ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೇಲಿ ಮಾಡುವುದೇಕೆ?

Last Updated 17 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ದೇವರಿಗೆ ಪೂಜೆ ಸಲ್ಲಿಸುವ ಪದ್ಧತಿಯನ್ನು ಕೆಲವು ವ್ಯಕ್ತಿಗಳು ಗೇಲಿ ಮಾಡಿರುವ ಭಾಷಣಗಳ ವಿಡಿಯೊ ತುಣುಕುಗಳು ವಾಟ್ಸ್‌ಆ್ಯಪ್‌ ಮತ್ತು ಫೇಸ್‌ಬುಕ್‌ನಲ್ಲಿ ಇತ್ತೀಚೆಗೆ ಹರಿದಾಡುತ್ತಿವೆ.

‘ಗುರುಗಳು ಲಕ್ಷ್ಮಿ ಪೂಜೆ ಮಾಡಬೇಕೆನ್ನುತ್ತಾರೆ. ಆದರೆ ಜಪಾನ್‌ನವರು, ಅಮೆರಿಕದವರು ಲಕ್ಷ್ಮಿ ಪೂಜೆ ಮಾಡುತ್ತಾರೆಯೇ? ಅವರ ಬಳಿ ದುಡ್ಡಿಲ್ಲವೇ’ ಎಂಬಂಥ ಪ್ರಶ್ನೆಗಳು ಅದರಲ್ಲಿರುತ್ತವೆ. ದೇವರು ಯಾವ ರೂಪದಲ್ಲಿದ್ದಾನೋ ಯಾರಿಗೂ ಗೊತ್ತಿಲ್ಲ. ಸತ್ತ ಮೇಲೆ ಏನಾಗುತ್ತೇವೆಯೋ ಅದೂ ನಮಗೆ ತಿಳಿದಿಲ್ಲ.

ನಮಗೆ ಜನ್ಮ ನೀಡಿದ ತಂದೆ– ತಾಯಿ, ಪಾಠ ಕಲಿಸಿದ ಗುರುಹಿರಿಯರನ್ನು ಪೂಜಿಸುವುದು ರೂಢಿ. ಅಂತೆಯೇ ವಿದ್ಯೆಯನ್ನು ಸರಸ್ವತಿ, ಧನಕನಕವನ್ನು ಲಕ್ಷ್ಮಿ, ನೀರನ್ನು ಗಂಗೆ, ಈ ನೆಲವನ್ನು ಭೂಮಾತೆ ಎಂದು ಪೂಜಿಸುವ ಪದ್ಧತಿ ನಮ್ಮಲ್ಲಿದೆ.

ಹೀಗೇ ಪೂಜೆ ಮಾಡಿ ಎಂದು ಇಲ್ಲಿ ಯಾರೂ  ಒತ್ತಾಯಿಸುವುದಿಲ್ಲ. ಅದು ಹಿಂದಿನಿಂದ ಬೆಳೆದುಬಂದಿರುವ ನಮ್ಮ ಸಂಸ್ಕೃತಿ. ವಿದೇಶಗಳಲ್ಲಿ ಹೀಗೆ ಕೃತಜ್ಞತೆ ಸಲ್ಲಿಸುವ ವಿಧಾನ ಬೇರೆಯದೇ ರೀತಿಯಲ್ಲಿ ಇರಬಹುದು. ನಾವು ಅವರನ್ನೇ ಅನುಸರಿಸಬೇಕೆಂದು ಬಯಸುವುದು ಎಷ್ಟು ಸರಿ?
–ಕೆ.ಎಲ್‌.ಪ್ರಕಾಶ, ಕಡೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT