ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಟೀಕಿಸುವವರ ಅಲಕ್ಷಿಸಿ’

ಟೀಕಿಸುವವರ ವಿರುದ್ಧ ಹರಿಹಾಯ್ದ ನಟಿ
Last Updated 14 ಮಾರ್ಚ್ 2017, 19:30 IST
ಅಕ್ಷರ ಗಾತ್ರ
ತಮ್ಮ ದೇಹಾಕಾರ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗೊಳಗಾಗಿದ್ದ ನಟಿ ಹುಮಾ ಖುರೇಷಿ ಟೀಕಿಸುವವರ ವಿರುದ್ಧ ಹರಿಹಾಯ್ದಿದ್ದಾರೆ. ‘ತಮ್ಮ ಕೆಲಸದಲ್ಲಿ ಮಗ್ನರಾಗಿರುವವರ ಮೇಲೆ ಟೀಕೆಗಳು ಪರಿಣಾಮ ಬೀರುವುದಿಲ್ಲ’ ಎಂದು ಹೇಳಿದ್ದಾರೆ.
 
ಪ್ರಖ್ಯಾತ ಉಡುಪು ಬ್ರ್ಯಾಂಡ್‌ಗಾಗಿ ಚಿತ್ರೀಕರಿಸಲಾಗಿರುವ ವಿಡಿಯೊದಲ್ಲಿ ಅವರು ಟೀಕಾಕಾರರಿಗೆ ಉತ್ತರ ನೀಡಿದ್ದಾರೆ.
 
‘ಟೀಕೆ ಮಾಡುವುದು ಕೆಲವರ ಹುಟ್ಟುಗುಣ. ಕಾಲೆಳೆಯುವುದೇ ಅವರ ಗುರಿ, ಕೆಟ್ಟದಾಗಿ ಮಾತನಾಡುವುದು, ಗಾಳಿಸುದ್ದಿ ಹಬ್ಬಿಸುವುದು ಮಾಡುತ್ತಲೇ ಇರುತ್ತಾರೆ. ಅವರನ್ನು ಅಲಕ್ಷ್ಯ ಮಾಡಿದರೆ ಸಾಕು, ಟೀಕಾಕಾರರು ಸೋಲುತ್ತಾರೆ’ ಎಂದಿದ್ದಾರೆ.
 
ಪ್ರಸ್ತುತ ‘ಜಾಲಿ ಎಲ್ಎಲ್‌ಬಿ2’ ಚಿತ್ರದ ಗೆಲುವಿನ ಅಲೆಯಲ್ಲಿ ತೇಲುತ್ತಿರುವ ನಟಿ ತಮ್ಮ ಮೊದಲ ಅಂತರರಾಷ್ಟ್ರೀಯ ಚಿತ್ರ ‘ವಿಕ್ಟೋರಿಯಾಸ್ ಹೌಸ್’ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT