ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯ ಮಹಾಂತೇಶ ಪ್ರೌಢಶಾಲೆಗೆ ಪ್ರಶಸ್ತಿಗಳ ಗರಿ

Last Updated 15 ಮಾರ್ಚ್ 2017, 5:32 IST
ಅಕ್ಷರ ಗಾತ್ರ

ಮುದಗಲ್: ಇಲ್ಲಿನ ವಿಜಯ ಮಹಾಂತೇಶ ಪ್ರೌಢ ಶಾಲೆಯ ವಿದ್ಯಾ ರ್ಥಿಗಳು ರಾಜ್ಯ ವಿಜ್ಞಾನ ಪರಿಷತ್ ನೀಡುವ ಜಿಲ್ಲಾ ಮತ್ತು ರಾಜ್ಯ ಮಟ್ಟದ ಪ್ರಶಸ್ತಿಗಳನ್ನು  ಪಡೆದು ವಿಭಿನ್ನರಾಗಿ ಗುರುತಿಸಿಕೊಂಡಿದ್ದಾರೆ.

ಶಾಲೆಯ ವಿದ್ಯಾರ್ಥಿಗಳಿಗೆ ಸಂಶೋಧನಾತ್ಮಕ ಶಿಕ್ಷಣ ನೀಡಲಾಗುತ್ತಿದೆ. ಮಕ್ಕಳಲ್ಲಿ ಸೃಜನಶೀಲ ವಿಷಯಗಳ ಕುರಿತು ಅನ್ವೇಷಣೆ ಮಾಡಿಸಲಾಗುತ್ತದೆ. ಇಲ್ಲಿನ ವಿದ್ಯಾರ್ಥಿಗಳು ರಾಜ್ಯ ಮಟ್ಟದಲ್ಲಿ  ತಮ್ಮ ಪ್ರಬಂಧ ಮಂಡಿಸಿದ್ದಾರೆ. ಇಲ್ಲಿನ ವಿದ್ಯಾರ್ಥಿ ಅಭಿಲಾಷ ಇನ್‌ಸ್ಪೈರ್‌ ಆವಾರ್ಡ್‌ ಸ್ಫರ್ಧೆಯಲ್ಲಿ ‘ಎಟಿಎಂ ರಾಬರ್‌ ಕ್ಯಾಚಿಂಗ್ ಸಿಸ್ಟಂ’ ಪ್ರಬಂಧ ಮಂಡಿಸಿ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ಚಿತ್ರಕಲೆ ವಿಭಾಗದ ರಾಜ್ಯಮಟ್ಟದ ಸ್ಫರ್ಧೆಯಲ್ಲೂ ಅಭಿಲಾಷ ಪ್ರಥಮ ಸ್ಥಾನ ಗಳಿಸಿದ್ದಾರೆ.

ಮಂಡ್ಯ ಜಿಲ್ಲಿಯಲ್ಲಿ ಜರುಗಿದ ರಾಜ್ಯ ಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಲೆ ಪ್ರದರ್ಶಿಸಿದ್ದಾರೆ. ಜಿಲ್ಲಾ ಮಟ್ಟದ ನಾಟಕ ಪ್ರದರ್ಶನದಲ್ಲೂ ಪ್ರಶಸ್ತಿ ಪಡೆದಿದ್ದಾರೆ. 

ಇಲ್ಲಿನ ಶಿಕ್ಷಕರು ವಿದ್ಯಾರ್ಥಿಗಳಿಗೆ ವೈಜ್ಞಾನಿಕ ಮನೋಭಾವ ಬೆಳೆಸುವ ದೃಷ್ಠಿಯಿಂದ ವಿಜ್ಞಾನ ಗೋಷ್ಠಿ, ವಿಜ್ಞಾನ ನಾಟಕ, ವಿಜ್ಞಾನ ವಸ್ತು ಪ್ರದರ್ಶನ, ವಿಜ್ಞಾನ ಸಮಾವೇಶ, ರಸಪ್ರಶ್ನೆ ಕಾರ್ಯಕ್ರಮ ನಡೆಸುತ್ತಾರೆ.

ಶಾಲೆ ಅವಧಿ ಮುಗಿದ ನಂತರವೂ ಹೆಚ್ಚುವರಿ  ಅಭ್ಯಾಸದ ಅವಧಿ ರೂಪದಲ್ಲಿ ಬೋಧಿಸುತ್ತಾರೆ.

ಶೈಕ್ಷಣಿಕ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನುಗಳಿಸುವ ವಿದ್ಯಾರ್ಥಿಗಳನ್ನು ದತ್ತು ಸ್ವೀಕರಿಸಿ ಶಿಕ್ಷಣ ನೀಡಲಾಗುತ್ತದೆ. ವಿದ್ಯಾರ್ಥಿಗಳಾದ ಅಭಿಲಾಷ, ವೀರೇಶ, ಸೌಮ್ಯ ಅವರನ್ನು ದತ್ತು ಸ್ವೀಕರಿಸಿ ಶಿಕ್ಷಣ ನೀಡಲಾಗುತ್ತಿದೆ. 2016–17 ನೇ ಸಾಲಿನಲ್ಲಿ ಈ ಶಾಲೆ ವಿದ್ಯಾರ್ಥಿಗಳು ವಾಲಿಬಾಲ್ ಕ್ರೀಡಾಕೂಟದಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಗೊಂಡ ಆಟದ ಪ್ರದರ್ಶನ ನೀಡಿ ಜನ ಮೆಚ್ಚಿಗೆ ಪಡೆ ದಿದ್ದಾರೆ. ಈ ಶಾಲೆ ಕ್ರೀಡಾಕೂಟ ವಿಭಾಗದಲ್ಲಿ ಪ್ರತಿ ವರ್ಷ ಮುದಗಲ್ ವಲಯ ಮಟ್ಟದಲ್ಲಿ ಚಾಂಪಿಯನ್ ಪ್ರಶಸ್ತಿ ಪಡೆಯುತ್ತಿದ್ದಾರೆ.

ಇಲ್ಲಿನ ಮಕ್ಕಳು ವಿವಿಧ ಕಡೆ ನಡೆದ ವಸ್ತು ಪ್ರದರ್ಶನದಲ್ಲಿ ಭಾಗವಹಿಸಿ ಕೈಗಾರಿಕೆಗಳಿಂದ ಆಗುವ ದುಷ್ಪರಿಣಾಮಗಳು, ಆಹಾರ ಮತ್ತು ಆರೋಗ್ಯ, ಆಹಾರ ಕಲಬೆರಕೆ, ಸುಲಭ ಕಲಿಕೆಗಾಗಿ ಗಣಿತ, ಸುಲಭವಾಗಿ ಎತ್ತರ ಕಂಡು ಹಿಡಿಯುವುದು, ರೇಖಾಗಣಿತ ಸೇರಿದಂತೆ ಇನ್ನಿತರ ವಿಷಯಗಳ ಬಗ್ಗೆ  ಸಾರ್ವಜನಿಕರಲ್ಲಿ ಜಾಗೃತಿ ಮುಡಿಸಿದ್ದಾರೆ.

ಮುದಗಲ್‌ನ ಇತಿಹಾಸಿದ ಪ್ರಜ್ಞೆ ಮೂಡಿಸುವುದಕ್ಕಾಗಿ ಇಲ್ಲಿನ ಸ್ಮಾರಕಗಳ ಅಣಕು ಪ್ರದರ್ಶನ ಮಾಡಿದ್ದಾರೆ. ಸಾರ್ವಜನಿಕರಲ್ಲಿ ಇತಿಹಾಸದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.

ಶಾಲೆಯ ವಿದ್ಯಾರ್ಥಿಗಳು ಹಲವಾರು ಯೋಜನೆಗಳನ್ನು ಹಾಕಿಕೊಂಡು ಪಟ್ಟಣದ ಜನರಿಗೆ ಜಾಗೃತಿ ಮುಡಿಸುತ್ತಿದ್ದಾರೆ. ನೀರಿನ ಮಿತ ಬಳಿಕೆ, ನೀರಿನ ಮಹತ್ವ ಕುರಿತು ಜನ ಜಾಗೃತಿ, ಜೈವಿಕ ಔಷಧ ತಯಾರಿಕೆ ಸೇರಿದಂತೆ ಇನ್ನಿತರ ವಿಷಯ ಕುರಿತು ಜನರಿಗೆ ಜಾಗೃತಿ ಮುಡಿಸುತ್ತಿದ್ದಾರೆ.

ಶಾಲೆಯ ಆವರಣದಲ್ಲಿ ವಿವಿಧ ಜಾತಿಯ ಗಿಡ ಮರಳು ಕಂಗೊಳಿಸುತ್ತಿವೆ.

ಈ ಗಿಡಮರಗಳಿಂದ ಶಾಲೆಯ ಅಂದ ಚಂದ ಹೆಚ್ಚಾಗಿದೆ. ಇವುಗಳ ಮಧ್ಯೆ ಗುರು ರಾಘವೇಂದ್ರಾಯ ಕಲಾ ಮಂಟಪ ಇದೆ. ಶಾಲೆಯಲ್ಲಿ ಸುಸಜ್ಜಿತವಾದ ವಿಜ್ಞಾನ ಹಾಗೂ ಗಣಕ ಯಂತ್ರ ಲ್ಯಾಬ್ ಸೌಲಭ್ಯ ಇದೆ. ವಿದ್ಯಾರ್ಥಿಗಳಲ್ಲಿ ಸ್ಫರ್ಧಾತ್ಮಕ ಮನೋಭಾವನೆ ಬೆಳೆಸಲು ವಿವಿಧ ಸ್ಫರ್ಧಾತ್ಮಕ ಪತ್ರಿಕೆಗಳನ್ನು ತರಿಸಿ ಜ್ಞಾನ ಪಡೆಯಲು ಸೌಲಭ್ಯ ಕಲ್ಪಿಸುತ್ತಿದ್ದಾರೆ.

ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಗುರಿ ಹೊಂದಿರುವ ಶಿಕ್ಷಕರು ವಿವಿಧ ವಿಷಯಗಳ ಬಗ್ಗೆ ಮಕ್ಕಳಿಗೆ ಅಗತ್ಯ ಮಾಹಿತಿ ಮತ್ತು ಮಾರ್ಗದರ್ಶನ ನೀಡತ್ತಾರೆ.

***

ವಿದ್ಯಾರ್ಥಿಗಳು ಐಎಎಸ್‌ ಅಧಿಕಾರಿ ಆಗಬೇಕು. ಅವರ ಸಾಧನೆಗೆ ಪೂರಕವಾದ ಶಿಕ್ಷಣ ನೀಡುತ್ತಿದ್ದೇವೆ. ಮಾರ್ಗದರ್ಶನ ತೋರುತ್ತಿದ್ದೇವೆ.
–ಸಂಗಮೇಶ ಶಿಕ್ಷಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT