ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲೆಲ್ಲೂ ರಂಗು ಚೆಲ್ಲಿದ ಚೆಲುವ ಕಾಮಣ್ಣ

ವಿಶೇಷ ಪೂಜೆ ಪುನಸ್ಕಾರ
Last Updated 14 ಮಾರ್ಚ್ 2017, 6:27 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನಗರದಲ್ಲಿ ಭಾನುವಾರ ಹೋಳಿ ಹಬ್ಬವು ಅಧಿಕೃತವಾಗಿ ಚಾಲನೆ­ಯಾಗಿದ್ದು, ಹಳೆ ಹುಬ್ಬಳ್ಳಿಯ ಪ್ರಮುಖ ಸ್ಥಳಗಳಲ್ಲಿ ಕಾಮಣ್ಣನ ಆಳೆತ್ತರದ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ.

ಶನಿವಾರ ಮಧ್ಯರಾತ್ರಿಯೇ ಸುಮಾರು 25 ಅಡಿ ಎತ್ತರದ ಕಾಮಣ್ಣನ ಪ್ರತಿಷ್ಠಾಪನೆ ಹಳೆಹುಬ್ಬಳ್ಳಿ ಮೇದಾರ ಗಲ್ಲಿ ಹಾಗೂ ಬ್ರಾಡ್‌ ವೇ ಬಳಿಯ ಹೊಸ ಮೇದಾರ ಗಲ್ಲಿಯಲ್ಲಿ ಪ್ರತಿಷ್ಠಾಪಿಸ­ಲಾಗಿದ್ದು, ಚೆಲುವ ಚೆನ್ನಿಗನ ದರ್ಶನ ಪಡೆಯಲು ಮಹಿಳೆಯರು ಮಕ್ಕಳಾದಿ­ಯಾಗಿ ಭೇಟಿ ಕೊಡುತ್ತಿದ್ದಾರೆ.

ಊದುಬತ್ತಿ ಬೆಳಗಿ, ಹೋಳಿಗೆಯ ನೈವೇದ್ಯವನ್ನೂ ಮಹಿಳೆಯರು ನೀಡಿದರು. ಸುಮಾರು ಐದು ದಶಕ­ಗಳಿಂದ ನ್ಯೂ ಇಂಗ್ಲಿಷ್‌ ಶಾಲೆ ಬಳಿ ಇರುವ ಮೇದಾರ ಗಲ್ಲಿಯಲ್ಲಿ ಕಾಮಣ್ಣನನ್ನು ಕೂಡ್ರಿಸಲಾಗಿದ್ದು, ನಿತ್ಯ ನೂರಾರು ಭಕ್ತರು ತಮ್ಮ ಮನದ ಕಾಮನೆಗಳನ್ನು ಈಡೇರಿಸುವಂತೆ ಕೇಳಿಕೊಳ್ಳುತ್ತಿದ್ದಾರೆ.
ಕಾಮಣ್ಣನ ಎದುರು ಹುಡುಗರು ಆಕರ್ಷಕವಾಗಿ ಹಲಗಿ ಬಡಿಯುವ ದೃಶ್ಯಗಳು ಅಲ್ಲಿಗೆ ಭೇಟಿ ನೀಡುವವರಿಗೆ ಹೊಸ ಪುಳಕವನ್ನೂ, ಎದೆಯಲ್ಲಿ ಝಲಕ್ ಅನ್ನು ಮೂಡಿಸುತ್ತವೆ.

ಐದು ದಿನಗಳವರೆಗೆ ಕಾಮದೇವನ ಪೂಜೆ ನಡೆಯುತ್ತದೆ. ಗುರುವಾರ ಸಂಜೆ ಕಾಮದಹನ ನಡೆಯುತ್ತದೆ. ದಾಜಿಬಾನಪೇಟೆಯ ಎಸ್‌.ಟಿ. ಭಂಡಾರಿ ಜವಳಿ ಮಳಿಗೆಯ ಪಕ್ಕದಲ್ಲಿ ಕಳೆದ 80 ವರ್ಷಗಳಿಂದ ರತಿ–ಕಾಮಣ್ಣರ ಮೂರ್ತಿಗಳನ್ನು ಕೂಡ್ರಿಸಲಾಗುತ್ತಿದ್ದು, ಠಾಕೂರಸಾ ಲದವಾ ಕುಟುಂಬದವರು ಪ್ರತಿ ವರ್ಷ ಇಲ್ಲಿ ಪೂಜಾ ಕೈಂಕರ್ಯ­ಗಳನ್ನು ನೆರವೇರಿಸುತ್ತಾರೆ.

‘ಎರಡು ವರ್ಷಗಳ ಹಿಂದೆ ಕಟ್ಟಿಗೆ­ಯಿಂದ ತಯಾರಿಸಿದ ಕಾಮಣ್ಣನನ್ನು ಪೂಜಿಸುತ್ತಿದ್ದೇವೆ. ಅದಕ್ಕೂ ಮೊದಲು ಮಣ್ಣಿನ ರತಿ–ಕಾಮಣ್ಣರನ್ನು ಆರಾಧಿಸುತ್ತಿದ್ದೆವು. ನಮ್ಮ ಮಾವನವರು, ಅವರ ತಂದೆಯ ಕಾಲದಿಂದಲೂ ಕಾಮಣ್ಣನಿಗೆ ಪೂಜೆ ನಡೆಯುತ್ತದೆ’ ಎಂದು ಠಾಕೂರಸಾ ಅವರ ಪತ್ನಿ ಅಂಬವ್ವ ಲದವಾ ವಿವರಿಸಿದರು.

ಮೂರು ಸಾವಿರ ಮಠದಿಂದ ದಾಜಿಬಾನಪೇಟೆಗೆ ಬರುವ ದಾರಿಯಲ್ಲಿಯೂ ಆಕರ್ಷಕ ರತಿ–ಕಾಮಣ್ಣ ಮತ್ತು ಕಾವಲುಗಾರರ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ.

ಮದ್ಯ ಮಾರಾಟ ಬಂದ್‌
ಧಾರವಾಡದಲ್ಲಿ ಇದೇ 13ರಂದು ಹೋಳಿ ಆಚರಣೆ ನಡೆಯಲಿದ್ದು, 13ರ ಬೆಳಿಗ್ಗೆ 6ರಿಂದ 14ರ ಬೆಳಗಿನ 6 ಗಂಟೆಯವರೆಗೆ ಹಾಗೂ ಹುಬ್ಬಳ್ಳಿಯಲ್ಲಿ 16ರ ಬೆಳಿಗ್ಗೆ 6ರಿಂದ 17ರ ಬೆಳಗಿನ 6 ಗಂಟೆಯವರೆಗೆ ಎಲ್ಲ ಮದ್ಯದ ಅಂಗಡಿಗಳು, ಬಾರ್, ಕ್ಲಬ್‌ ಹಾಗೂ ಹೋಟೆಲ್‌ಗಳಲ್ಲಿ ಮದ್ಯ ಮಾರಾಟ ಹಾಗೂ ಸಾಗಣೆಯನ್ನು ನಿಷೇಧಿಸಿ ಪೊಲೀಸ್‌ ಕಮಿಷನರ್‌ ಪಾಂಡುರಂಗ ರಾಣೆ ಅವರು ಆದೇಶ ಹೊರಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT