ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಂಕುಗಳಿಂದ ಕತ್ತರಿ

Last Updated 16 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಏಪ್ರಿಲ್ ಒಂದರಿಂದ ನಮ್ಮ ಖಾತೆಯಲ್ಲಿ ನಿಗದಿತ ಮೊತ್ತ ಇಲ್ಲದಿದ್ದರೆ ಇಂತಿಷ್ಟು ಹಣ ಕಡಿತ ಮಾಡಿ ನಮ್ಮ ಜೇಬಿಗೆ ಕತ್ತರಿ ಹಾಕಲು ಕೆಲವು ಬ್ಯಾಂಕುಗಳು ಹೊಂಚು ಹಾಕುತ್ತಿವೆ. ಇದಕ್ಕೆ ಬ್ಯಾಂಕ್ ನಿರ್ವಹಣೆಯ ನೆಪ ಹೇಳಲಾಗುತ್ತಿದೆ.

ಇತ್ತೀಚೆಗೆ ಬಿಡುಗಡೆಯಾದ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ವರದಿ ಪ್ರಕಾರ, ದೇಶದ ಎಲ್ಲಾ ಬ್ಯಾಂಕುಗಳಲ್ಲಿ ಅನುತ್ಪಾದಕ ಆಸ್ತಿ ಲಕ್ಷಾಂತರ ಕೋಟಿ ಇದ್ದು, ಇದರಲ್ಲಿ ಕಾರ್ಪೊರೇಟ್ ಕಂಪೆನಿಗಳಿಗೆ ನೀಡಿರುವ ಸಾಲದ ಪ್ರಮಾಣವೇ ಹೆಚ್ಚಾಗಿದೆ.

ಇಂತಹವರಿಂದ ಕಟ್ಟುನಿಟ್ಟಾಗಿ ಸಾಲ ವಸೂಲಿ ಮಾಡಲಾಗದ ಬ್ಯಾಂಕುಗಳು ನಮ್ಮಂತಹ ಮಧ್ಯಮ ವರ್ಗದ ಗ್ರಾಹಕರ ಮೇಲೆ ಅನವಶ್ಯಕವಾಗಿ ಸೇವಾಶುಲ್ಕ ಹೇರುತ್ತಿರುವುದು ನಾಚಿಕೆಗೇಡು.

ಈ ಪರಿಸ್ಥಿತಿ ನೋಡಿ ವೀರೇಂದ್ರ ಸೆಹ್ವಾಗ್ ಅವರು ಮಾಡಿದ ಟ್ವೀಟ್‌ ನೆನಪಾಗುತ್ತದೆ– ‘ವಿಜಯ್ ಮಲ್ಯ ಅವರೇ, ದಯವಿಟ್ಟು ಬೇಗ ದೇಶಕ್ಕೆ ಹಿಂತಿರುಗಿ ನಿಮ್ಮ ಸಾಲ ತೀರಿಸಿ. ಇಲ್ಲದಿದ್ದರೆ ಬ್ಯಾಂಕುಗಳು ಸೇವಾ ಶುಲ್ಕ ಹೆಚ್ಚಿಸುವ ಮೂಲಕ ನಮ್ಮಿಂದ ಆ ಹಣವನ್ನು ವಸೂಲು ಮಾಡುತ್ತವೆ’.

ಇದು ವ್ಯಂಗ್ಯ ಎನಿಸಿದರೂ ವಾಸ್ತವ. ಪ್ರಧಾನಿ ಈ ವಿಷಯದಲ್ಲಿ ಮಧ್ಯಪ್ರವೇಶಿಸಿ ಅನವಶ್ಯಕ ಹೊರೆ ನಿಲ್ಲಿಸಬೇಕು. ಎಲ್ಲರನ್ನೂ ಒಳಗೊಂಡಿರುವ ಬ್ಯಾಂಕಿಂಗ್ ವ್ಯವಸ್ಥೆಗೆ ಶಕ್ತಿ ತುಂಬಿ ದೇಶದ ಅರ್ಥವ್ಯವಸ್ಥೆಯನ್ನು ಬಲಪಡಿಸಬೇಕು.
-ಸಿ.ಜಿ.ವೆಂಕಟೇಶ್ವರ, ಗೌರಿಬಿದನೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT