ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕಾಲಿಕ ಮಳೆಗೆ ಅಪಾರ ಹಾನಿ

Last Updated 17 ಮಾರ್ಚ್ 2017, 5:12 IST
ಅಕ್ಷರ ಗಾತ್ರ

ತಾವರಗೇರಾ: ಬುಧವಾರ ರಾತ್ರಿ ಬೀಸಿದ ಬಿರುಗಾಳಿ, ಮಳೆಗೆ ತಾವ ರಗೇರಾ ರೈತ ಅಮರೇಶ ಗಲಗಲಿ ಅವರ 12 ಎಕರೆ ವಿಸ್ತೀರ್ಣದ ಮಾವಿನ ತೋಟದಲ್ಲಿ ಸಾವಿರಾರು ಮಾವಿನಗಿಡ ಮತ್ತು ಕಾಯಿಗಳು ನೆಲಕಚ್ಚಿದ್ದು  ಅಪಾರ ನಷ್ಟವಾಗಿದೆ. ರೈತ ಬಾಳಪ್ಪ ಎಂಬುವರಿಗೆ ಸೇರಿದ ಟಗರು ಸಾವನ್ನಪ್ಪಿದೆ. ಬಣವೆಗೂ ಹಾನಿಯಾಗಿದೆ.

ಹೋಬಳಿ ವ್ಯಾಪ್ತಿಯ ಹಲವು ಗ್ರಾಮಗಳ ಮನೆಗಳಿಗೆ ಹಾಕಿದ ಶೆಡ್. ಬಣವೆ, ಹೊಟ್ಟಿನ ಬಣಿವೆಗಳು ಗಾಳಿ ಯಲ್ಲಿ ತೂರಿಕೊಂಡು  ಅಪಾರ ಪ್ರಮಾಣದ ಹಾನಿಯಾಗಿದೆ.

ಮ್ಯಾದರಡೊಕ್ಕಿ, ಅಮರಾಪೂರ, ಅಮರಾಪೂರ ತಾಂಡ, ಕಳಮಳ್ಳಿ, ಕಳಮಳ್ಳಿ ತಾಂಡ, ಕಿಲಾರಹಟ್ಟಿ, ಕಿಲಾರ ಹಟ್ಟಿ ತಾಂಡ, ಜೂಲಕುಂಟ್ಟಿ, ಗರ್ಜ ನಾಳ, ತಾವರಗೇರಾ ಪಟ್ಟಣ ಸೇರಿದಂತೆ ಇನ್ನೂಳಿದ ಗ್ರಾಮಗಳಲ್ಲಿ ಮನೆಯ ಮೇಲೆ ಹಾಕಿದ ತಗಡಿನ ಶೇಡ್, ಜಮೀನಿಲ್ಲಿ ಇದ್ದ  ಮೇವಿನ ಬಣೆವೆಗಳು ಬೀರುಗಾಳಿಗೆ ತೂರಿಕೊಂಡು ಅನತಿ ದೂರದಲ್ಲಿ ಬಿದ್ದು ಚೆಲ್ಲಾಪಿಲ್ಲಿಯಾಗಿವೆ.

:ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಬುಧವಾರ ರಾತ್ರಿ ಬಿರುಗಾಳಿ ಸಹಿತ ಮಳೆಯಾಗಿದ್ದು ತಾವರಗೇರಾ ಹೋಬಳಿ ವ್ಯಾಪ್ತಿಯ ಬಹುತೇಕ ಮನೆಗಳಿಗೆ ಹಾನಿ ಯಾಗಿದೆ. ಛಾವಣಿ ಕುಸಿದು ಒಂದು ಟಗರು ಸಾವನ್ನಪ್ಪಿದ್ದು ಕೆಲ ಜಾನು ವಾರುಗಳಿಗೆ ಗಾಯಗಳಾಗಿವೆ, ಇಬ್ಬರಿಗೆ ಸಣ್ಣಪುಟ್ಟ ಗಾಯ ಗಳಾಗಿವೆ.

ಸುಮಾರು ಅರ್ಧಗಂಟೆ ಗಾಳಿ ಯೊಂದಿಗೆ ಮಳೆ ಬಂದಿದೆ, ಕಿಲಾರಟ್ಟಿ ಮಳೆಮಾಪನ ಕೇಂದ್ರದಲ್ಲಿ 22.8 ಮಿಮೀ ಮಳೆ ದಾಖಲಾಗಿದೆ. ಬೆಂಚ ಮಟ್ಟಿ, ಗರ್ಜನಾಳ, ಮ್ಯಾಗಳ ಡೊಕ್ಕಿ ತಾಂಡಾ, ಮುದ್ದಲಗುಂದಿ, ಕಿಲಾರಟ್ಟಿ ಗ್ರಾಮಗಳ ಶೆಡ್‌ಗಳಿಗೆ ಅಳವಡಿಸಿದ್ದ ತಗಡುಗಳು ಬಿರುಗಾಳಿಗೆ ಹಾರಿ ಹೋಗಿವೆ. ವಸತಿ ಯೋಜನೆಯಡಿ ನಿರ್ಮಿಸಿದ ಮನೆಗಳಿಗೆ ಧಕ್ಕೆಯಾಗಿದೆ ಎಂದು ಕಂದಾಯ ಇಲಾಖೆ ತಿಳಿಸಿವೆ.

ತಹಶೀಲ್ದಾರ್ ಎಂ.ಗಂಗಪ್ಪ ಗ್ರಾಮ ಗಳಿಗೆ ಭೇಟಿ ನೀಡಿ ಪರಿಶೀಲಿ ಸಿದರು. ಶೆಡ್‌ಗಳಿಗೆ ಹಾನಿಯಾಗಿದ್ದು  ವಾರ ದೊಳಗೆ ಹಾನಿ ಅಂದಾಜು ನಡೆಸಲಾ ಗುವುದು ಎಂದರು. 

ದೋಟಿಹಾಳದಲ್ಲಿ 9.2 ಮಿಮೀ, ಹನುಮ ಸಾಗರದಲ್ಲಿ 8.6 ಮಿ.ಮೀ., ಕುಷ್ಟಗಿ ಮತ್ತು ತಾವರಗೇರಾ ಮಳೆ ಮಾಪನ ಕೇಂದ್ರಗಳಲ್ಲಿ ತಲಾ 6.2 ಮಿ.ಮೀ. ಮತ್ತು ಹನುಮನಾಳದಲ್ಲಿ 5.4 ಮಿ.ಮೀ. ಮಳೆಯಾಗಿದೆ.

**

ನವಲಿ: ಸಿಡಿಲಿಗೆ ಹೋರಿ  ಸಾವು
ಕನಕಗಿರಿ:
ನವಲಿ ಗ್ರಾಮದ ಬಸವರಾಜ ದುರಗಪ್ಪ ಅವರ ಹೋರಿ ಸಿಡಿಲಿಗೆ ಮೃತಪಟ್ಟ ಘಟನೆ ಬುಧವಾರ ರಾತ್ರಿ ನಡೆದಿದೆ. ಪಶು ಸಂಗೋಪನೆ ಇಲಾಖೆಯ ಉದಯಕುಮಾರ, ಮಹೇಶ್ವಪ್ಪ ಗುರುವಾರ ಸ್ಥಳಕ್ಕೆ ಭೇಟಿ ನೀಡಿದರು. ಗ್ರಾಮ ಪಂಚಾಯಿತಿ ಸದಸ್ಯ ಮಲ್ಲಿಕಾ ರ್ಜುನ ಬಳಗಾನೂರು, ಮಾಜಿ ಅಧ್ಯಕ್ಷ ಪ್ಯಾಟೆಪ್ಪನಾಯಕ ಇದ್ದರು.

**

ಗಂಗಾವತಿ: ಧಾರಾಕಾರ ಮಳೆ

ಗಂಗಾವತಿ: ತಾಲ್ಲೂಕಿನಾದ್ಯಂತ ಬುಧವಾರ ರಾತ್ರಿ ಉತ್ತಮ ಮಳೆಯಾಗಿದ್ದು, ಕಾದ ಕಾವಲಿ ಯಂತಾಗಿದ್ದ ಇಳೆ ತಂಪಾಗಿದೆ. ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಧಾರಾಕಾರ ಮಳೆ ಸುರಿದಿದೆ. ತಾಪಮಾನದ ಬೇಗೆಯಲ್ಲಿ ಬೇಯುತ್ತಿದ್ದ ಜನರಿಗೆ ನೆಮ್ಮದಿ ಸಿಕ್ಕಿದೆ.

ನಗರದಲ್ಲಿ ರಾತ್ರಿ ಮುಕ್ಕಾಲು ಗಂಟೆಗೂ ಹೆಚ್ಚು ಕಾಲ ಮಳೆ ಸುರಿದರೆ, ಮರಳಿ, ಸಿದ್ದಾಪುರ, ಶ್ರೀರಾಮನಗರ, ಹಣವಾಳ, ಸಿಂಗನಾಳ, ಗುಂಡೂರು, ಕೋಟಯ್ಯಕ್ಯಾಂಪ್‌ಗಳಲ್ಲಿ ವರ್ಷಧಾರೆ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಸುರಿದಿದೆ.

ಶ್ರೀರಾಮನಗರದ ಮುಖ್ಯರಸ್ತೆಗಳಲ್ಲಿ ಮಳೆ ನೀರು ಸಂಗ್ರಹಗೊಂಡು ವಾಹನ ಸಂಚಾರಕ್ಕೆ ತೊಂದರೆಯಾಗಿತ್ತು. ಒಂದು ಗಂಟೆಯ ಬಳಿಕ ನೀರಿನ ಪ್ರಮಾಣ ಕಡಿಮೆಯಾದ ಬಳಿಕ ವಾಹನ ಸಂಚಾರ ಸಹಜ ಸ್ಥಿತಿಗೆ ಮರಳಿತು. ಮಳೆಯಾಶ್ರಿತ ಕನಕಗಿರಿ, ನವಲಿ, ಹುಲಿಹೈದರ, ವೆಂಕಟಗಿರಿ ಮುಂತಾದ ಕಡೆ ಉತ್ತಮ ಮಳೆಯಾಗಿದೆ. ಈ ಮಳೆಯಿಂದಾಗಿ ಮುಂಗಾರು ಹಂಗಾಮು ಬಿತ್ತನೆಗೆ ಅನುಕೂಲ ಆಗುತ್ತದೆ ದಾಸನಾಳದ ರೈತ ಕನಕಪ್ಪ ಚಲುವಾದಿ ಹೇಳಿದರು.

ಯಾವುದೇ ಹಾನಿಯಾದ ಬಗ್ಗೆ ವರದಿಯಾಗಿಲ್ಲ. ಕಾರಟಗಿ 3.2 ಎಂ.ಎಂ. ವಡ್ಡರಹಟ್ಟಿ 2.0 ಎಂ.ಎಂ. ಹಾಗೂ ಗಂಗಾವತಿಯ ಮಳೆ ಮಾಪನ ಕೇಂದ್ರದಲ್ಲಿ ಅತ್ಯಧಿಕ 16.5 ಎಂ.ಎಂ ಮಳೆ ಯಾಗಿದೆ ಎಂದು ಕಂದಾಯ ಇಲಾಖೆಯ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT