ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಗೇಮಿಂಗ್ ಸಾಧನ: ನಿಂಟೆಂಡೊ ಸ್ವಿಚ್‌

Last Updated 14 ಮಾರ್ಚ್ 2017, 19:30 IST
ಅಕ್ಷರ ಗಾತ್ರ
ವಿಶಿಷ್ಟ ರಂಜನೆಯ ಅನುಭವ ನೀಡುವ ಗೇಮಿಂಗ್‌ ಸಾಧನಗಳು ಆಗಾಗ ಮಾರುಕಟ್ಟೆಗೆ ಬಿಡುಗಡೆಯಾಗುತ್ತಲೇ ಇರುತ್ತವೆ. ಆಟದ ಲೋಕ ಯಾವಾಗಲೂ ಹೊಸತನ್ನು ಬಯಸುತ್ತದೆ. ಅವುಗಳಿಗೆ ಕಾಯುವ ಜನರೂ ಇರುತ್ತಾರೆ. ಈ ಪಟ್ಟಿಗೆ ಹೊಸ ಸಾಧನವೊಂದು ಸೇರ್ಪಡೆಯಾಗಿದೆ. ಅದುವೇ ನಿಂಟೆಂಡೊ ಸ್ವಿಚ್‌. ವಿಡಿಯೊ ಗೇಮ್‌ ಕನ್ಸೋಲ್‌ ಆಗಿರುವ ಇದನ್ನು ಜಪಾನ್‌ ಕಂಪೆನಿ  ಬಿಡುಗಡೆ ಮಾಡಿದೆ. 
 
ಹಲವು ತಿಂಗಳಿಂದ ಈ ಸಾಧನಕ್ಕೆ ಲಕ್ಷಾಂತರ ಜನ ಕುತೂಹಲದಿಂದ ಕಾಯುತ್ತಿದ್ದರು. ಅದಕ್ಕೆ ಕಾರಣವೂ ಇದೆ. ‘ಟೂ ಇನ್‌ ಒನ್‌’ ಎಂಬ ಅವಕಾಶ ಇರುವುದೇ ಇದಕ್ಕೆ ಕಾರಣ. ಎರಡು ಗ್ಯಾಜೆಟ್‌ ಒಂದರಲ್ಲೇ ಇವೆ. ಒಂದು ಕನ್ಸೋಲ್‌ ಅನ್ನು ಮನೆಯ ಲಿವಿಂಗ್ ರೂಂನಲ್ಲಿ ಬಳಸಬಹುದಾದರೆ ಮತ್ತೊಂದನ್ನು ಕೈಯಲ್ಲಿ ಹಿಡಿದು ಹೊರ ಹೋಗಬಹುದು. ಇದೊಂದು ಬಹುಮುಖಿ ಬಳಕೆಯ ಸಾಧನ. 
 
ನಿಂಟೆಂಡೊ ಸ್ವಿಚ್‌ಗೆ  ಹೈಬ್ರಿಡ್ ಗೇಮಿಂಗ್ ಸಾಧನ ಎಂಬ ಅಭಿದಾನವೂ ಇದೆ. ಈ ಕಂಪೆನಿಯು ಈ ಮೊದಲು ಬಿಡುಗಡೆ ಮಾಡಿದ ಗೇಮಿಂಗ್ ಗ್ಯಾಜೆಟ್‌ಗಳಿಗೆ ಹೋಲಿಸಿದರೆ ಇದು ವಿಶಿಷ್ಟವಾಗಿದೆ. 
 
ಹೋಮ್ ಕನ್ಸೋಲ್ ಆಗಿ ಉಪಯೋಗಿಸಬೇಕಾದರೆ ಡಾಕ್‌ಗೆ ಸಂಪರ್ಕ ಕಲ್ಪಿಸಿ ಟಿವಿಯಲ್ಲಿ ವೈರ್‌ಲೆಸ್ ಆಟಗಳನ್ನು ಆಡಬಹುದು.  ಪ್ರವಾಸಗಳಿಗೆ ತೆರಳಿದಾಗ ಆಟವಾಡಲು ಇದು ಹೇಳಿ ಮಾಡಿಸಿದ  ಸಾಧನ. 
 
ನಿಂಟೆಂಡೊ ಸ್ವಿಚ್‌ನ ಹಾರ್ಡ್‌ವೇರ್‌ ಅತ್ಯುತ್ತಮವಾಗಿ ವಿನ್ಯಾಸ ಮಾಡಲಾಗಿದೆ.   ಪ್ರಖರ ಹೈಡೆಫಿನಿಷನ್ ಪರದೆ ಇದೆ. ಇದರಿಂದ ಆಟಗಾರ ಎರಡೂ ಕೈಗಳಲ್ಲಿ ಜಾಯ್ ಕಾನ್ ನಿಯಂತ್ರಕಗಳನ್ನು ಇಟ್ಟುಕೊಳ್ಳಬಹುದು.  ಹಾಗೂ ಇಬ್ಬರು ಆಟಗಾರರು ಪ್ರತ್ಯೇಕವಾಗಿ ಒಂದೊಂದನ್ನು ಹಿಡಿದುಕೊಂಡು ಆಡಬಹುದು.  
 
ಈ ಸ್ವಿಚ್‌ ಬಿಡುಗಡೆಯಾದ ವೇಳೆ ಹೆಚ್ಚಿನ ಗೇಮ್‌ಗಳು ಇರಲಿಲ್ಲ.  ಕೇವಲ 10 ಗೇಮ್‌ಗಳಷ್ಟೇ ಇದ್ದವು. ಇದಲ್ಲದೆ ಹೊಂದಾಣಿಕೆಯ ಸಮಸ್ಯೆ ಇತ್ತು. ಇದನ್ನು ಬ್ಲೂಟೂತ್‌ ಇಯರ್‌ಫೋನ್‌ಗೆ ಸಂಪರ್ಕ ಕಲ್ಪಿಸಲು ಸಾಧ್ಯವಿರಲಿಲ್ಲ. ಅಲ್ಲದೆ ಕಡಿಮೆ ಅವಧಿಯ ಬ್ಯಾಟರಿ ಸಾಮರ್ಥ್ಯ ಇತ್ತು. 
 
ಸದ್ಯ ನಿಂಟೆಂಡೊದಲ್ಲಿ 24ಕ್ಕೂ ಹೆಚ್ಚು  ಗೇಮ್‌ಗಳಿವೆ. ಸಾಕಷ್ಟು ಜನ ಇದಕ್ಕೆ ಇನ್ನಷ್ಟು ಗೇಮ್‌ಗಳ ಸೇರ್ಪಡೆಯಾದ ನಂತರವೇ ಖರೀದಿ ಮಾಡುವ ಉದ್ದೇಶ ಹೊಂದಿದ್ದಾರೆ. 
ನಿಂಟೆಂಡೊ ಸ್ವಿಚ್‌ಗೂ ಮೊದಲು  Wii U ಹೆಸರಿನ ವಿಡಿಯೊ ಗೇಮ್‌ ಅನ್ನು 2012ರಲ್ಲಿ ಬಿಡುಗಡೆ ಮಾಡಲಾಗಿತ್ತು.

ಇದೂ ಸಹ ಸ್ಕ್ರೀನ್‌ ಇರುವ ಗೇಮ್‌ ಪ್ಯಾಡ್‌. ಆದರೆ ಇದು ಮಾರುಕಟ್ಟೆಯಲ್ಲಿ ಹೆಚ್ಚು ಕಾಲ ಉಳಿಯಲಿಲ್ಲ. ‘ಸೋನಿ ಪ್ಲೇಸ್ಟೇಷನ್‌ 4’ ಅಥವಾ ‘ಮೈಕ್ರೊಸಾಫ್ಟ್‌ ಎಕ್ಸ್‌ ಬಾಕ್ಸ್ ಒನ್‌’ ಗೆ ಹೋಲಿಸಿದರೆ Wii U ಖರೀದಿ ತೊಂದರೆಯದ್ದು ಎಂಬ ಅಭಿಪ್ರಾಯ ಗ್ರಾಹಕರಲ್ಲಿ ಮೂಡಿತು. 
 
ಮಾರುಕಟ್ಟೆಯಲ್ಲಿ ದೊರೆಯುವ ಇತರ ವಿಡಿಯೊ ಗೇಮ್‌ಗಳಿಗೆ ಹೋಲಿಸಿದರೆ ನಿಂಟೆಂಡೊ ಗ್ರಾಹಕನಿಗೆ ಹೊಸ ಅನುಭವ ನೀಡುತ್ತದೆ. ನೀಡಿದ ಹಣಕ್ಕೆ ಮೋಸವಿಲ್ಲ ಎಂಬ ಮಾತಿದೆ. 
 
ಮೂರು ಮೋಡ್‌ಗಳು 
ನಿಂಟೆಂಡೊ  ಮೂರು ಮೋಡ್‌ಗಳಲ್ಲಿ ಕೆಲಸ ಮಾಡುತ್ತದೆ. ಮೊದಲನೆಯದು ಟಿ.ವಿ ಮೋಡ್‌. ಇದು ಟಿ. ವಿಗೆ ಸಂಪರ್ಕ ಮಾಡಿ ನೋಡುವಂತಹದ್ದು, ಎರಡನೆಯದು ಹ್ಯಾಂಡ್ ಹೆಲ್ಡ್‌ ಮೋಡ್‌. ಕೈಯಲ್ಲಿ ಹಿಡಿದುಕೊಂಡು ಆಡುವಂತಹದ್ದು. ಇನ್ನು  ಮೂರನೇಯದು ಟೇಬಲ್ ಟಾಪ್‌ ಮೋಡ್‌. ವಿಮಾನಗಳಲ್ಲಿ ಪ್ರಯಾಣ ಮಾಡುವಾಗ ಈ ಮೋಡ್‌ನಲ್ಲಿಟ್ಟು ಖುಷಿಪಡಬಹುದು. 
 
ಅತ್ಯಾಧುನಿಕ ಹಾರ್ಡ್‌ವೇರ್‌
Wii U  ಹೆಚ್ಚಿನ ಜಾಗವನ್ನು ಬಯಸುತ್ತಿತ್ತು. ಟಚ್‌ಪ್ಯಾಡ್‌ ನಿಯಂತ್ರಕ ಅಷ್ಟೊಂದು ಆಪ್ಯಾಯಮಾನವಾಗಿರಲಿಲ್ಲ. ಆಯತಾಕಾರದ ನಿಯಂತ್ರಕಗಳು ಇದಕ್ಕಿದ್ದವು. ಒಂದು ಆಟವನ್ನು ಪ್ರಾರಂಭಿಸಿ ಮುಗಿಯುವ ಮೊದಲೇ ಬ್ಯಾಟರಿ ಚಾರ್ಜ್‌ ಮಾಡಬೇಕಿತ್ತು. 
 
ನಿಂಟೆಂಡೊದಲ್ಲಿ ಎರಡು ಕೇಬಲ್‌ಗಳಿದ್ದು, ಅವನ್ನು ಟಿ.ವಿಯ ಡಾಕ್‌ ಮತ್ತು ವಿದ್ಯುತ್‌ಗೆ ಸಂಪರ್ಕ ಮಾಡ ಬಹುದು.  ಇದರಿಂದ ದೊಡ್ಡ ಪರದೆಯಲ್ಲಿ ಗೇಮ್‌ ಆಡಬಹುದು. ಈ ಸಾಧನದಿಂದ ತೆಗೆಯಬಹುದಾದ ವೈರ್‌ಲೆಸ್‌ ನಿಯಂತ್ರಕಗಳು ಇವೆ. ಇವಕ್ಕೆ ಜಾಯ್‌ ಕಾನ್ಸ್‌ (Joy-Cons) ಎನ್ನುತ್ತಾರೆ. ಇವನ್ನು ಒತ್ತಿ ಹಿಡಿದು ತೆಗೆಯಬಹುದು. 
 
ಇದರಲ್ಲಿ ಗಟ್ಟಿಮುಟ್ಟಾದ ಸ್ವಿಚ್‌ ಹಾರ್ಡ್‌ವೇರ್‌ಗಳಿವೆ. ನಿಯಂತ್ರಕಗಳು ಎಲ್ಲ ದಿಕ್ಕಿಗೆ ಸುಲಭವಾಗಿ ತಿರುಗುತ್ತವೆ. ಇಬ್ಬರು ಒಂದೇ ಬಾರಿಗೆ ಆಡಬಹುದಾದ ಗೇಮ್‌ ಇದರಲ್ಲಿರುವುದು ಮತ್ತೊಂದು ವಿಶೇಷ. ಅವರೊಂದಿಗೆ ಮತ್ತಷ್ಟು ಜನ ವೀಕ್ಷಿಸಬಹುದು. 
ಬ್ರಿಯಾನ್ ಎಕ್ಸ್ ಚೆನ್‌  (ದಿ ನ್ಯೂಯಾರ್ಕ್‌ ಟೈಮ್ಸ್‌) 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT