ವಿದೇಶಿ ದೇಣಿಗೆ ಪ್ರಮಾಣವನ್ನು ಶೇ 28ರಷ್ಟು ಕಡಿತಗೊಳಿಸುವುದಾಗಿ ಟ್ರಂಪ್ ಅವರು ಬಜೆಟ್‌ನಲ್ಲಿ ಮಾಡಿರುವ ಪ್ರಸ್ತಾವವನ್ನು ಡೆಮಾಕ್ರಟಿಕ್ ಸಂಸದರು ಹಾಗೂ ರಾಜಕೀಯ ತಜ್ಞರು ಟೀಕಿಸಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ನಿರ್ವಹಣೆ ಹಾಗೂ ಬಜೆಟ್ ಕಚೇರಿ ಕಾರ್ಯಕಾರಿ ನಿರ್ದೇಶಕ ಮೈಕ್ ಮಲ್ವನ್ ಅವರು, ಇದು ನಮ್ಮ ಮಿತ್ರದೇಶಗಳು, ವಿರೋಧಿಗಳು ಮತ್ತು ಇತರೆ ದೇಶಗಳಿಗೆ ಅಮೆರಿಕ ನೀಡುತ್ತಿರುವ ಕಠಿಣ ಸಂದೇಶ ಎಂದು ಸಮರ್ಥಿಸಿಕೊಂಡಿದ್ದಾರೆ.