ನಾಗರಿಕ ಸೇವೆಗಳ ಒಳನೋಟ

‘ಐಎಎಸ್‌ ಅಧಿಕಾರಿಗಳು ಸಮಾಜದ ಋಣ ತೀರಿಸಲಿ’

‘ಐಎಎಸ್‌ ಅಧಿಕಾರಿಗಳು ಇತರರಿಗಿಂತ ಹೆಚ್ಚಾಗಿ ಸಮಾಜದ ಋಣವನ್ನು ತೀರಿಸಬೇಕು’ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಸುಭಾಷ್‌ ಚಂದ್ರ ಖುಂಟಿಅ ಹೇಳಿದರು.

ಕೃತಿಯನ್ನು ಸುಭಾಷ್‌ ಚಂದ್ರ ಖುಂಟಿಅ (ಎಡದಿಂದ ಮೂರನೆಯವರು) ಬಿಡುಗಡೆ ಮಾಡಿದರು. ಪಿಎಸಿ ನಿರ್ದೇಶಕ ಗುರುಚರಣ್‌ ಗೊಲ್ಲರಕೇರಿ, ಎಂ.ಎನ್‌.ವೆಂಕಟಾಚಲಯ್ಯ ಹಾಗೂ ಸಿ.ಕೆ.ಮ್ಯಾಥ್ಯೂ ಇದ್ದಾರೆ. –ಪ್ರಜಾವಾಣಿ ಚಿತ್ರ

ಬೆಂಗಳೂರು: ‘ಐಎಎಸ್‌ ಅಧಿಕಾರಿಗಳು ಇತರರಿಗಿಂತ ಹೆಚ್ಚಾಗಿ ಸಮಾಜದ ಋಣವನ್ನು ತೀರಿಸಬೇಕು’ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಸುಭಾಷ್‌ ಚಂದ್ರ ಖುಂಟಿಅ ಹೇಳಿದರು.

ಪಬ್ಲಿಕ್‌ ಅಫೇರ್‍ಸ್‌ ಸೆಂಟರ್‌ (ಪಿಎಸಿ) ವತಿಯಿಂದ ನಗರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಪಿಎಸಿಯ ಸಾರ್ವಜನಿಕ ನೀತಿ ಸಂಶೋಧನಾ ತಂಡದ ಮುಖ್ಯಸ್ಥ ಡಾ.ಸಿ.ಕೆ.ಮ್ಯಾಥ್ಯೂ ಅವರ ಸಂಪಾದಕತ್ವದ ‘ಇನ್‌ ದಿ ರೇರ್‌ ವಿವ್ ಮಿರರ್‌: ರಿಫ್ಲೆಕ್ಷನ್ ಆಫ್ ಚೀಫ್ ಸೆಕ್ರೆಟರೀಸ್’ ಕೃತಿಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

‘1972–79ರ ನಡುವಿನ ಬ್ಯಾಚ್‌ಗಳ ಐಎಎಸ್‌ ಅಧಿಕಾರಿಗಳು ತಮ್ಮ ಅನುಭವಗಳನ್ನು ಈ ಪುಸ್ತಕದಲ್ಲಿ ದಾಖಲಿಸಿದ್ದಾರೆ. ಈ ಕೃತಿ ನಾಗರಿಕ ಸೇವೆಗಳ ಒಳನೋಟಗಳನ್ನು ತೆರೆದಿಡುತ್ತದೆ’ ಎಂದರು.

ಸುಪ್ರೀಂ ಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ.ಎನ್‌. ವೆಂಕಟಾಚಲಯ್ಯ ಮಾತನಾಡಿ, ‘ಹಿರಿಯ ಅಧಿಕಾರಿಗಳಿಗೆ ರಾಜಕಾರಣಿಗಳಿಗಿಂತ ಸಹೋದ್ಯೋಗಿಗಳನ್ನು ನಿಭಾಯಿಸುವುದು ಹೆಚ್ಚು ಕಷ್ಟ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಉತ್ತಮ ಆಡಳಿತ ನೀಡುವ ಜವಾಬ್ದಾರಿ ಅವರ ಮೇಲಿದೆ’ ಎಂದರು.

Comments
ಈ ವಿಭಾಗದಿಂದ ಇನ್ನಷ್ಟು
ಬಿಎಸ್‌ವೈಗೆ ನೋಟಿಸ್‌: ಠಾಣೆ ಎದುರು ಪ್ರತಿಭಟನೆ

ವಿನಯ್ ಅಪಹರಣ ಪ್ರಕರಣ
ಬಿಎಸ್‌ವೈಗೆ ನೋಟಿಸ್‌: ಠಾಣೆ ಎದುರು ಪ್ರತಿಭಟನೆ

24 Sep, 2017
ತುರ್ತು ಕರೆಗಂಟೆ ಬಳಕೆ– ಮೆಟ್ರೊ ವಿಳಂಬ

4 ನಿಮಿಷ ತಡ
ತುರ್ತು ಕರೆಗಂಟೆ ಬಳಕೆ– ಮೆಟ್ರೊ ವಿಳಂಬ

24 Sep, 2017

ಬಿಬಿಎಂಪಿ ಅಧಿಕಾರಿಗಳಿಗೆ ಹೈಕೋರ್ಟ್ ಆದೇಶ
‘ಸ್ವಂತ ಖರ್ಚಿನಲ್ಲಿ ಶಾಲಾ ಮೆಟ್ಟಿಲು ನಿರ್ಮಿಸಿ’

ರಸ್ತೆ ವಿಸ್ತರಣೆಗಾಗಿ ಮಡಿವಾಳ ದಲ್ಲಿರುವ ಖಾಲ್ಸಾ ಪಬ್ಲಿಕ್ ಶಾಲೆಯ ಮೆಟ್ಟಿಲುಗಳನ್ನು ತೆರವುಗೊಳಿಸಲಾಗಿತ್ತು. ತೆರವುಕ್ರಮ ಪ್ರಶ್ನಿಸಿ ಸಂಬಂಧಿಸಿದ ಶಾಲಾ ಆಡಳಿತ ಮಂಡಳಿ ಹೈಕೋರ್ಟ್ ಮೆಟ್ಟಿಲೇರಿತ್ತು.

24 Sep, 2017
ಕಲ್ಲು ಕ್ವಾರಿಗಳಲ್ಲಿ ಕಸ ವಿಲೇವಾರಿ ಖಂಡಿಸಿ ಪ್ರತಿಭಟನೆ

ರಸ್ತೆ ತಡೆ
ಕಲ್ಲು ಕ್ವಾರಿಗಳಲ್ಲಿ ಕಸ ವಿಲೇವಾರಿ ಖಂಡಿಸಿ ಪ್ರತಿಭಟನೆ

24 Sep, 2017

ಒಂದು ವರ್ಷದವರೆಗೆ ಮುಷ್ಕರಕ್ಕೆ ನಿಷೇಧ
ಪೌರ ಕಾರ್ಮಿಕರ ಮುಷ್ಕರ ತಡೆಯಲು ಎಸ್ಮಾ ಜಾರಿ

ಬಿಬಿಎಂಪಿ ವ್ಯಾಪ್ತಿಯ ಪೌರ ಕಾರ್ಮಿಕರು ಕರ್ತವ್ಯಕ್ಕೆ ಹಾಜರಾಗುವುದನ್ನು ಕಡ್ಡಾಯಗೊಳಿಸುವ ಸಲುವಾಗಿ ರಾಜ್ಯ ಸರ್ಕಾರ ಎಸ್ಮಾ (ಅಗತ್ಯ ಸೇವೆಗಳ ನಿರ್ವಹಣಾ ಕಾಯ್ದೆ) ಜಾರಿಗೊಳಿಸಿದೆ.

24 Sep, 2017