ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಪತ್ತೆಯಾಗಿದ್ದ ಪ್ರಜಾಪತಿ ಬಂಧನ

Last Updated 15 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಲಖನೌ: ಅತ್ಯಾಚಾರ ಪ್ರಕರಣ ಆರೋಪ ಎದುರಿಸುತ್ತಿರುವ ಉತ್ತರ ಪ್ರದೇಶದ ಸಚಿವ ಗಾಯತ್ರಿ ಪ್ರಜಾಪತಿ ಅವರನ್ನು ಲಖನೌ ಪೊಲೀಸರು ಬುಧವಾರ ಇಲ್ಲಿ ಬಂಧಿಸಿದ್ದಾರೆ. ಪ್ರಜಾಪತಿ ಅವರನ್ನು ಪೋಸ್ಕೊ ನ್ಯಾಯಾಲಯದಲ್ಲಿ ಹಾಜರುಪಡಿಸಲಾಗಿದ್ದು, 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ತಲೆಮರೆಸಿಕೊಂಡಿದ್ದ ಪ್ರಜಾಪತಿ ಅವರನ್ನು ನಗರದ ಆಶಿಯಾನಾ ಪ್ರದೇಶದಲ್ಲಿ ಬೆಳಿಗ್ಗೆ ಬಂಧಿಸಲಾಯಿತು ಎಂದು ನಗರದ ಹಿರಿಯ ಪೊಲೀಸ್‌ ವರಿಷ್ಠಾಧಿಕಾರಿ ಮಂಜಿಲ್‌ ಸೈನಿ ತಿಳಿಸಿದ್ದಾರೆ.

ಕಳಂಕಿತ ಸಚಿವರನ್ನು ವಶಕ್ಕೆ ತೆಗೆದುಕೊಂಡು ಐಷಾರಾಮಿ ಕಾರಿನಲ್ಲಿ ಕರೆದೊಯ್ದದ್ದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ನಂತರ ನ್ಯಾಯಾಲಯಕ್ಕೆ ಹಾಜರುಪಡಿಸುವಾಗ ಪೊಲೀಸ್‌ ವಾಹನಕ್ಕೆ ವರ್ಗಾಯಿಸಲಾಯಿತು.

ಪ್ರಜಾಪತಿ ಮತ್ತು ಇತರೆ ಆರು ಮಂದಿ 2014ರಲ್ಲಿ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸಗಿದ್ದಲ್ಲದೆ, ಆಕೆಯ ಅಪ್ರಾಪ್ತ ವಯಸ್ಸಿನ ಮಗಳ ಮೇಲೆಯೂ ಅತ್ಯಾಚಾರ ನಡೆಸಲು ಪ್ರಯತ್ನಿಸಿದ್ದರು ಎಂದು ಆರೋಪಿಸಲಾಗಿತ್ತು.

ಸುಪ್ರೀಂಕೋರ್ಟ್‌ನ ಸೂಚನೆಯಂತೆ ಪ್ರಜಾಪತಿ ಮತ್ತು ಆರು ಮಂದಿ ವಿರುದ್ಧ ಫೆಬ್ರುವರಿ 17ರಂದು ಎಫ್‌ಐಆರ್‌ ದಾಖಲಿಸಿ, ಜಾಮೀನು ರಹಿತ ವಾರೆಂಟ್‌ ಹೊರಡಿಸಲಾಗಿತ್ತು.

‘ಅವರೇನು ಒಬಾಮ ಅಲ್ಲ’
ನವದೆಹಲಿ: ಪ್ರಜಾಪತಿ ಅವರಿಗೆ ಅಖಿಲೇಶ್‌ ಯಾದವ್ ಸರ್ಕಾರ ರಕ್ಷಣೆ ನೀಡಿತ್ತು ಎಂಬ ಆರೋಪವನ್ನು ಸಮಾಜವಾದಿ ಪಕ್ಷ ತಳ್ಳಿಹಾಕಿದೆ. ಬಂಧನದ ಸಂಗತಿಗೆ ಅತಿಯಾಗಿ ಪ್ರಚಾರ ನೀಡುತ್ತಿರುವುದನ್ನು ಪ್ರಶ್ನಿಸಿದ ಪಕ್ಷದ ಪ್ರಧಾನ ಕಾರ್ಯದರ್ಶಿ ರಾಮ್‌ಗೋಪಾಲ್ ಯಾದವ್‌, ‘ಆರೋಪಿ ಬಗ್ಗೆ ಮಾತನಾಡಲು ಅವರೇನು ಬರಾಕ್‌ ಒಬಾಮ ಮಟ್ಟದವರೇ’ ಎಂದು ಸಿಡಿಮಿಡಿಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT