ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಣ್ಣದಲ್ಲಿ ಮಿಂದೆದ್ದ ಜನ; ಪುಳಕಗೊಂಡ ಮನ

ರತಿ–ಮನ್ಮಥರ ಮೆರವಣಿಗೆ, ಕಾಮದಹನ
Last Updated 14 ಮಾರ್ಚ್ 2017, 6:38 IST
ಅಕ್ಷರ ಗಾತ್ರ

ಶಿರಹಟ್ಟಿ: ಮಂಗಳವಾರ ಪಟ್ಟಣ ಸೇರಿ ದಂತೆ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಯುವಕರ ಸಂಭ್ರಮ ಸಡಗರ ಮಧ್ಯ ಹೋಳಿ ಹಬ್ಬ ಶಾಂತಿಯುತವಾಗಿ ಜರುಗಿತು.

ಬೆಳಿಗ್ಗೆಯಿಂದಲೇ ಪಟ್ಟಣದ ಬಹು ತೇಕ ಸ್ಥಳಗಳಲ್ಲಿ ಹಲಿಗೆ ಸಪ್ಪಳ, ತಾಳಕ್ಕೆ ತಕ್ಕಂತೆ ನರ್ತನ, ಯುವತಿಯರ ವೇಷ ತೊಟ್ಟ ಯುವಕರ ಗುಂಪು, ಮಕ್ಕಳಾದಿ ಯಾಗಿ ಎಲ್ಲರೂ ಬಾಯಿಗೆ ಬಡಿದು ಕೊಂಡು ಹೋಳಿ ಪದಗಳನ್ನು ಹಾಡು ಸೇರಿದಂತೆ ಹಲವು ಘಟನೆಗಳು ಎಲ್ಲರನ್ನು ರಂಜಿಸಿದವು.

ಭಾನುವಾರ ರಾತ್ರಿ ವಾಲ್ಮೀಕಿ ನಗರ ದಲ್ಲಿ ಉತ್ತರ ಕರ್ನಾಟಕದಲ್ಲಿ ವಿಶೇಷ ಎನ್ನಲಾಗುವ ಹುಲುಗಾಮ (ಕಾಮಣ್ಣ) ನನ್ನು ಪ್ರತಿಷ್ಠಾಪಿಸಿ ಅಲಕೃಂತ ಬಂಡಿಯ ಮೂಲಕ ಪಟ್ಟಣದ ವಿವಿಧ ಓಣಿಗಳನ್ನು ಮೆರವಣಿಗೆ ಮಾಡಿ, ನಂತರ ಅದೇ ಸ್ಥಳದಲ್ಲಿ ಕಾಮದಹನ ಮಾಡಿ ತಮ್ಮ ಇಷ್ಟಾರ್ಥಗಳನ್ನು ಸಿದ್ದಿಸುವಂತೆ ಪೂಜೆ ಸಲ್ಲಿಸುವ ಸಂಪ್ರದಾಯ ತಲತಲಾಂತರ ದಿಂದ ನಡೆದುಕೊಂಡು ಬಂದಿದೆ. 

ನಂತರ ಅದೇ ಬಂಡಿಯಲ್ಲಿ ಬಣ್ಣ ವನ್ನು ತುಂಬಿಕೊಂಡು ಪಟ್ಟಣದ ಹಲ ವಾರು ಪ್ರದೇಶಗಳಲ್ಲಿ ಸಂಚರಿಸಿ ಬಣ್ಣ ಎರಚುವದು ವಾಡಿಕೆ. ಮಕ್ಕಳು, ಯುವಕರು, ಯುವತಿ ಯರು, ವೃದ್ದರು ರಂಗಿನಾಟದಲ್ಲಿ ಪಾಲ್ಗೊಂಡು ಸಂತಸ ಪಟ್ಟರು. ಹೋಳಿ ಹಬ್ಬ ಹಿನ್ನಲೆಯಲ್ಲಿ ಪಟ್ಟಣದಲ್ಲಿ ಸೂಕ್ತ ಪೊಲೀಸ್‌ ಬಂದೋ ಬಸ್ತ್‌ ಏರ್ಪಡಿಸಲಾಗಿತ್ತು.

ರೋಣದಲ್ಲಿ ಸಂಭ್ರಮ
ರೋಣ:
ಕಳೆ ಐದು ದಿನಗಳಿಂದ ಚಿಕ್ಕ ಮಕ್ಕಳು ಹಾಗೂ ಯುವಕರು ಬೆಳಿಗ್ಗೆ ಮತ್ತು ರಾತ್ರಿ ಸಮಯದಲ್ಲಿ ಹಲಗೆಯ ಭಾರಿಸುವ ಸದ್ದಿನ ಜೊತೆಗೆ ಲಬೋ ಲಬೋ.. ಎಂದು ಬಾಯಿ ಬಡಿದು ಕೊಳ್ಳುತ್ತಾ, ಕಳ್ಳನನಮಕ್ಕಳೋ.. ಏನೇನು ಕದ್ದಿದ್ರೋ.. ಕುಳ್ಳ ಕಟ್ಟಿಗೆ ಕದ್ದಿದ್ರೋ.. ಎನ್ನುವ ಗದ್ದಲಕ್ಕೆ ಸೋಮ ವಾರ ತೆರೆಬಿದ್ದಿದ್ದು. ಪಟ್ಟಣದ ಬಹುತೇಕ ಓಣಿಗಳಲ್ಲಿ ಯುವಕರು, ಮಕ್ಕಳು, ಯುವತಿಯರು ಸಂಭ್ರಮದಿಂದ ಹೋಳಿ ಹಬ್ಬ ಆಚರಿಸಿದರು.

ಹಲಗೆ ಭಾರಿಸುತ್ತಾ ಹಲವು ಸಂಘಟನೆಗಳ ಯುವಕರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ನೂರಾರು ಸಂಖ್ಯೆಯಲ್ಲಿ ಜನರು ಪಾಲ್ಗೊಂಡು ಸೌಹಾರ್ದವಾಗಿ ಹೋಳಿ ಆಚರಿಸಿದರು.

ಬಿಸಿಲಿನ ತಾಪ ಲೆಕ್ಕಿಸದೆ ಪರಸ್ಪರ ಬಣ್ಣ ಎರಚಿದರು. ಅಲ್ಲದೆ ವಿವಿಧ ಶಾಲೆಯ ಹಾಗೂ ವಸತಿ ನಿಲಯದ ವಿದ್ಯಾರ್ಥಿಗಳು ತಮ್ಮ ಆವರಣದಲ್ಲಿಯೇ ಹಬ್ಬ ಆಚರಿಸಿದರು. ಪಟ್ಟಣವು ಬಣ್ಣ ಬಣ್ಣದ ಜನರಿಂದ ಕಂಗೊಳಿಸುತ್ತಿತ್ತು. ಹಬ್ಬದ ನಿಮಿತ್ತ ಶಾಂತಿ ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಪೊಲೀಸ್ ಬಂದೋಬಸ್ತ್‌ ನಿಯೋಜಿಸಲಾಗಿತ್ತು.

ಶಾಂತಿಯುತ ಆಚರಣೆ
ಲಕ್ಷ್ಮೇಶ್ವರ:
ಹೋಳಿ ಹುಣ್ಣಿಮೆ ನಿಮಿತ್ಯ ಲಕ್ಷ್ಮೇಶ್ವರ ಹೋಬಳಿ ವ್ಯಾಪ್ತಿಯ ಅಡರ ಕಟ್ಟಿ, ಪುಟಗಾಂವ್‌ ಬಡ್ನಿ, ಬಟ್ಟೂರು, ದೊಡ್ಡೂರು, ಸೂರಣಗಿ, ರಾಮಗಿರಿ, ಗೊಜನೂರು, ಬಾಲೆಹೊಸೂರು, ಕೋಗ ನೂರು, ಗೋವನಾಳ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹತ್ತಾರು ಹಳ್ಳಿ ಗಳಲ್ಲಿ ಸೋಮವಾರ ರಂಗ ಪಂಚಮಿ ಯನ್ನು ಶಾಂತ ರೀತಿಯಲ್ಲಿ ಆಚರಿಸಲಾ ಯಿತು.

ಹುಣ್ಣಿಮೆ ಮರುದಿನ ಗ್ರಾಮೀಣ ಭಾಗಗಳಲ್ಲಿ ಓಕಳಿ ಆಡುವುದು ವಾಡಿಕೆ. ಬೆಳಿಗ್ಗೆಯಿಂದಲೇ ಬಣ್ಣ ಆಡಲು ಆರಂಭಿ ಸಿದ ಮಕ್ಕಳು ಅದರಲ್ಲಿಯೇ ಮಿಂದೆ ದ್ದರು. ಇನ್ನು ಯುವಕರು ಹಲಿಗೆ ಬಡಿ ಯುತ್ತ ಕೆಂಪು, ಹಸಿರು, ನೀಲಿ, ಕೇಸರಿ ಸೇರಿದಂತೆ ವಿವಿಧ ಬಣ್ಣಗಳನ್ನು ಗೆಳೆಯ ರಿಗೆ ಹೆಚ್ಚುವುದರ ಮೂಲಕ ಬಣ್ಣದಾ ಟಕ್ಕೆ ಮತ್ತಷ್ಟು ರಂಗು ತಂದರು. ಕೆಲ ಗ್ರಾಮಗಳಲ್ಲಿ ಕಾಮಣ್ಣನ ಮೆರವಣಿಗೆ ಯನ್ನು ನಡೆಸಲಾಯಿತು. ಮಧ್ಯಾಹ್ನ 12 ಗಂಟೆಗೆ ಕಾಮಣ್ಣನಿಗೆ ಬೆಂಕಿ ಹಚ್ಚಿದ ನಂತರ ರಂಗ ಪಂಚಮಿ ಕೊನೆ ಗೊಂಡಿತು. ಲಕ್ಷ್ಮೇಶ್ವರ ಪಿಎಸ್‌ಐ ಬಸವ ರಾಜ ಬಿಸಲೆಕೊಪ್ಪ ಹಾಗೂ ಸಿಬ್ಬಂದಿ ನೇತೃತ್ವದಲ್ಲಿ ಸೂಕ್ತ ಬಂದೋಬಸ್ತ್‌ ಕೈಗೊಂಡಿದ್ದರು.

ಆಕರ್ಷಕ ಮೆರವಣಿಗೆ
ಮುಳಗುಂದ:
ಶಾಂತಿ–ಸೌಹಾರ್ದಕ್ಕೆ ಹೆಸರಾದ ಮುಳಗುಂದ ಪಟ್ಟಣದಲ್ಲಿ ಸಾಂಪ್ರದಾಯಕ ಹೋಳಿಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಊರಿನ ಪ್ರಮುಖ ಬೀದಿಗಳಲ್ಲಿ ಕಾಮ-ರತಿಯರನ್ನು ಪ್ರತಿಸ್ಥಾಪಿಸಿ  ಬೆಳಗಿನಜಾವ ಕಾಮದಹನ ಮಾಡಲಾಯಿತು.

ಬಳಿಕ ಜಾತಿ ಬೇಧ ಮರೆತು ಎಲ್ಲ ವರ್ಗದ ಹೋಳಿ ಆಚರಣೆಯಲ್ಲಿ ಪಾಲ್ಗೊಂಡಿದ್ದರು. ನಾನಾ ವೇಷದರಿಸಿದ ಮಕ್ಕಳು, ಯುವಕರು, ಮಹಿಳೆಯರು ಪಾಲ್ಗೊಂಡಿದ್ದರು.  ಚಿಂದಿಪೇಟಿ ಓಣಿಯ ವರು ಬಂಡಿ ಮೇಲೆ ಆನೆ ಪ್ರತಿಕೃತಿ ನಿರ್ಮಿಸಿ ಹೋಳಿ ಆಚರಿಸಿದರೆ, ಸವಳ ಬಾವಿ ಓಣಿ, ಚೌಡನಪೇಟಿ, ಕೋಟಿ ಓಣಿ ಯುವಕರು ನಾನಾ ವೇಷ ಧರಿಸಿ ಪ್ರಮುಖ ಬೀದಿಯಲ್ಲಿ ಹಲಿಗೆ ಬಾರಿಸುತ್ತ ಹಬ್ಬಕ್ಕೆ ಮೆರಗು ತಂದರು.  

ಸೊರಟೂರ: ಸಮೀಪದ ಸೊರಟೂರ ಗ್ರಾಮದಲ್ಲಿ ಸೋಮವಾರ ಹೋಳಿ ಹುಣ್ಣಿಮೆಯ ಬಣ್ಣದೋಕಳಿಯನ್ನು  ಸಂಭ್ರಮದಿಂದ ಆಚರಿಸಲಾಯಿತು.
ಶ್ರೀಕಾಲಭೈರವ ಭಜನಾ ಮಂಡಳ ಸದಸ್ಯರು ಎತ್ತಿನ ಬಂಡಿಯಲ್ಲಿ ಅಣುಕು ಶವಯಾತ್ರೆ ಮಾಡವ ಮೂಲಕ ಹಬ್ಬ ಆಚರಿಸಿ ಸಂಭ್ರಮಿಸಿದರು.

‘ಪ್ರತಿ ಹಬ್ಬ ವೇದಿಕೆಯಲ್ಲಿಯೇ ಆಚರಣೆ’
ನರಗುಂದ:
ರೈತ ಬೇಡಿಕೆ ಈಡೇರು ತ್ತಿಲ್ಲ. ಯಾವ ಹಬ್ಬದ ಆಚರಣೆಯಲ್ಲೂ ಖುಶಿ ಇಲ್ಲ. ಆದ್ದರಿಂದ ಎಲ್ಲ ಹಬ್ಬಗಳು ಧರಣಿ ವೇದಿಕೆಯಲ್ಲಿ ಆಚರಿಸಲಾಗು ತ್ತಿದೆ. ಇಷ್ಟಾದರೂ ಜನಪ್ರತಿನಿಧಿಗಳು ಗಮನಹರಿಸುತ್ತಿಲ್ಲ. ಇವರಿಗೆ ರೈತರ ಬಗ್ಗೆ ಕನಿಷ್ಟ ಕಾಳಜಿ ಇಲ್ಲ. ಮುಂದಿನ ಹೋರಾಟ ಇವರ ವಿರುದ್ಧ ಎಂದು ಹೋರಾಟ ಸಮಿತಿ ಸದಸ್ಯ ವೀರಣ್ಣ ಸೊಪ್ಪಿನ ಆಕ್ರೋಶ ವ್ಯಕ್ತಪಡಿಸಿದರು. 

ಪಟ್ಟಣದಲ್ಲಿ ನಡೆಯುತ್ತಿರುವ ಮಹಾದಾಯಿ ಧರಣಿಯ 607ನೇ ದಿನವಾದ ಸೋಮವಾರ ವೇದಿಕೆ ಯಲ್ಲಿಯೇ ಹೋಳಿ ಹಬ್ಬ ಆಚರಿಸಿ ಮಾತನಾಡಿದರು.
ಮಹಾದಾಯಿ ಹೋರಾಟವನ್ನು ತಾರ್ಕಿಕ ಅಂತ್ಯ ಕಾಣಿಸಲೆಂದೇ ಕೈಗೊ ಳ್ಳಲಾಗಿದೆ. ನಮಗೆ ಹಬ್ಬ, ಹರಿದಿನ ಗಳು ಎಲ್ಲವೂ ನೆಮ್ಮದಿ ನೀಡದಂತಾ ಗಿವೆ. ಮಹಾದಾಯಿ ನೀರನ್ನು ಹರಿಯು ವವರೆಗೂ ಈ ಹೋರಾಟ ಬಿಡುವು ದಿಲ್ಲ. ಶಾಸಕರು, ಸಂಸದರು  ಇದನ್ನು ರಾಜಕೀಯಗೊಳಿಸಿ, ತಮ್ಮ ಸ್ವಪ್ರತಿಷ್ಠೆ ಗೋಸ್ಕರ   ರೈತರನ್ನು ಬಲಿಕೊಡಬೇಡಿ ಎಂದು ಆಗ್ರಹಿಸಿದರು.

ರಾಘವೇಂದ್ರ ಗುಜಮಾಗಡಿ, ಹೋರಾಟ ಸಮಿತಿ ಅಧ್ಯಕ್ಷ ವೀರ ಬಸಪ್ಪ ಹೂಗಾರ ಮಾತನಾಡಿದರು. ಪರಶುರಾಮ ಜಂಬಗಿ, ಚಂದ್ರ ಗೌಡ ಪಾಟೀಲ,  ಹನಮಂತ ಪಡೆ ಸೂರು, ಎಸ್‌.ಬಿ.ಜೋಗಣ್ಣವರ, ಪುಂಡಲೀಕ ಯಾದವ, ಯಲ್ಲಪ್ಪ ಗುಡ ದರಿ, ಈರಣ್ಣ ಗಡಗಿಶೆಟ್ಟರ, ಅರ್ಜುನ ಮಾನೆ, ಸೋಮಲಿಂಗಪ್ಪ ಆಯಟ್ಟಿ, ಕಲ್ಲಪ್ಪ ಮೊರಬದ, ಲಕ್ಷ್ಮಣ ಮುನೇನ ಕೊಪ್ಪ  ಸೇರಿದಂತೆ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT