ಮುಂಬೈ: ಬಾಲಿವುಡ್ನ ಮಿಸ್ಟರ್ ಪರ್ಫೆಕ್ಟ್ ಅಮೀರ್ ಖಾನ್ಗೆ ಇಂದು 52 ರ ಸಂಭ್ರಮ. ಅವರ ಹುಟ್ಟುಹಬ್ಬದಲ್ಲಿ ದಂಗಲ್ ಖ್ಯಾತಿಯ ಫೋಗಟ್ ಕುಟುಂಬ ಭಾಗವಹಿಸಲಿದೆ.
ದಂಗಲ್ ಚಿತ್ರದಲ್ಲಿ ಮಹಾವೀರ್ ಸಿಂಗ್ ಫೋಗಟ್ ಪಾತ್ರ ನಿರ್ವಹಿಸಿದ್ದ ಅಮೀರ್, ಗೀತಾ ಮತ್ತು ಬಬಿತಾ ಎಂಬ ಯುವತಿಯರಿಗೆ ಕುಸ್ತಿ ತರಬೇತಿ ನೀಡಿ ಅಖಾಡಕ್ಕೆ ಇಳಿಸುವುದು ಚಿತ್ರದ ತಿರುಳಾಗಿತ್ತು. ಅದರಲ್ಲಿನ ಮನೋಜ್ಞ ಅಭಿನಯದ ಮೂಲಕ ಅಮೀರ್ ಹೆಸರು ಮಾಡಿದ್ದರು.