಕ್ತಿಗಳ ಬಗ್ಗೆ ಹಲವು ಬಾರಿ ಕೇಳಿದ್ದೇವೆ.  ಆದರೆ ಈ ವ್ಯಕ್ತಿ ತನ್ನ ಮೈ ಮೇಲೆ ಬಿಡಿಸಿಕೊಂಡಿರುವ ಚಿತ್ರ ಇತರರಿಗಿಂತ ಭಿನ್ನ. ಏಕೆಂದರೆ, ತನ್ನ ಇಡಿ ಬೆನ್ನಿನ ಮೇಲೆ ಬಿಡಿಸಿಕೊಂಡಿರುವ ಟ್ಯಾಟೂ ಅಳಿಸಲಾಗದಂತಹದ್ದು.  
 
ಹಂದಿಗಳ ಮೇಲೆ ಟ್ಯಾಟೂ ಬಿಡಿಸಿ ವಿವಾದಕ್ಕೆ ಗುರಿಯಾಗಿದ್ದ ಪ್ರಸಿದ್ಧ ಚಿತ್ರಕಲಾವಿದ ಬೆಲ್ಜಿಯಂನ ವಿಮ್‌ ಡೆಲ್ವೊಯ್‌ ಅವರು  ಜರ್ಮನಿಯ ಟಿಮ್‌ ಸ್ಟೈನರ್ ಎಂಬ ವ್ಯಕ್ತಿಯ ಬೆನ್ನಿನ ಮೇಲೆ  ಈ ಶಾಶ್ವತ ಚಿತ್ರವನ್ನು (ಟ್ಯಾಟೂ) ಬಿಡಿಸಿದ್ದಾರೆ.
 
ಡೆಲ್ವೊಯ್‌ 2006ರಲ್ಲಿ  ಸುಮಾರು 40 ಗಂಟೆ ಶ್ರಮಿಸಿ ಟಿಮ್‌ ಅವರ ಇಡಿ ಬೆನ್ನಿನ ಮೇಲೆ ಈ ಟ್ಯಾಟೂ ಬಿಡಿಸಿದ್ದರು.  ಟಿಮ್‌ ಬೆನ್ನಿನ ಸಮೇತ ಚಿತ್ರವನ್ನು 2008ರಲ್ಲಿ, ಚಿತ್ರಗಳನ್ನು ಸಂಗ್ರಹ ಮಾಡುವ ಜರ್ಮನಿಯ ರಿಕ್‌ ರಿಂಕಿಂಗ್ ಎಂಬುವವರಿಗೆ ಸುಮಾರು ₹1ಕೋಟಿ ಮೌಲ್ಯಕ್ಕೆ  ಮಾರಿಕೊಂಡಿದ್ದಾರೆ!
 
ಈ ಹಣದ ಮೂರನೇ ಒಂದು ಭಾಗ ಟಿಮ್‌ ಅವರಿಗೆ ನೀಡಲಾಗಿದೆ. ಟಿಮ್‌ ಬದುಕಿರುವವರೆಗೂ ಪ್ರತಿವರ್ಷ ಕನಿಷ್ಠ ಮೂರು ಚಿತ್ರಕಲಾ ಪ್ರದರ್ಶನಗಳಲ್ಲಿ ಭಾಗವಹಿಸಿ ತಮ್ಮ ಬೆನ್ನಿನ ಮೇಲೆ ಬಿಡಿಸಿರುವ ಟ್ಯಾಟೂವನ್ನು ಪ್ರದರ್ಶಿಸಬೇಕು ಎಂಬ ಒಪ್ಪಂದವನ್ನೂ ಮಾಡಿಕೊಳ್ಳಲಾಗಿದೆ. ಅಲ್ಲದೆ ಸತ್ತ ನಂತರ ಚಿತ್ರವಿರುವ ತನ್ನ ಬೆನ್ನಿನ ಚರ್ಮವನ್ನು ಸುಲಿದುಕೊಳ್ಳುವ ಹಕ್ಕನ್ನೂ  ರಿಕ್‌ ಅವರಿಗೆ ಕೊಡಲಾಗಿದೆ.
 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT