ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

125 ಹಳ್ಳಿಗಳಲ್ಲಿ ಕುಡಿಯುವ ನೀರಿಗೆ ಅಭಾವ

Last Updated 14 ಮಾರ್ಚ್ 2017, 7:39 IST
ಅಕ್ಷರ ಗಾತ್ರ

ಮೂಡಿಗೆರೆ: ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ 125 ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ.

ಪಟ್ಟಣದ ತಾಲ್ಲೂಕು ಪಂಚಾಯಿತಿ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಸಭಾಂಗಣ ದಲ್ಲಿ ಸೋಮವಾರ ಶಾಸಕ ಬಿ.ಬಿ. ನಿಂಗಯ್ಯ ನೇತೃತ್ವದಲ್ಲಿ ನಡೆದ ಕುಡಿಯುವ ನೀರಿನ ಸಭೆಯಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಗುರುದತ್‌ ಮಾಹಿತಿ ನೀಡಿದರು.

ತಾಲ್ಲೂಕಿನಲ್ಲಿ ಒಟ್ಟು 171 ಗ್ರಾಮಗ ಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ಅವುಗಳಲ್ಲಿ ತುರ್ತಾಗಿ ನಿರ್ವಹಿಸಲೇಬೇಕಾಗಿದೆ. 46 ಗ್ರಾಮಗ ಳಲ್ಲಿನ ಸಮಸ್ಯೆಗಳನ್ನು ಬಗೆಹರಿಸಲಾಗಿದೆ. ಉಳಿದ 125 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದ್ದು, ತುರ್ತು ಅಗತ್ಯತೆಯ ಆಧಾರದಲ್ಲಿ ಸಮಸ್ಯೆಗಳನ್ನು ಪರಿಹರಿಸಲು ಕ್ರಮಕೈಗೊಳ್ಳಲಾಗುತ್ತಿದೆ. ಈ 125 ಗ್ರಾಮಗಳ ಸಮಸ್ಯೆಯನ್ನು ಪರಿಹರಿಸಲು ಕನಿಷ್ಠ ₹ 3.73 ಕೋಟಿ ಅನುದಾನದ ಅಗತ್ಯವಿದೆ ಎಂದರು.

ಕೊಳವೆ ಬಾವಿಯ ನೀರಿನ ಸೌಲಭ್ಯ ವಿಲ್ಲದ ತಾಲ್ಲೂಕಿನ ನಾಲ್ಕು ಗ್ರಾಮ ಪಂಚಾಯಿತಿಗಳ ಹಳ್ಳಿಗಳಿಗೆ ಟ್ಯಾಂಕರ್‌ ಮೂಲಕ ನೀರು ನೀಡಲಾಗುತ್ತಿದೆ. ಇದಕ್ಕಾಗಿ ₹ 58 ಸಾವಿರ ಖರ್ಚಾಗಿದೆ ಎಂದು ಮಾಹಿತಿ ನೀಡಿದರು.

ಶಾಸಕ ಬಿ.ಬಿ. ನಿಂಗಯ್ಯ ಮಾತನಾಡಿ, ಬರ ಪರಿಹಾರಕ್ಕಾಗಿ ಬಂದಿರುವ ಅನುದಾನದಲ್ಲಿ ಹೆಚ್ಚಿನ ಭಾಗವನ್ನು ಕುಡಿಯುವ ನೀರು ಕಲ್ಪಿಸಲು ಆದ್ಯತೆ ನೀಡಿ ಕಾಮಗಾರಿ ಕೈಗೊಳ್ಳಬೇಕು. ತಾಲ್ಲೂಕಿಗೆ ಮಂಗಳವಾರದಿಂದ ಮೂರು ಕೊಳವೆ ಬಾವಿ ತೋಡುವ ಲಾರಿಗಳು ಬರುತ್ತಿದ್ದು. ಒಂದು ಲಾರಿ ಯನ್ನು ಕಳಸ, ಬಾಳೂರು ಹೋಬಳಿ ಯಲ್ಲೂ, ಮತ್ತೊಂದನ್ನು ಬಣಕಲ್‌, ಗೋಣಿಬೀಡು ಹೋಬಳಿಯಲ್ಲೂ ಹಾಗೂ ಮತ್ತೊಂದನ್ನು ಕಸಬಾ ಹೋಬಳಿಯಲ್ಲಿಟ್ಟುಕೊಂಡು ಅಗತ್ಯ ಪ್ರದೇಶದಲ್ಲಿ ಕೊಳವೆ ಬಾವಿ ನಿರ್ಮಿಸಿ ಜನರಿಗೆ ನೀರು ನೀಡಬೇಕು.

ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಲ್ಲೂ ಸರ್ಕಾರಿ ನೀರಿನ ಮೂಲಗಳು ದುರ್ಬಳಕೆಯಾಗದಂತೆ ಅಧಿಕಾರಿಗಳು ನಿಗಾವಹಿಸಬೇಕು. ಯಾರಾದರೂ ಕುಡಿ ಯುವ ನೀರಿನ ಮೂಲಗಳನ್ನು ದುರ್ಬ ಳಕೆ ಮಾಡಿಕೊಳ್ಳುತ್ತಿದ್ದರೆ ತಕ್ಷಣವೇ ಕಾನೂನು ಕ್ರಮ ಜರುಗಿಸಬೇಕು ಎಂದ ರು. ಪಂಚಾಯಿತಿ ಅಧಿಕಾರಿಗಳು  ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗಾಗಿ ಅಗತ್ಯವಾಗಿರುವ ಹೆಚ್ಚುವರಿ ಪಟ್ಟಿ ತಯಾರಿಸಿ ನೀಡಬೇಕು ಎಂದರು.

ಪಿಡಿಒಗಳು, ಮೆಸ್ಕಾಂ ಅಧಿಕಾರಿ ಗಳು, ಪಟ್ಟನ ಪಂಚಾಯಿತಿ ಅಧಿ ಕಾರಿಗಳು ಭಾಗವಹಿಸಿದ್ದರು.

**

ಹೃದಯವಂತಿಕೆ ಪ್ರದರ್ಶಿಸಿ: ಶಾಸಕ

‘ತಾಲ್ಲೂಕಿನಲ್ಲಿ ಭೀಕರ ಜಲಕ್ಷಾಮ ಉಂಟಾಗಿದ್ದು, ಕಾಫಿ ಎಸ್ಟೇಟಿನ ಮಾಲೀಕರು ಸರ್ಕಾರಿ ಕೆರೆ, ನದಿ, ಬಾವಿಗಳಿಂದ ನೀರೆತ್ತದೇ, ಜೀವಿಗಳಿಗೆ ಕುಡಿಯುವ ನೀರು ಒದಗಿಸಲು ಸರ್ಕಾರದೊಂದಿಗೆ ಕೈ ಜೋಡಿಸಬೇಕು. ತಮ್ಮಲ್ಲಿರುವ ನೀರಿನ ಮೂಲಗಳಲ್ಲಿ ಸಂಗ್ರಹವಾಗಿರುವ ನೀರನ್ನು ಸಾರ್ವಜನಿಕ ಬಳಕೆಗೆ ಅವಕಾಶ ಮಾಡಿಕೊಡುವ ಮೂಲಕ ಹೃದಯವಂತಿಕೆ ಪ್ರದರ್ಶಿಸಬೇಕು ಎಂದು ಶಾಸಕ ಬಿ.ಬಿ.ನಿಂಗಯ್ಯ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT