ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲಿಗೆ ಆದ್ಯತೆ

Last Updated 16 ಮಾರ್ಚ್ 2017, 19:30 IST
ಅಕ್ಷರ ಗಾತ್ರ

2018ರ ಫೆಬ್ರುವರಿಯಲ್ಲಿ ಶ್ರವಣಬೆಳಗೊಳದಲ್ಲಿ ಜರುಗಲಿರುವ ಬಾಹುಬಲಿ ಮಹಾಮಸ್ತಕಾಭಿಷೇಕಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಸಲದ ಬಜೆಟ್‌ನಲ್ಲಿ ₹ 175 ಕೋಟಿ ಅನುದಾನ ಘೋಷಿಸಿದ್ದಾರೆ.

ಇಷ್ಟೇ ಅಲ್ಲದೆ ಮಹಾಮಸ್ತಕಾಭಿಷೇಕಕ್ಕೆ ಅನುದಾನ ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರವನ್ನು ಸಹ ಕೋರಲಾಗಿದೆ. ಈ ಹಣವನ್ನು ಶ್ರವಣಬೆಳಗೊಳ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮೂಲಸೌಕರ್ಯ ಕಲ್ಪಿಸಲು ಬಳಸುವ ಉದ್ದೇಶವಿದೆ.

ಈ ಮೂಲಸೌಕರ್ಯದಲ್ಲಿ ರೈಲ್ವೆಯ ಪಾತ್ರ ಬಹು ಮುಖ್ಯ. ಹಾಗಾಗಿ ಮೊದಲು ಶ್ರವಣಬೆಳಗೊಳದ ಮೂಲಕ ಹಾದು ಹೋಗುವ ಬೆಂಗಳೂರು- ಹಾಸನ- ಮಂಗಳೂರು ಹೊಸ ರೈಲು ಮಾರ್ಗ ತಕ್ಷಣ ಶುರುವಾಗಲಿ. ಈ ಮಾರ್ಗದ ನಿರ್ಮಾಣ ಕಾರ್ಯ ಈಗಾಗಲೇ ಮುಗಿದಿದೆ. ಆದರೆ ದೆಹಲಿಯಲ್ಲಿರುವ ರೈಲ್ವೆ ಸುರಕ್ಷಾ ವಿಭಾಗದ  ಅನುಮೋದನೆ ಸಿಕ್ಕಿಲ್ಲ ಎಂಬ ಕುಂಟುನೆಪ ಹೇಳಿ ಇದರ ಆರಂಭವನ್ನು ರೈಲ್ವೆ ಇಲಾಖೆ ತಡೆಹಿಡಿದಿದೆ.

ಕರ್ನಾಟಕದ ಮುಂದಿನ ಚುನಾವಣಾ ಪ್ರಚಾರದ ಭಾಗವಾಗಿ ಪ್ರಧಾನಿ ಅವರಿಂದ ಈ ಮಾರ್ಗವನ್ನು ಉದ್ಘಾಟಿಸಲು ಕೇಂದ್ರ ಸರ್ಕಾರ ಉದ್ದೇಶಿಸಿದೆ ಎಂಬ  ಸುದ್ದಿಯಿದೆ.

ರಾಜಕೀಯ ಕಾರಣಕ್ಕೆ ಈ ಹೊಸ ರೈಲು ಮಾರ್ಗವನ್ನು ತಡೆಹಿಡಿದು ಇಲಾಖೆಗೆ ನಷ್ಟ ಉಂಟು ಮಾಡುವ ಬದಲು, ಈ ಮಾರ್ಗವನ್ನು ತಕ್ಷಣ ಸಾರ್ವಜನಿಕರ ಬಳಕೆಗೆ ತೆರೆಯಬೇಕು. ಇದರಿಂದ ಸ್ಥಳೀಯರಿಗೆ ಬಹಳಷ್ಟು ಅನುಕೂಲ ಆಗುವುದಲ್ಲದೆ, ಕ್ರಮೇಣ ಈ ಮಾರ್ಗದಲ್ಲಿ ಮಂಗಳೂರು– ಕಾರವಾರ ರೈಲುಗಳನ್ನೂ ಓಡಿಸಿ, ಕರಾವಳಿಯವರಿಗೆ ಈಗಿನ ಸುತ್ತುಬಳಸು ಮಾರ್ಗದಿಂದ ಆಗುತ್ತಿರುವ ಸುಮಾರು ಮೂರು ಗಂಟೆ ಹೆಚ್ಚುವರಿ ಪ್ರಯಾಣವನ್ನು ಕಡಿತಗೊಳಿಸಬಹುದು.
-ಅಭಿಷೇಕ್ ಪಡಿವಾಳ್, ಸುಳ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT