ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಪರ್ಧಾತ್ಮಕವಾಗಿ ಎದುರಿಸಿ

Last Updated 13 ಮಾರ್ಚ್ 2017, 19:30 IST
ಅಕ್ಷರ ಗಾತ್ರ

30 ವರ್ಷಗಳ ಹಿಂದೆ ದೂರದರ್ಶನದಲ್ಲಿ ರಮಾನಂದ ಸಾಗರ್‌ ಅವರ ನಿರ್ದೇಶನದ ಹಿಂದಿ ಧಾರಾವಾಹಿ ‘ರಾಮಾಯಣ್‌’ ಪ್ರಸಾರವಾಗುತ್ತಿತ್ತು. ಹಿಂದಿ ಭಾಷೆಯ ಗಂಧವಿಲ್ಲದ ನನ್ನ ಅಪ್ಪ– ಅಮ್ಮನಿಗೆ ನಾನು ಅದನ್ನು ಕನ್ನಡದಲ್ಲಿ ವಿವರಿಸಬೇಕಿತ್ತು. ಇಂತಹ ಸಂದರ್ಭದಲ್ಲಿ, ಕನ್ನಡದ ಕೆಲವು ಪ್ರಮುಖ ಪತ್ರಿಕೆಗಳು ಧಾರಾವಾಹಿಯ ಮುಂದಿನ ಕಂತಿನ ವಿವರವನ್ನು ಕನ್ನಡದಲ್ಲಿ ಮೊದಲೇ ಪ್ರಕಟಿಸತೊಡಗಿದವು.

ಇದನ್ನು ಓದಿಕೊಂಡು ನಂತರ ಧಾರಾವಾಹಿ ವೀಕ್ಷಿಸುವುದನ್ನು ನಾವು ರೂಢಿಸಿಕೊಂಡಾಗ, ಸರಾಗವಾಗಿ ಕನ್ನಡದಲ್ಲೇ ಧಾರಾವಾಹಿಯನ್ನು ನೋಡಿದಷ್ಟು ಸಂತಸವಾಗುತ್ತಿತ್ತು. ಬಹಳಷ್ಟು ಮಂದಿಗೆ ಇದೇ ರೀತಿ ಅನುಭವವಾಗಿತ್ತು.

ಹೀಗಿರುವಾಗ, ಪರಭಾಷೆಯ ಚಿತ್ರಗಳನ್ನು ಕನ್ನಡಕ್ಕೆ ಡಬ್‌ ಮಾಡುವುದಕ್ಕೆ ಮಾತ್ರ ಯಾಕಿಷ್ಟು ಅಡ್ಡಿ? ಆಟ, ಅಡುಗೆ, ಕಲೆ, ಸಂಗೀತದಂತಹ ವಿಷಯಗಳಿಗೆ ಸಂಬಂಧಿಸಿದ ಕನ್ನಡೇತರ ಪುಸ್ತಕಗಳು ಕನ್ನಡಕ್ಕೆ ತರ್ಜುಮೆಗೊಳ್ಳುವುದಕ್ಕೆ ಒಪ್ಪಿಗೆ ಇರುವಾಗ, ಚಲನಚಿತ್ರಗಳಿಗೆ ಮಾತ್ರ ಯಾಕೆ ಆಕ್ಷೇಪ?

ಬದಲಾದ ಆಸಕ್ತಿಗಳಿಗೆ ತಡೆ ಒಡ್ಡಿದಷ್ಟೂ ಅವುಗಳ ಬಗೆಗಿನ ತುಡಿತ ಇನ್ನೂ ಹೆಚ್ಚುತ್ತಲೇ ಹೋಗುತ್ತದೆ ಎಂಬುದು ಕಟುಸತ್ಯ. ಅವಕಾಶಗಳನ್ನು ವಂಚಿಸದೆ ಅವುಗಳನ್ನು ಸ್ಪರ್ಧಾತ್ಮಕವಾಗಿ ಎದುರಿಸುವ ಪಣ ತೊಟ್ಟರೆ, ಡಬ್ಬಿಂಗ್‌ ಚಿತ್ರಗಳು ತಾವಾಗಿಯೇ ಗೌಣವಾಗುವುದರಲ್ಲಿ ಸಂಶಯವಿಲ್ಲ.
–ಜಿ.ಮುರಳೀಧರ, ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT