ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಠ್ಯ ಸಮಸ್ಯೆ ಬಗೆಹರಿಸುವ ಆ್ಯಪ್

ಆ್ಯಪ್ ಲೋಕ
Last Updated 14 ಮಾರ್ಚ್ 2017, 19:30 IST
ಅಕ್ಷರ ಗಾತ್ರ
ಇದು ಪರೀಕ್ಷೆಯ ಕಾಲ. ಸಹಜವಾಗಿಯೇ ವಿದ್ಯಾರ್ಥಿಗಳು ದಿನದಲ್ಲಿ ಹತ್ತು ಗಂಟೆಗಳಿಗೂ ಹೆಚ್ಚು ಕಾಲ ಓದಿನಲ್ಲಿ ತಲ್ಲೀನರಾಗಿರುತ್ತಾರೆ. ಈ ವೇಳೆ ಅವರಿಗೆ ಪಠ್ಯಕ್ಕೆ ಸಂಬಂಧಿಸಿದಂತೆ ಸಮಸ್ಯೆ ಅಥವಾ ಅನುಮಾನ ಎದುರಾದರೆ ಉಪನ್ಯಾಸಕರನ್ನು ಸಂಪರ್ಕಿಸಿ ಬಗೆಹರಿಸಿಕೊಳ್ಳುತ್ತಾರೆ. ಒಂದು ವೇಳೆ ಉಪನ್ಯಾಸಕರು ಸಂಪರ್ಕಕ್ಕೆ ಸಿಗದಿದ್ದ ಪಕ್ಷದಲ್ಲಿ ಏನು ಮಾಡುವುದು? ಎಂಬ ಆತಂಕ ವಿದ್ಯಾರ್ಥಿಗಳಿಗೆ ಇದ್ದೇ ಇರುತ್ತದೆ.

ಈ ಆತಂಕವನ್ನು ಹೋಗಲಾಡಿಸುವ ಸಲುವಾಗಿ ‘ಹ್ಯಾಶ್‌ಲರ್ನ್’ (Hashlearn ) ಕಂಪೆನಿಯು ಪಠ್ಯದ ಸಮಸ್ಯೆಗಳನ್ನು ತತ್‌ಕ್ಷಣದಲ್ಲೇ ಆ್ಯಪ್ ಮೂಲಕ ಬಗೆಹರಿಸುವ  ಆ್ಯಪ್ ಅನ್ನು ಅಭಿವೃದ್ಧಿಪಡಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
 
ಈ ಆ್ಯಪ್ ಮೂಲಕ ವಿದ್ಯಾರ್ಥಿಗಳು ಪಠ್ಯದ ಸಮಸ್ಯೆಗಳಿಗೆ ತಕ್ಷಣದಲ್ಲೇ  ಪರಿಹಾರ ಕಂಡುಕೊಳ್ಳಬಹುದು.  ವಿದ್ಯಾರ್ಥಿಗಳು ಸಮಸ್ಯೆಯನ್ನು ಬರೆದು ಕಳಿಸಬಹುದು ಅಥವಾ ಸಮಸ್ಯೆ, ಪ್ರಶ್ನೆಯನ್ನು ವಿಡಿಯೊ ಅಥವಾ ಸ್ಕ್ಯಾನ್ ಮಾಡಿಯೂ ಕಳುಹಿಸಬಹುದು. ನುರಿತ ಅಧ್ಯಾಪಕರು ಆ್ಯಪ್ ಮೂಲಕವೇ ಪರಿಹಾರವನ್ನು ತಿಳಿಸುತ್ತಾರೆ.
 
ವಿಜ್ಞಾನ, ವಾಣಿಜ್ಯ ವಿಷಯಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಮಾತ್ರಕಳುಹಿಸಬಹುದು. 8ನೇ ತರಗತಿಯಿಂದ 12ನೇ ತರಗತಿವರೆಗಿನ ಗಣಿತ, ಜೀವವಿಜ್ಞಾನ, ಅಕೌಂಟ್ಸ್, ಭೌತವಿಜ್ಞಾನ, ರಸಾಯನ ವಿಜ್ಞಾನ, ಸಸ್ಯವಿಜ್ಞಾನ ಮತ್ತು ಬಿಸಿನೆಸ್‌ಗೆ ಸಂಬಂಧಿಸಿದ ಪಠ್ಯವನ್ನು ಆ್ಯಪ್‌ನಲ್ಲಿ ಅಪ್‌ಲೋಡ್‌ ಮಾಡಲಾಗಿದೆ.
 
ಆಸಕ್ತ ವಿದ್ಯಾರ್ಥಿಗಳು ಈ ಮೊಬೈಲ್ ಸಂಖ್ಯೆಗೆ 9206045180 ಮಿಸ್ಡ್ ಕಾಲ್ ಕೊಡುವ ಮೂಲಕ ಹ್ಯಾಶ್‌ಲರ್ನ್ ಆ್ಯಪ್ ಅನ್ನು ಡೌನ್್ಲೋಡ್ ಮಾಡಿಕೊಳ್ಳಬಹುದು ಎಂದು ಆ್ಯಪ್ ವಿನ್ಯಾಸಕರಾದ ಗೋಪಾಲಕೃಷ್ಣನ್ ಹೇಳುತ್ತಾರೆ. ಆಂಡ್ರಾಯ್ಡ್‌ ಮಾದರಿಯಲ್ಲಿ ಮಾತ್ರ ಈ ಆ್ಯಪ್ ಲಭ್ಯವಿದೆ. ಗೂಗಲ್ ಪ್ಲೇಸ್ಟೋರ್: Hashlearn app 
 
ಟ್ರೂಪಿಕ್ ಆ್ಯಪ್…
ಹೈದರಾಬಾದ್ ಮೂಲದ ಕಂಪೆನಿಯೊಂದು ಬಟ್ಟೆಗಳ ಆಯ್ಕೆಗಾಗಿಯೇ ಪ್ರತ್ಯೇಕ ಆ್ಯಪ್ ಅನ್ನು ಅಭಿವೃದ್ಧಿಪಡಿಸಿದೆ. ಈ ಮೂಲಕ ಗ್ರಾಹಕರು ತಮ್ಮ ಇಷ್ಟದ ಉಡುಪುಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಈ ಆ್ಯಪ್‌ಗೆ ಟ್ರೂಪಿಕ್ ಎಂದು ಹೆಸರಿಡಲಾಗಿದೆ.
 
ಆಂಡ್ರಾಯ್ಡ್‌ ಪ್ಲಾಟಫಾರಂನಲ್ಲಿ ಲಭ್ಯವಿರುವ ಈ ಆ್ಯಪ್ ಅನ್ನು ಗ್ರಾಹಕರು ಮೊದಲು ಡೌನ್ ಲೋಡ್ ಮಾಡಿಕೊಳ್ಳಬೇಕು. ತದನಂತರ ಆ್ಯಪ್ ಸೆಟ್ಟಿಂಗ್ಸ್‌ನಲ್ಲಿ  ಉಡುಪಿನ ಮಾದರಿ, ಬಣ್ಣ, ದರ, ಅಳತೆ, ಬೇಕಾಗಿರುವ ಮಾದರಿಗಳು ಮತ್ತು ಬ್ರ್ಯಾಂಡ್ ಅನ್ನು ಅಪ್್ಲೋಡ್ ಮಾಡಬೇಕು. ತದನಂತರ ಬಳಕೆದಾರರ ಅಭಿರುಚಿಯ ಉತ್ಪನ್ನಗಳ ದೊಡ್ಡ ಪಟ್ಟಿಯೇ ಕಣ್ಣ ಮುಂದೆ ಬರುತ್ತದೆ. ಇಷ್ಟಪಡುವ ಬಣ್ಣದ, ಅಳತೆಯ ಮಾದರಿ ಹೊಸ ಉಡುಪು ಮಾರುಕಟ್ಟೆ ಪ್ರವೇಶಿಸಿದ ಕೂಡಲೇ ಟ್ರೂಪಿಕ್ ಆ್ಯಪ್ ಬಳಕೆದಾರರನ್ನು ಎಚ್ಚರಿಸುವ ಕೆಲಸ ಮಾಡುತ್ತದೆ. ಬಟ್ಟೆ ಖರೀದಿಸಲು ಮುಂದಾಗುವ ಗ್ರಾಹಕರಿಗೆ ಈ ಆ್ಯಪ್ ನೆರವು ನೀಡಲಿದೆ. ಗೂಗಲ್ ಪ್ಲೇಸ್ಟೋರ್: Truepick app
 
ನಿದ್ದೆಯಲ್ಲಿ ನಡೆಯುವವರಿಗೆ ಒಂದು ಆ್ಯಪ್…
ಕೆಲವರಿಗೆ ನಿದ್ದೆಯಲ್ಲಿ ನಡೆಯುವ ಅಭ್ಯಾಸವಿರುತ್ತದೆ. ನಿದ್ದೆಯಲ್ಲಿ ಬಾಗಿಲು ತೆರೆದು ರಸ್ತೆಗೆ ಹೋಗುವುದು, ಮಹಡಿ ಮೇಲಿನಿಂದ ಬೀಳುವ ಅಪಾಯಗಳು ಹೆಚ್ಚು. ನಿದ್ದೆಯಲ್ಲಿ ನಡೆಯುವವರನ್ನು ಎಚ್ಚರಿಸುವ ಸ್ಲೀಪಿಂಗ್ ಟ್ರ್ಯಾಕ್ ಆ್ಯಪ್ ಅಮೆರಿಕ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ. 
 
ನಿದ್ದೆಯಲ್ಲಿ ನಡೆಯುವವರು ತಮ್ಮ ಸ್ಮಾರ್ಟ್ ವಾಚ್ ಅಥವಾ ಬಿಟ್‌ಬ್ಯಾಂಡ್ ನಲ್ಲಿ ಸ್ಲೀಪಿಂಗ್ ಟ್ರ್ಯಾಕ್ ಆ್ಯಪ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು. ನಂತರ ಮನೆಯಲ್ಲಿರುವ ಸದಸ್ಯರ ಮೊಬೈಲ್ ನಂಬರ್ ಅನ್ನು ಈ ಆ್ಯಪ್‌ನಲ್ಲಿ ನಮೂದಿಸಿದರೆ ಆ್ಯಪ್ ಸ್ವಯಂಚಾಲಿತವಾಗಿ ಕೆಲಸ ಮಾಡುತ್ತದೆ. ಉದಾಹರಣೆಗೆ ಒಂದು ಕುಟುಂಬದಲ್ಲಿ ಗಂಡ, ಹೆಂಡತಿ  ಮತ್ತು ಮಗ ಇರುತ್ತಾರೆ ಎಂದಿಟ್ಟುಕೊಳ್ಳಿ. ಮಗನಿಗೆ ನಿದ್ದೆಯಲ್ಲಿ ನಡೆಯುವ ಅಭ್ಯಾಸ ಇರುತ್ತದೆ. ಮಗ ಕಟ್ಟಿಕೊಂಡಿರುವ ಕೈಗಡಿಯಾರದಲ್ಲಿ ಸ್ಲೀಪಿಂಗ್ ಟ್ರ್ಯಾಕ್ ಆ್ಯಪ್ ಇರುತ್ತದೆ.
 
ಈ ಆ್ಯಪ್‌ನಲ್ಲಿ ತಂದೆಯ ಮೊಬೈಲ್ ಸಂಖ್ಯೆಯನ್ನು ದಾಖಲಿಸಲಾಗಿರುತ್ತದೆ. ಮಗ ಒಂದು ಕೋಣೆಯಲ್ಲಿ ಮತ್ತು ದಂಪತಿಗಳು ಮತ್ತೊಂದು ಕೋಣೆಯಲ್ಲಿ ಮಲಗಿರುತ್ತಾರೆ. ನಿದ್ದೆಯಲ್ಲಿ ಮಗ ನಡೆಯಲು ಆರಂಭಿಸಿದ ಕೂಡಲೇ ತಂದೆಯ ಮೊಬೈಲ್ ರಿಂಗಣಿಸುತ್ತದೆ. ಈ ರೀತಿಯಾಗಿ ಈ ಆ್ಯಪ್ ಕೆಲಸ ಮಾಡುತ್ತದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಗೂಗಲ್ ಪ್ಲೇಸ್ಟೋರ್: Sleepingtrack app

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT