ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೀಟಗಳ ಕಬಳಿಸುವ ಮಾಂಸಾಹಾರಿ ಸಸ್ಯ

Last Updated 17 ಮಾರ್ಚ್ 2017, 19:30 IST
ಅಕ್ಷರ ಗಾತ್ರ
ಹೂಜಿ ಆಕಾರದ ಅತ್ಯಾಕರ್ಷಕ ಬಣ್ಣಗಳ ಎಲೆಗಳಿಂದ ಕೂಡಿರುವ ಈ ಸಸ್ಯಗಳನ್ನು ನೋಡಿದರೆ ವಾಹ್ ಎನ್ನುವ ಉದ್ಗಾರ ತಾನೇ ತಾನಾಗಿ ಬರುವಂತಿದೆ. ಈ ಎಲೆಗಳ ಮೇಲೆ ಕೂರುವ ಕ್ರಿಮಿಕೀಟಗಳನ್ನು ಇವು ಕ್ಷಣಾರ್ಧದಲ್ಲಿ ನುಂಗಿ ಜೀರ್ಣಿಸಿಕೊಂಡುಬಿಡುತ್ತವೆ ಎಂದು ತಿಳಿದರೆ  ಆಶ್ಚರ್ಯವಾಗುತ್ತದೆ. 
 
ಆಸ್ಟ್ರೇಲಿಯಾದ ನೈರುತ್ಯ ಭಾಗದಲ್ಲಿರುವ ಸಿಲ್ವರ್ ಕೋಸ್ಟ್‌ ಲೈನ್‌ನಲ್ಲಿ ಕಂಡುಬರುವ ಈ ಮಾಂಸಾಹಾರಿ ಸಸ್ಯಗಳ ಹೆಸರು, ಆಕಾರಕ್ಕೆ ತಕ್ಕಂತೆ ‘ಆಸ್ಟ್ರೇಲಿಯನ್ ಫಿಚರ್ (ಹೂಜಿ) ಸಸ್ಯ’.  
 
ಹೂಜಿ ಮಾದರಿಯಲ್ಲಿರುವ ಎಲೆಗಳು ಸಹಜವಾಗಿಯೇ ತನ್ನ ಶಿಕಾರಿಗಳನ್ನು ಒಳಗೆ ಎಳೆದುಕೊಳ್ಳಲು ಅನುಕೂಲವಾಗುವಂತೆ ಇರುತ್ತವೆ. ನ್ಯೂಯಾರ್ಕ್‌ನ ಬಫಲೊ ವಿಶ್ವವಿದ್ಯಾಲಯದ ವಿಜ್ಞಾನಿಗಳು ನಡೆಸಿದ ಅಧ್ಯಯನದಲ್ಲಿ ಈ ಮಾಂಸಾಹಾರಿ ಸಸ್ಯಗಳ ಮಾಹಿತಿ ತಿಳಿದುಬಂದಿದೆ. 
 
ಪೋಷಕಾಂಶಕ್ಕಾಗಿ ಶಿಕಾರಿ
ಪೋಷಕಾಂಶಗಳು ಕಡಿಮೆ ಇರುವ ಮಣ್ಣಿನಲ್ಲಿ ಬೆಳೆಯುವ ಈ ಸಸ್ಯಗಳು,  ಕೊರತೆ ನೀಗಿಕೊಳ್ಳಲು ಪರ್ಯಾಯ ಮಾರ್ಗ ಕಂಡುಕೊಂಡಿದೆ. ಕ್ರಿಮಿಕೀಟಗಳನ್ನು ಶಿಕಾರಿ ಮಾಡುವ  ಸಸ್ಯಗಳು, ಈ ಮೂಲಕ ತಮ್ಮಲ್ಲಿ ಕೊರತೆಯಾಗಿರುವ ಸಾರಜನಕ ಹಾಗೂ ರಂಜಕದ ಅಂಶಗಳನ್ನು ಸಂಗ್ರಹಿಸುತ್ತವೆ. 
 
ಸಂಚುಕೋರ ಸಸ್ಯ
ಈ ಸಸ್ಯಗಳಲ್ಲಿ ಎರಡು ರೀತಿಯ ಎಲೆಗಳಿವೆ. ಹೂಜಿ ಆಕಾರದ ಎಲೆಗಳು ಕ್ರಿಮಿಕೀಟಗಳನ್ನು ನುಂಗುತ್ತವೆ. ಇಂತಹ ಕ್ರಿಮಿಕೀಟಗಳನ್ನು ತನ್ನತ್ತ ಸೆಳೆಯಲು ಸಿಹಿಯಾದ ದ್ರವ ಉತ್ಪತ್ತಿ ಮಾಡುವ ಪ್ರತ್ಯೇಕ ಎಲೆಗಳನ್ನೂ ಹೊಂದಿವೆ. 
 
ಸಿಹಿಯಾದ ದ್ರವದ ಜತೆಗೆ ಮೇಣದ ರೀತಿಯ ಅಂಶವನ್ನೂ ಉತ್ಪತ್ತಿ ಮಾಡುವ  ಜೀವಕೋಶಗಳೂ ಈ ಎಲೆಗಳಲ್ಲಿ ಇರುತ್ತವೆ. ಮೇಣದ ರೀತಿಯ ದ್ರವದಿಂದಾಗಿ ಕ್ರಿಮಿಕೀಟಗಳು ಹೂಜಿ ಆಕಾರದ ಎಲೆಗಳಿಂದ ತಪ್ಪಿಸಿಕೊಳ್ಳುವುದು ಅಸಾಧ್ಯವಾಗುತ್ತದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT