ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೋಳಿ: ವಿದೇಶಿಯರ ಕಲರವ

Last Updated 14 ಮಾರ್ಚ್ 2017, 6:11 IST
ಅಕ್ಷರ ಗಾತ್ರ

ಗಂಗಾವತಿ: ವಿದೇಶಿಗರ ಮೋಜಿನ ತಾಣವಾದ ತಾಲ್ಲೂಕಿನ ವಿರುಪಾಪುರ ಗಡ್ಡೆಯಲ್ಲಿ ಸೋಮವಾರ ಹೋಳಿ ಹಬ್ಬದ ಸಂಭ್ರಮಾಚರಣೆ ಮೆರೆ ಮೀರಿತ್ತು. ಬೆಳಿಗ್ಗೆ 8ರಿಂದ ವಿದೇಶಿಗರು ವಿವಿಧ ಬಣ್ಣಗಳೊಂದಿಗೆ ಸ್ಥಳೀಯ ರೊಂದಿಗೆ ಹೋಳಿಯಾಡಲು ಸಿದ್ಧತೆ ನಡೆಸಿದ್ದರು.

ಬೆಳಿಗ್ಗೆ ಸಣಾಪುರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಿಂದ ತುಂಗಭದ್ರಾ ನದಿ ವರೆಗೂ ಇರುವ ರಸ್ತೆಯುದ್ದಕ್ಕೂ ವಿದೇಶಿ ಗರು ಬಣ್ಣದೊಕುಳಿಯಲ್ಲಿ ಮಿಂದೆದ್ದರು. ಬೃಹತ್ ಮೆರವಣಿಗೆ ನಡೆಸಿದರು.

ತಾಷಾ, ರಂಡೋಲು ಸಂಗೀತ ಪರಿಕರಗಳ ತಾಳಕ್ಕೆ ತಕ್ಕಂತೆ ಸ್ಥಳೀಯ ರೊಂದಿಗೆ ಕುಣಿದು ಕುಪ್ಪಳಿಸಿದರು. ಬಳಿಕ ತಾವು ತಂಗಿದ್ದ ರೆಸಾರ್ಟ್‌ಗಳಲ್ಲಿ ಏರ್ಪಡಿಸಿದ್ದ  ನೃತ್ಯ ಸಂಗೀತದಂತ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಸ್ಥಳೀಯ ಯುವಕರು ವಿದೇಶಿಗರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದರು.

ಕ್ಯಾಮೆರಾ ಕಣ್ಣಲ್ಲಿ ಹೋಳಿ: ಹೋಳಿ ಹಬ್ಬದ ವಿಶೇಷತೆಯನ್ನು ಹಂಪಿ ಪ್ರವಾಸಕ್ಕೆ ಬಂದಿದ್ದ ಸಾಕಷ್ಟು ಸಂಖ್ಯೆಯ ವಿದೇಶಿಗರು ತಮ್ಮ ಕ್ಯಾಮೆರಾ ಹಾಗೂ ಮೊಬೈಲ್ ಕ್ಯಾಮೆರಾಗಳಲ್ಲಿ ಸೆರೆಹಿಡಿ ದರು. ಓಕುಳಿಯ ಸಂಭ್ರಮ ಆಚರಣೆ ಗಡ್ಡಿಯಲ್ಲಿ ಮೇರೆ ಮೀರಿತ್ತು. ಸಾವಿರಾರು ಯುವಕ, ಯುವತಿಯರು ಓಕುಳಿಯಲ್ಲಿ ಸಂಭ್ರಮಿಸಿದರು. ಸ್ಥಳೀಯರೊಂದಿಗೆ ವಿದೇಶಿಗರು ಸೇರಿ ಬಣ್ಣ ಎರಚಿ, ಮೆರವ ಣಿಗೆಯಲ್ಲಿ ಮಿಂದು ಸಂಭ್ರಮಿಸುತ್ತಿದ್ದ ದೃಶ್ಯವನ್ನುವಿದೇಶಿಗರು ತಮ್ಮ ಕ್ಯಾಮೆರಾ, ಮೊಬೈಲ್‌ಗಳಲ್ಲಿ  ಸೆರೆ ಹಿಡಿದರು.

ತಾಪಮಾನ ಏರಿಕೆಯಿಂದ ವಿರುಪಾಪುರಗಡ್ಡೆಯಲ್ಲಿನ ವಿದೇಶಿಗರು ಸ್ವದೇಶಕ್ಕೆ ತೆರಳುತ್ತಿದ್ದು, ಹೋಳಿ ಹಬ್ಬ ಕೊನೆಯ ಆಚರಣೆಯಾಗಿದ್ದರಿಂದ ಬಹುತೇಕರ ವಿದೇಶಿಗರು ಸಂಭ್ರಮ ದಿಂದ ಹೋಳಿಯಲ್ಲಿ ತೇಲಾಡಿದರು.

‘ಭಾರತೀಯರ ಶ್ರೀಮಂತ ಸಂಸ್ಕೃತಿ, ಆಚರಣೆಗಳನ್ನು ಕಣ್ಣಾರೆ ನೋಡುವ ಭಾಗ್ಯ ದೊರೆತಿರುವುದು ನಿಜಕ್ಕೂ ಸಂತಸ. ಇನ್ನುಮುಂದೆ ಪ್ರತಿ ಹೋಳಿ ಹಬ್ಬಕ್ಕೆ ಇಲ್ಲಿಗೆ ಬರುತ್ತೇನೆ’ ಎಂದು ದಕ್ಷಿಣ ಕೋರಿಯಾ ಪ್ರಜೆ ಕಿಂಗ್‌ ಜಾನ್‌ಉನ್ ಚ್ಯಾಂಬೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT