ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಳಿಂಬೆ ಕೃಷಿ: ಬರದಲ್ಲೂ ಅನ್ನದಾತನಿಗೆ ವರ

Last Updated 14 ಮಾರ್ಚ್ 2017, 6:02 IST
ಅಕ್ಷರ ಗಾತ್ರ

ಅರಸೀಕೆರೆ: ಕೃಷಿ ಚಟುವಟಿಕೆಯಲ್ಲಿ ಆಡಂಬರ ಕಟ್ಟಿಕೊಂಡು ಹಗಲೂಟಕ್ಕೆ ಪರದಾಡಿದರು ಎಂಬ ರೈತ ಮಾತಿನಂತೆ. ಸಣ್ಣ ಹಿಡುವಳಿ ಹೊಂದಿರುವವರು ಹೆಚ್ಚಿನ ಆದಾಯ ಪಡೆಯಲು ಸಾಧ್ಯ ಎಂಬುದಕ್ಕೆ ರೈತ ಎಸ್‌.ಎಂ. ಸೋಮಶೇಖರ್‌ 8 ಎಕರೆ ಭೂಮಿಯಲ್ಲಿ ದಾಳಿಂಬೆ ಬೆಳೆ ಬೆಳೆದು ಯಶಸ್ಸು ಸಾಧಿಸಿರುವುದು ತಾಲ್ಲೂಕಿನ ರೈತರಿಗೆ ಆಶಾಭಾವನೆ ಮೂಡಿಸಿದ್ದಾರೆ.

ಸದಾ ಬರಪೀಡಿತ ಪ್ರದೇಶ ಎಂಬ ಹಣೆಪಟ್ಟಿ ಹೊಂದಿರುವ ಅರಸೀಕೆರೆ ತಾಲ್ಲೂಕಿನ ಕಣಕಟ್ಟೆ ಹೋಬಳಿ ಗ್ರಾಮಗಳು ಕಳೆದ ಒಂದು ದಶಕದಿಂದ ಸಾಂಪ್ರದಾಯಿಕ ಬೆಳೆ ಬದಲು ವಾಣಿಜ್ಯ ಬೆಳೆಗಳನ್ನು ಬೆಳೆದು ಆರ್ಥಿಕ ಉನ್ನತಿ ಸಾಧಿಸಿದ್ದಾರೆ.

ತಾಲ್ಲೂಕಿನ ಕಣಕಟ್ಟೆ ಹೋಬಳಿಯ ಅಂಬಿನಕೆರೆ ಗ್ರಾಮದ ಸೋಮಶೇಖರ್‌ಹನಿ ನೀರಾವರಿ ಹಾಗೂ ಆಧುನಿಕ ಕೃಷಿ ಪದ್ದತಿ ಅಳವಡಿಸಿಕೊಳ್ಳುವ ಮೂಲಕ ಉತ್ತಮ ದಾಳಿಂಬೆ ಫಸಲು ಬೆಳೆಯುವ ಮೂಲಕ ಇದಕ್ಕೆ ಸೂಕ್ತ ಉದಾಹರಣೆ.

ಕಣಕಟ್ಟೆ ಹೋಬಳಿಯ ಸುತ್ತಮುತ್ತ 800 ಅಡಿ ಕೊರೆದರೂ ನೀರು ಅಲಭ್ಯ. ದಾಳಿಂಬೆಯನ್ನು  ಪ್ರಮುಖ ಬೆಳೆಯಾಗಿ ಬೆಳೆದು ಯಶಸ್ಸು ಸಹ ಕಂಡಿದ್ದಾರೆ. ಈಗ ಬಯಲು ಸೀಮೆಯ ಬಂಗಾರದ ಬೆಳೆ  ಇದಾಗಿದೆ.

ಸೋಮಶೇಖರ್‌ ಅವರು ತಮ್ಮ 8ಎಕರೆ ಜಮೀನಿನಲ್ಲಿ 5000 ದಾಳಿಂಬೆ ಗಿಡಗಳನ್ನು ಬೆಳೆಸಿದ್ದಾರೆ. ಪ್ರತಿ ಗಿಡದಲ್ಲಿ 70ರಿಂದ 90 ಹಣ್ಣುಗಳನ್ನು ಕಾಣಬಹುದು.
ಪ್ರತಿ ಹಣ್ಣು 500 ಗ್ರಾಂನಿಂದ 800 ಗ್ರಾಂ ತೂಕ ಬರುತ್ತದೆ.

ಈಗಾಗಲೇ ಕೆ.ಜಿಗೆ ₹ 85ರಂತೆ ಸ್ಥಳದಲ್ಲಿಯೇ ಒಟ್ಟು 3,000 ಬಾಕ್ಸ್‌ ಮಾರಾಟ ಮಾಡಿ, ₹ 28 ಲಕ್ಷ ಆದಾಯ ಗಳಿಸಿದ್ದಾರೆ.

ದಾಳಿಂಬೆ ಫಲಕ್ಕೆ ಬರುವ ಹಂತದಲ್ಲಿ ನಿಯಮಿತವಾಗಿ ನೀರುಣಿಸಿದಲ್ಲಿ ಮಾತ್ರವೇ ರೈತನಿಗೆ ಲಾಭ. ನೀರಿಲ್ಲದ ವೇಳೆ ಹಣ್ಣಿನ ಜತೆ ಸಿಪ್ಪೆ ಬೆಳೆಯುವುದು ಕಷ್ಟ. ಸಿಪ್ಪೆ ಸಹ ತೆಳುವಾಗುತ್ತದೆ. ಈಗ ದಾಳಿಂಬೆ ಉತ್ತಮ ಫಸಲು ಬಂದಿದೆ ಎನ್ನುತ್ತಾರೆ ಸೋಮಶೇಖರ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT