ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬರ: ರೈತರಿಗೆ ಆತಂಕ ಬೇಡ’

Last Updated 15 ಮಾರ್ಚ್ 2017, 6:30 IST
ಅಕ್ಷರ ಗಾತ್ರ

ಗಜೇಂದ್ರಗಡ: ಈ ಭಾಗದಲ್ಲಿ ಮಳೆ ಇಲ್ಲದೆ ರೈತರು ತಮ್ಮ ಜಾನುವಾರು ಸಾಕುವುದು ತುಂಬಾ ದುಸ್ತರವಾಗಿದೆ. ಆದರೆ ಸರ್ಕಾರ ಸದಾ ರೈತರ ನೆರವಿಗಿದೆ. ಅವರ ಜಾನುವಾರು ರಕ್ಷಣೆಗಾಗಿ ಗೋಶಾಲೆ ತೆರೆಯುತ್ತಿದೆ. ಅವುಗಳ ಪಾಲನೆ ಪೋಷಣೆಯ ಜವಾಬ್ದಾರಿಯನ್ನು ಸರ್ಕಾರ ಹೊತ್ತ ಕಾರಣ ಯಾವುದೇ ಕಾರಣಕ್ಕೂ ರೈತರು ಆತಂಕಕ್ಕೆ ಒಳಗಾಗಬಾರದು ಎಂದು ಜಿಲ್ಲಾ ಪಂಚಾಯ್ತಿ ಸದಸ್ಯೆ ಮಂಜುಳಾ ಹುಲ್ಲಣ್ಣವರ ಹೇಳಿದರು.

ಅವರು ತಾಲ್ಲೂಕು ಆಡಳಿತದಿಂದ ಸ್ಥಾಪಿಸಿದ ನಾಗೇಂದ್ರಗಡ ಕೆರೆಯಲ್ಲಿನ ಗೋಶಾಲೆ ಮಂಗಳವಾರ ಉದ್ಘಾಟಿಸಿ ಮಾತನಾಡಿ, ಇಂದು ಅಳಿಯುತ್ತಿರುವ ಪಶು ಸಂಪತ್ತನ್ನು ಉಳಿಸಲು ರೈತರು ಸರ್ಕಾರದ ಜೊತೆಗೆ ಕೈಜೋಡಿಸಬೇಕು. ಇಲ್ಲಿನ ಗೋಶಾಲೆಯಲ್ಲಿ  ಜಾನುವಾರು ನಲುಗದಂತೆ ಅವುಗಳಿಗೆ ಮೇವು ನೀರು ಒದಗಿಸಿ ಅವು ಸುರಕ್ಷಿತವಾಗಿ ಇರುವಂತೆ  ಎಲ್ಲಾ ಸೌಕರ್ಯ ಒದಗಿಸಲಾಗಿದೆ. ಮಳೆಗಾಲ ಆರಂಭವಾಗುವವರೆಗೆ ತಾವು ಗೋಶಾಲೆಗೆ ಬಿಟ್ಟ ದನಗಳನ್ನು ಮಕ್ಕಳಂತೆ ಜೋಪಾನ ಮಾಡುವ ಕೆಲಸವನ್ನು ಸರ್ಕಾರ ನಿರ್ವಹಿಸಲಿದೆ ಎಂದರು.

ಯುವ ಮುಖಂಡ ಮಿಥುನ್ ಪಾಟೀಲ ಗೋಶಾಲೆಯಲ್ಲಿ ದನಗಳಿಗೆ ಮೇವು ನೀಡುವ ಮೂಲಕ ಅದಕ್ಕೆ ಚಾಲನೆ ನೀಡಿ ಮಾತನಾಡಿ, ಬರಗಾಲದ ಈ ಸಂದರ್ಭದಲ್ಲಿ ಸರ್ಕಾರ ಎಲ್ಲ ಕಾಲಕ್ಕೂ ಬೆಂಬಲಕ್ಕೆ ನಿಲ್ಲಲಿದೆ. ರೈತರು ಯಾವುದೇ ಕಾರಣಕ್ಕೂ ಭಯಪಡದೆ ಈ ಯೋಜನೆಗಳನ್ನು ಸದುಪಯೋಗ ಪಡಿಸಿ ಕೊಳ್ಳಬೇಂದು ಮನವಿ ಮಾಡಿದರು.

ಹೊಳೆಆಲೂರ ಎಪಿಎಂಸಿ ಅಧ್ಯಕ್ಷ ವೀರಣ್ಣ ಶೆಟ್ಟರ್, ತಾಲ್ಲೂಕು ಪಂಚಾಯ್ತಿ ಸದಸ್ಯೆ ರೇಣುಕಾ ಬೆನಕನವಾರಿ, ಝಾಕೀರ ಹುಸೇನ ನದಾಫ್, ರಾಮ ಲಿಂಗಪ್ಪ ಬೆನಕನವಾರಿ, ದೇವೇಂದ್ರಪ್ಪ ಕಮ್ಮಾರ, ಅವ್ವಣ್ಣೆಪ್ಪ ಹೊಸಳ್ಳಿ, ರಮೇಶ ರಾಠೋಡ, ಗೌಡಯ್ಯ ಹಿರೇಮಠ, ನಿಂಗಪ್ಪ ಹಂಡಿ, ಅಶೋಕ ಜಿಗಳೂರ ಲಕ್ಕಲಕಟ್ಟಿ, ನಾಗೇಂದ್ರಗಡ ಗ್ರಾಮಸ್ಥರು, ತಾ.ಪಂ.ಅಧಿಕಾರಿ ಎಂ.ವಿ.ಚಳಗೇರಿ, ತಹ ಶೀಲ್ದಾರ್‌ ಶಿವಲಿಂಗಪ್ರಭು ವಾಲಿ, ಉಪ ತಹಶೀಲ್ದಾರ್ ವಿ.ಎಂ.ಸಾಲಿ ಮಠ, ಕಂದಾಯ ಅಧಿಕಾರಿ ವೀರಣ್ಣ ಅಡಗತ್ತಿ ಇತರರು ಇದ್ದರು.

**

ಜಿಲ್ಲೆಯ 5ನೇ ಗೋಶಾಲೆ
ಈ ಗೋಶಾಲೆ ಸ್ಥಾಪನೆಯಾ ದರೂ ಕೆರೆಯಲ್ಲಿನ ನೀರು ಬತ್ತಿದ ಪರಿಣಾಮ ಅನೇಕ ದಿನಗಳಿಂದ ಇದು ನೆನೆಗುದಿಗೆ ಬಿದ್ದಿತ್ತು. ನಂತರ ಕೆರೆ ಯಲ್ಲಿ ಕೊಳವೆ ಬಾವಿ ಕೊರೆದರೂ ಸಮರ್ಪಕವಾಗಿ ನೀರು ಸಿಗದೇ ಪರಿ ತಪಿಸುತ್ತಿದ್ದರು. ಲಕ್ಕಲಕಟ್ಟಿ ಪರಿಸರ ದಲ್ಲಿ ಸುಮಾರು 13 ಕೊಳವೆಬಾವಿ ಕೊರೆದರೂ ಸರಿಯಾದ ನೀರು ಬೀಳ ಲಿಲ್ಲ. ನಂತರ ಕೆರೆಯಲ್ಲಿ ಕೊರೆದ ಕೊಳವೆ ಬಾವಿಯಲ್ಲಿ ಉತ್ತಮ ನೀರು ಬಿತ್ತು. ಅದರಿಂದ ಈಗ ಗೋಶಾಲೆ ನಡೆಸಲಾಗುತ್ತದೆ. ಕೆರೆಯ ದಂಡೆ ಯಲ್ಲಿ ದನಗಳಿಗಾಗಿ ಮೂರು ಶೆಡ್‌ ಹಾಕಲಾಗಿದೆ. ಈಗಾಗಲೇ 6.5 ಟನ್ ಮೇವು ಸಂಗ್ರಹಿಸಲಾಗಿದೆ. ಇದರ ಉಸ್ತುವಾರಿಗಾಗಿ ಕಂದಾಯ ಇಲಾಖೆ ಮತ್ತು ಪಶುವೈದ್ಯಕೀಯ ಇಲಾಖೆ ಅಧಿಕಾರಿಗಳನ್ನು ನೇಮಕ ಮಾಡ ಲಾಗಿದೆ. ಈಗಾಗಲೇ ಸುಮಾರು 50 ದನಗಳು ಸೇರ್ಪಡೆಯಾಗಿವೆ.

ಈ ಗೋಶಾಲೆಯು ಗದಗ ಜಿಲ್ಲೆ ಯಲ್ಲಿ 5ನೆಯದ್ದಾಗಿದೆ. ಈಗಾಗಲೇ ತಮ್ಮ ಜಾನುವಾರುಗಳನ್ನು ಮೇವು ಇಲ್ಲದ ರೈತರು ಗೋಶಾಲೆಗೆ ತರು ವಂತೆ ಸುತ್ತಲಿನ ಗ್ರಾಮಗಳಲ್ಲಿ ಕಂದಾಯ ಇಲಾಖೆ ಪ್ರಚುರಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT