ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಿನ ಅಭಾವ: ಆತಂಕದಲ್ಲಿ ವನ್ಯಜೀವಿ

Last Updated 15 ಮಾರ್ಚ್ 2017, 7:24 IST
ಅಕ್ಷರ ಗಾತ್ರ

ಡಂಬಳ: ಗಿಡಮೂಲಿಕೆಗಳ ಔಷಧಿ ತಾಣ ಕಪ್ಪತಗುಡ್ಡದ ಪ್ರದೇಶ ಸುಮಾರು 33,000 ಹೆಕ್ಟರ್ ವಿಶಾಲವಾದ ಪ್ರದೇಶ ದಲ್ಲಿ ಹಬ್ಬಿದ್ದು, ನೀರಿನ ಕೊರತೆಯಿಂದ ಪ್ರಾಣಿ ಪಕ್ಷಿ ಹಾಗೂ ಸರೀಸೃಪಗಳು ನೀರಿ ಲ್ಲದೆ ಸಾಯುವಂತಹ  ಸ್ಥಿತಿ ಬಂದಿದೆ.

ಸದಾ ಹಸಿರಿನಿಂದ ಕಂಗೊಳಿಸುತ್ತಿದ್ದ ಕಪ್ಪತಗುಡ್ಡಲ್ಲಿ ಕಾಡಿನ ನಾಶದಿಂದ ಕೆಲ ದಶಕಗಳಿಂದ ನೀರಿನ ಕೊರತೆ ಉಂಟಾ ಗಿದೆ. ಸಕಾಲದಲ್ಲಿ ಸಾಕಷ್ಟು ಮಳೆಯಾ ಗದ ಕಾರಣ ಆತಂಕವಾಗಿದೆ. 

ನೀರಿನ ದಾಹ ನೀಗಿಸಿಕೊಳ್ಳಲು ಪ್ರಾಣಿಗಳು ಗುಡ್ಡದಲ್ಲಿ ಅಲೆದಾಡುತ್ತಿದ್ದು, ಕಾಡು ಬಿಟ್ಟು ನಾಡಿಗೆ ಬಂದರೆ ಎಲ್ಲಿ ನನ್ನನ್ನು ಕೊಲ್ಲುತ್ತಾರೆಯೋ ಎನ್ನುವ ಆತಂಕದಲ್ಲಿ ಜೀವನ ಕಳೆಯುತ್ತಿವೆ. 2005-–06ನೇ ಸಾಲಿನ ಪ್ರಾಣಿಗಳ ಗಣತಿಯ ಪ್ರಕಾರ ಕಪ್ಪತ್ತಗುಡ್ಡದಲ್ಲಿ 317 ಕೃಷ್ಣಮೃಗಗಳು, 295 ಕಾಡುಹಂದಿ–ಮುಳ್ಳುಹಂದಿ, 13 ಕಾಡುಬೆಕ್ಕು, 4 ಚಿರತೆ, 4 ಕರಡಿ, 40 ತೋಳ, 85 ನರಿ, 12 ಕತ್ತೆಕಿರುಬ, 66 ಕಾಡು ಕೋಳಿ, 35 ಚುಕ್ಕೆ ಜಿಂಕೆ, 165 ನವಿಲು ಸೇರಿ ಅಂದಾಜು 250 ವಿವಿಧ ಬಗೆಯ ಪಕ್ಷಿ ಗಳು ಹಾಗೂ ಸರೀಸೃಪಗಳು ವಾಸಿಸುತ್ತಿವೆ ಎಂಬ ವರದಿ ಇದೆ. 

ಪ್ರಾಣಿ, ಪಕ್ಷಿಗಳ ಗಣತಿ ಮಾಡಿ ಒಂದೂವರೆ ದಶಕ ಕಳೆದ ಹಿನ್ನೆಲೆಯಲ್ಲಿ ಇದೇ ರೀತಿಯ ಸಂಖ್ಯೆ ಇದೆಯೇ ಎಂಬ ಜಿಜ್ಞಾಸೆ ಉಂಟಾಗಿದ್ದು, ಮೇಲ್ನೋಟಕ್ಕೆ ವಿವಿಧ ರೀತಿಯ ವನ್ಯಜೀವಿಗಳ ಸಂಖ್ಯೆ ಕಡಿಮೆಯಾಗಿರುವ ಸಾಧ್ಯತೆಯಿದೆ ಎನ್ನಲಾಗುತ್ತದೆ.

ಪ್ರತಿಯೊಂದು ಪ್ರಾಣಿ, ಪಕ್ಷಿಗಳ ರಕ್ಷಣೆಗೆ ಮುಂದಾಗಬೇಕು. ಪ್ರಾಣಿಗಳು  ಭೀಕರ ಬರಗಾಲಕ್ಕೆ ತತ್ತರಿಸಿ ಸಾವನ್ನ ಪ್ಪುವ ಸ್ಥಿತಿಯಲ್ಲಿದ್ದು ಕಪ್ಪತ್ತಗುಡ್ಡ ಪ್ರದೇ ಶದ ವ್ಯಾಪ್ತಿಯಲ್ಲಿ ಅಗತ್ಯವಿರುವ ಕಡೆ ಕೃತಕ ನೀರಿನ ತೊಟ್ಟಿ ನಿಮಿರ್ಸಬೇಕು. ಅಂತರ್ಜಲ ಹೆಚ್ಚಳಕ್ಕೆ ಹಾಗೂ ಮಣ್ಣಿನ ಸಂರಕ್ಷಣೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಮುಂದಾಗಬೇಕು ಎಂದು ತಾಲ್ಲೂಕು ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ವೈ.ಎನ್.ಗೌಡರ ಮತ್ತು ಮೇವುಂಡಿ ಗ್ರಾಮದ ಅಂದಪ್ಪ ಹಾರೂಗೇರಿ ಒತ್ತಾಯಿಸಿದ್ದಾರೆ.

ಕಪ್ಪತ್ತಗುಡ್ಡದ ವ್ಯಾಪ್ತಿಯಲ್ಲಿ ಪ್ರಾಣಿ ಪಕ್ಷಿಗಳ ನೀರಿನ ದಾಹ ತೀರಿಸುತ್ತಿದ್ದ  ಬಹುತೇಕ ಕೆರೆ,ಕೊಳ್ಳ ಬತ್ತಿಹೋಗಿದ್ದು ಮುಂಗಾರು ಮಳೆ ಪ್ರಾರಂಭವಾಗಲು ಎರಡು ಮೂರು ತಿಂಗಳು ಬಾಕಿಯಿದೆ. ತಮ್ಮ ಹಸಿವಿಗಾಗಿ ಅಲೆದಾಡುತ್ತಿದ್ದ ವನ್ಯ ಜೀವಿಗಳು ಕುಡಿಯುವ ನೀರಿಗೂ ಅಲೆ ದಾಡುವ ಸ್ಥಿತಿ ಬಂದಿದ್ದು, ಒಂದಡೆ ಆಹಾರ ಮತ್ತೊಂದಡೆ ನೀರಿನ ಸಂಕಷ್ಟಕ್ಕೆ ಪ್ರಾಣಿ ಪಕ್ಷಿಗಳು ಸಾವನ್ನಪ್ಪುವ ಭೀತಿ ಯಲ್ಲಿವೆ.

ಅರಣ್ಯ ನಾಶದಿಂದ ವರ್ಷದಿಂದ ವರ್ಷಕ್ಕೆ ಮಳೆಯಾಗುವ ಪ್ರಮಾಣ ಕಡೆಮೆಯಾಗುತ್ತಿದ್ದು, ಬಿಸಿಲಿನ ತಾಪ ಮಾನ ಏರಿಕೆಯಾಗುತ್ತಿದೆ.

ಹೀಗಾಗಿ ಸರ್ಕಾರ ಅಗತ್ಯವಿರುವ ಕಡೆ ಪ್ರಾಣಿ ಪಕ್ಷಿಗಳ ಕುಡಿಯುವ ನೀರಿನ ಅನು ಕೂಲಕ್ಕೆ ಎಂದು ಅಲ್ಲಲ್ಲಿ ಚೆಕ್‌ ಡ್ಯಾಂ, ಗುಂಡಿಗಳ ನಿಮಾರ್ಣ ಮಾಡಬೇಕಿದೆ. ಭೀಕರ ಬರಗಾಲ ಛಾಯೆಗೆ ತತ್ತರಿಸಿ ಹೋಗಿರುವ ಕಪ್ಪತ್ತಗುಡ್ಡದಲ್ಲಿನ ವನ್ಯ ಜೀವಿಗಳಿಗೆ ಅರಣ್ಯ ಇಲಾಖೆ ಅಧಿ ಕಾರಿಗಳು ತಕ್ಷಣವೇ ಕೃತಕ ನೀರಿನ ತೊಟ್ಟಿ ನಿಮಾರ್ಣ ಮಾಡುವ ಕಾರ್ಯ ಕೈಗೊಳ್ಳ ಬೇಕಿದೆ.

ಒಟ್ಟಿನಲ್ಲಿ ಕಪ್ಪತ್ತಗುಡ್ಡ ಸಂರಕ್ಷಿತ ಪ್ರದೇಶವಾಗುತ್ತಿಲ್ಲ. ಪ್ರಾಣಿ ಪಕ್ಷಿಗಳಿಗೂ ಸಂರಕ್ಷಣೆ ಸಿಗುತ್ತಿಲ್ಲ. ಹೀಗಾಗಿ ಖಾಸಗಿ ಕಂಪನಿಗಳ ಲಾಬಿ ಮತ್ತು ಸಾರ್ವಜನಿಕರ ಒತ್ತಾಯಕ್ಕೂ ಕಿಮ್ಮತ್ತುಕೊಡದ ಸರ್ಕಾರದ ತ್ರಿಶಂಕು ಸ್ಥಿತಿಯ  ಮಧ್ಯೆ ಪ್ರಾಣಿಪಕ್ಷಿ ಅಳಿವಿನಂಚಿಗಿ ಸರಿಯುತ್ತಿರುವುದು ಮಾತ್ರ ವಿಪರ್ಯಾಸ.

**

ಅನುದಾನ ಆಧಾರಿತವಾಗಿ ಗುಡ್ಡದಲ್ಲಿ ಪ್ರಾಣಿ, ಪಕ್ಷಿಗಳಿಗೆ ಕೃತಕವಾಗಿ ನೀರಿನ ತೊಟ್ಟಿ ನಿರ್ಮಾಣ ಮಾಡಲಾಗುತ್ತದೆ. ಅಂತರ್ಜಲ ಹೆಚ್ಚಳಕ್ಕೆ ಆದ್ಯತೆ ನೀಡಲಾಗುವುದು.
-ಯಶಪಾಲ ಕ್ಷೀರಸಾಗರ, ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT