ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರಿಗಳ ನಿರ್ಲಕ್ಷ್ಯದಿಂದ ಫಲಾನುಭವಿಗಳ ಬದುಕು ಬೀದಿಗೆ; ವಾರದೊಳಗೆ ಮನೆ ಖಾಲಿ ಮಾಡಲು ಆದೇಶ

Last Updated 17 ಮಾರ್ಚ್ 2017, 4:53 IST
ಅಕ್ಷರ ಗಾತ್ರ

ಹರಿಹರ: ತಾಲ್ಲೂಕಿನ ಮಳಲಹಳ್ಳಿ ಗ್ರಾಮದ 33ಕ್ಕೂ ಹೆಚ್ಚು ಆಶ್ರಯ ಮನೆಗಳು ಅಧಿಕಾರಿಗಳ ನಿರ್ಲಕ್ಷ್ಯದಿಂದ ನೆಲಸಮಗೊಳ್ಳುವ ಭೀತಿ ಎದುರಾಗಿದ್ದು, ಫಲಾನುಭವಿಗಳು ನಿರಾಶ್ರಿತರಾಗುವ ಹಿನ್ನೆಲೆಯಲ್ಲಿ ರೈತ ಸಂಘದ ಪದಾಧಿಕಾರಿ ಗಳು, ಗ್ರಾಮಸ್ಥರು ಹಾಗೂ ಫಲಾನುಭವಿ ಗಳು ನಗರದ ತಾಲ್ಲೂಕು ಪಂಚಾಯ್ತಿ ಎದುರು ಪ್ರತಿಭಟನೆ ನಡೆಸಿದರು.

ರೈತ ಸಂಘದ ಮುಖಂಡ ಬೇವಿನಹಳ್ಳಿ ಮಹೇಶ್ ಮಾತನಾಡಿ, ‘ವಸತಿರಹಿತರಿಗೆ ನಿವೇಶನ ವಿತರಿಸಲು ಸರ್ಕಾರ, ಮಳಲಹಳ್ಳಿ ಗ್ರಾಮದ ಸರ್ವೆ ನಂ. 1ರ ಒಂದು ಎಕರೆ ಖಾಸಗಿ ಜಮೀನನ್ನು 1993ರಲ್ಲಿ ವಶಪಡಿಸಿ ಕೊಂಡಿತ್ತು. ಆ ಜಮೀನಿನ ಮಾಲೀಕರಿಗೆ ಪರಿಹಾರ ದೊರೆಯದ ಕಾರಣ ಅವರು ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ನ್ಯಾಯಾಲಯದಲ್ಲಿ ಈ ಪ್ರಕರಣದ ಬಗ್ಗೆ ಗಮನಹರಿಸದೇ ನಿರ್ಲಕ್ಷ್ಯ ತೋರಿದ್ದಾರೆ. ಜಮೀನು ಮಾಲೀಕರಿಗೆ ಪರಿಹಾರ ನೀಡುವ ಮೂಲಕ ಪ್ರಕರಣವನ್ನು ಬಗೆಹರಿಸಬೇಕು ಎಂದು ಹಲವಾರು ಬಾರಿ ಗ್ರಾಮ ಮತ್ತು ತಾಲ್ಲೂಕು ಪಂಚಾಯ್ತಿ ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ. ಗ್ರಾ.ಪಂ. ಪಿಡಿಒ ಅವರ ಬೇಜವಾಬ್ದಾರಿತನ ಹಾಗೂ ವಕೀಲರ ನಿರ್ಲಕ್ಷ್ಯದಿಂದ ಮನೆಗಳನ್ನು ಕಳೆದುಕೊಳ್ಳುವ ಭೀತಿ ಎದುರಾಗಿದೆ’ ಎಂದು ಮಾಹಿತಿ ನೀಡಿದರು.ಗ್ರಾಮಸ್ಥ ಮಹಾದೇವಪ್ಪ ಮಾ

ನಾಡಿ, ‘34 ವರ್ಷಗಳ ಹಿಂದೆ ಎನ್.ಜಿ. ನಾಗನಗೌಡ ಮಂಡಲ ಪ್ರಧಾನರಾಗಿದ್ದ ಅವಧಿಯಲ್ಲಿ 20 ಮಂದಿ ವಸತಿರಹಿತರಿಗೆ ನಿವೇಶನದ ಹಕ್ಕುಪತ್ರ ವಿತರಣೆ ಮಾಡಿದ್ದರು. ಇದಾದ ಒಂದೇ ವರ್ಷದಲ್ಲಿ ಆಶ್ರಯ ಯೋಜನೆ ಅಡಿಯಲ್ಲಿ ಮನೆ, ರಸ್ತೆ ಹಾಗೂ ಚರಂಡಿ ನಿರ್ಮಾಣಗೊಂಡಿದ್ದವು. ನಿವೇಶನದ ಹಕ್ಕುಪತ್ರಗಳು ನಮ್ಮಲ್ಲಿವೆ. ಆದರೂ, ನ್ಯಾಯಾಲಯದ ಅಮೀನರು ವಾರದೊ ಳಗಾಗಿ ಜಾಗ ಖಾಲಿ ಮಾಡಬೇಕು. ತಪ್ಪಿದರೆ ನ್ಯಾಯಾಲಯದ ಆದೇಶದನ್ವಯ ತೆರವುಗೊಳಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ’ ಎಂದು ಅಲವತ್ತುಕೊಂಡರು.

ಫಲಾನುಭವಿ ಭಾಗ್ಯಮ್ಮ ಮಾತನಾಡಿ, ‘ಕಳೆದ 30 ವರ್ಷಗಳಿಂದ ಈ ಮನೆಗಳನ್ನು ಉಳಿಸಿಕೊಳ್ಳಲು ಕಚೇರಿ ಹಾಗೂ ಅಧಿಕಾರಿಗಳ ಬಳಿ ಅಲೆಯುತ್ತಿ ದ್ದೇವೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಮನೆ ಕಳೆದುಕೊಳ್ಳುವಂತಾಗಿದೆ ಮಕ್ಕಳು, ಜಾನವಾರುಗಳನ್ನು ಕಟ್ಟಿ ಕೊಂಡು ಎಲ್ಲಿಗೆ ಹೋಗಬೇಕು’ ಎಂದು ಅಳಲು ತೋಡಿಕೊಂಡರು.

ಗ್ರಾಮಸ್ಥ ಶಂಕರಪ್ಪ ಮಾತನಾಡಿ, ‘ಕಾಲೊನಿಯಲ್ಲಿರುವ ಮನೆಗಳಿಗೆ ಭಾಗ್ಯ ಜ್ಯೋತಿ ವಿದ್ಯುತ್ ಸೌಲಭ್ಯ ನೀಡಲಾಗಿದೆ. ಈ ಕಾಲೊನಿಗೆ ಸಂಬಂಧಿಸಿದ ಪ್ರಕರಣ ನ್ಯಾಯಾಲಯದಲ್ಲಿರುವ ನೆಪಒಡ್ಡಿ, ಕಾಲೊನಿಯ ಮೂಲ ಸೌಕರ್ಯಗಳಾದ ರಸ್ತೆ, ಚರಂಡಿ, ಬೀದಿದೀಪಗಳ ನಿರ್ಮಾ ಣಕ್ಕೆ ಪಿಡಿಒ ನಿರ್ಲಕ್ಷ್ಯ ಮಾಡಿದ್ದಾರೆ. ಇಲ್ಲಿನ ನಿವಾಸಿಗಳನ್ನು ಒಕ್ಕಲೆಬ್ಬಿಸುವ ಕಾರ್ಯದಲ್ಲೂ ಅಧಿಕಾರಿಗಳು ಶಾಮೀ ಲಾಗಿದ್ದಾರೆ ಎಂದು ಆರೋಪಿಸಿದರು.

‘ಕೂಡಲೇ ಅಧಿಕಾರಿಗಳು, ನ್ಯಾಯಾಲಯದ ಆದೇಶಕ್ಕೆ ತಡೆಯಾಜ್ಞೆ ತಂದು ಸ್ಥಳೀಯರ ಹಿತರಕ್ಷಣೆ ಮಾಡಬೇಕು’ ಎಂದು ಆಗ್ರಹಿಸಿದರು.

ಬಸಪ್ಪ, ಕರಿಬಸಪ್ಪ, ಸಿದ್ದಪ್ಪ, ಕೃಷ್ಣಪ್ಪ, ಹನುಮಂತಪ್ಪ, ತಿಪ್ಪಣ್ಣ, ನಾಗಣ್ಣ, ಬಸವರಾಜಪ್ಪ, ಲಿಂಗರಾಜ, ಗಿರಿಜಮ್ಮ, ಹೊನ್ನಮ್ಮ, ಮಲ್ಲಪ್ಪಜ್ಜ, ಪ್ರಮೀಳಮ್ಮ, ಪದ್ಮಮ್ಮ, ಹನುಮಕ್ಕ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT