ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇಡಂನ 6479 ಮಕ್ಕಳ ಮೌಲ್ಯಮಾಪನ ಶುರು

Last Updated 17 ಮಾರ್ಚ್ 2017, 8:53 IST
ಅಕ್ಷರ ಗಾತ್ರ

ಚಿಂಚೋಳಿ: ಪಟ್ಟಣದ ಹಾರಕೂಡ ಚನ್ನಬಸವೇಶ್ವರ ಪಿಯು ಕಾಲೇಜು ಹಾಗೂ ಸಿ.ಬಿ.ಪಾಟೀಲ ಪದವಿ ಮಹಾವಿ ದ್ಯಾಲಯದಲ್ಲಿ ಸೇಡಂ ತಾಲ್ಲೂಕಿನ ಸರ್ ಕಾರಿ ಮತ್ತು ಅನುದಾನಿತ ಶಾಲೆಗಳ 4ನೇ ತರಗತಿ ಮತ್ತು 6ನೇ ತರಗತಿಯ ಒಟ್ಟು 6479 ಮೌಲ್ಯಮಾಪನ ಶುರುವಾಗಿದೆ.

ಕನ್ನಡ, ಉರ್ದು ಹಾಗೂ ತೆಲುಗು ಮಾಧ್ಯಮದ ಮೌಲ್ಯಮಾಪನಕ್ಕೆ 300 ಶಿಕ್ಷಕರನ್ನು ನಿಯೋಜಿಸಲಾಗಿದೆ. 4ನೇ ತರಗತಿಯ 3,234 ಹಾಗೂ 6ನೇ ತರಗತಿಯ 3,233 ಮಕ್ಕಳ ಮೌಲ್ಯಮಾ ಪನ ಬುಧವಾರದಿಂದ ಪ್ರಾರಂಭವಾ ಗಿದ್ದು, ಎರಡೂ ಕೇಂದ್ರಗಳಲ್ಲಿ ಮಾ. 18ರವರೆಗೆ ನಡೆಯಲಿದೆ.

ಇದಕ್ಕಾಗಿ 10 ಮಂದಿ ಮೇಲ್ವಿಚಾರ ಕರು ಹಾಗೂ 10 ಮಂದಿ ಅಧೀಕ್ಷಕರನ್ನು ನಿಯೋಜಿಸಲಾಗಿದ್ದು, ಇಡಿ ಮೌಲ್ಯಮಾ ಪನ ಕಾರ್ಯವನ್ನು ಉಸ್ತುವಾರಿ ಅಧಿಕಾರಿ ರಾವಸಾಬ್‌ ಮೇಲ್ವಿಚಾರಣೆ ನಡೆಸುತ್ತಿದ್ದಾರೆ.

ಬಿಇಒ ಭೇಟಿ: ಇಲ್ಲಿನ ಹಾರಕೂಡ ಚನ್ನಬಸವೇಶ್ವರ ಪಿಯು ಕಾಲೇಜು ಮತ್ತು ಸಿ.ಬಿ.ಪಾಟೀಲ ಕಾಲೇಜಿನ ಮೌಲ್ಯಮಾ ಪನ ಕೇಂದ್ರಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಜನಾರ್ದನರೆಡ್ಡಿ ಮಾಲಿ ಪಾಟೀಲ ಮತ್ತು ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾ ಧಿಕಾರಿ ರಾಚಪ್ಪ ಭದ್ರಶೆಟ್ಟಿ ಗುರುವಾರ ಭೇಟಿ ನೀಡಿ ಮೌಲ್ಯಮಾಪನ ಪರಿಶೀಲಿಸಿದರು.

7,760 ಮಕ್ಕಳು: ಚಿಂಚೋಳಿ ತಾಲ್ಲೂಕಿ ನಲ್ಲಿ 4ನೇ ಹಾಗೂ 6ನೇ ತರಗತಿಯ 7,760 ಮಕ್ಕಳು ಪರೀಕ್ಷೆ ಬರೆದಿದ್ದಾರೆ. 4ನೇ ತರಗತಿಯ ಕನ್ನಡ –3,864, ತೆಲುಗು –75 ಮತ್ತು ಉರ್ದು–258 ಮತ್ತು 6ನೇ ತರಗತಿಯ ಕನ್ನಡ –3,176, ಇಂಗ್ಲೀಷ್‌ –74, ಉರ್ದು –245, ತೆಲುಗು –68 ಮಕ್ಕಳು ಪರೀಕ್ಷೆ ಬರೆದಿದ್ದಾರೆ. ಚಿಂಚೋಳಿಯ ಮೌಲ್ಯ ಮಾಪನ ಚಿತ್ತಾಪುರದಲ್ಲಿ ನಡೆಯುತ್ತಿದೆ.

ಮಾ.6 ರಿಂದ 11ವರೆಗೆ ಮಕ್ಕಳ ಕಲಿಕಾ ಸಾಧನ ಮೌಲ್ಯಮಾಪನ ಪರೀಕ್ಷೆ ನಡೆದಿದೆ. ಎಸ್ಸೆಸ್ಸೆಲ್ಸಿ ಮಾದರಿಯಲ್ಲಿ  ಬೇರೆ ಕಡೆಗೆ ಕಳುಹಿಸಿ ಮೌಲ್ಯಮಾಪನ ನಡೆಸಿ ಕಲಿಕೆ ಪತ್ತೆ ಹಚ್ಚಿ ಮಗುವಿಗೆ ಗುಣಮಟ್ಟದ ಶಿಕ್ಷಣ ನೀಡಲು (ಕೆಎಸ್‌ಕ್ಯೂಎಎಸಿ) ಕರ್ನಾಟಕ ಶಾಲಾ ಗುಣಮಟ್ಟ ಮೌಲ್ಯಾಂಕನ ಪರಿಷತ್ತು ರಾಜ್ಯ ಮಟ್ಟದಲ್ಲಿ ಪರೀಕ್ಷೆ ನಡೆಸಿದೆ.

ಹಿಂದುಳಿದ ಮಕ್ಕಳನ್ನು ಗುರುತಿಸಿ ಸೂಕ್ತ ಕಲಿಕಾ ಸಾಮರ್ಥ್ಯ ಬೆಳೆಸಲು ಪರಿಹಾರ ಬೋಧನೆ ಕಾರ್ಯಕ್ರಮ ಹಮ್ಮಿಕೊಳ್ಳುವುದಕ್ಕೂ ಈ ಪರೀಕ್ಷೆ ಸಹಕಾರಿಯಾಗಲಿದೆ ಎಂದು ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾ ಧಿಕಾರಿ ರಾಚಪ್ಪ ಭದ್ರಶೆಟ್ಟಿ ತಿಳಿಸಿದರು.

ಸದರಿ ಪರೀಕ್ಷೆಯು ಪ್ರತಿ ಪ್ರಶ್ನೆ ಪತ್ರಿಕೆ 50 ಅಂಕಗಳನ್ನು ಹೊಂದಿದ್ದು, ಇದನ್ನು ಶೇ 30ಕ್ಕೆ ಪರಿವರ್ತಿಸಿ ಮಗುವಿನ ಸಾಧನೆಯನ್ನು ಸಂಕಲನಾತ್ಮಕ ಪರೀಕ್ಷೆ(ಎಸ್‌.ಎ–2) ಜತೆಗೆ ಜೋಡಣೆ ಮಾಡಿ ಫಲಿತಾಂಶ ಪ್ರಕಟಿಸಲಾಗುತ್ತಿದೆ. ಪ್ರಸಕ್ತ ವರ್ಷ 4ನೇ ಮತ್ತು 6ನೇ ತರಗತಿ ಮಕ್ಕಳಿಗೆ ಕಲಿಕಾ ಸಾಧನ ಮೌಲ್ಯಮಾಪನ ಪರೀಕ್ಷೆ ನಡೆಸಿದ್ದರಿಂದ ಅವರನ್ನು ಎಸ್‌ಎ –2 ಪರೀಕ್ಷೆ ನಡೆಸಿಲ್ಲ ಎಂದು ಬಿಇಒ ಜನಾರ್ದನರೆಡ್ಡಿ ಮಾಲಿ ಪಾಟೀಲ ತಿಳಿಸಿದರು.

ನೋಡಲ್‌ ಅಧಿಕಾರಿ ರಾವಸಾಬ್‌, ಮಕ್ಸೂದ್‌ ಅಲಿ, ಮುರುಳಿಧರ, ರವಿಕಾಂತ ಕಾರಪೆಂಟರ್‌, ರೇವಣಸಿದ್ದಯ್ಯ ನರನಾಳ್‌ ಇದ್ದರು.

**

ಮಕ್ಕಳ ಕಲಿಕೆಯ ಮಟ್ಟವನ್ನು ಅರಿಯುವುದರ ಜತೆಗೆ ಕಲಿಕೆ ಯಲ್ಲಿ ಹಿಂದುಳಿದವರನ್ನು ಪತ್ತೆ ಹಚ್ಚಿ ಗುಣಮಟ್ಟದ ಶಿಕ್ಷಣ  ದೊರೆಯುವಂತೆ ಮಾಡಲು ಕಲಿಕಾ ಸಾಧನ ಸಹಕಾರಿ

-ರಾಚಪ್ಪ ಭದ್ರಶೆಟ್ಟಿ,
ಸಮನ್ವಯಾಧಿಕಾರಿ, ಚಿಂಚೋಳಿ

ಮಗುವಿಗೆ ಶಾಲಾ ಮಟ್ಟದಲ್ಲಿ ಪರೀಕ್ಷೆ ನಡೆಸಿ  ನೆರೆಯ ತಾಲ್ಲೂಕುಗಳಿಗೆ ಕಳುಹಿಸಿ ಮೌಲ್ಯಮಾಪನ ಮಾಡಿಸಲಾಗುತ್ತದೆ
-ಜನಾರ್ದನರೆಡ್ಡಿ ಮಾಲಿ ಪಾಟೀಲ,
ಬಿಇಒ ಚಿಂಚೋಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT