ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

16 ಕುರಿ ಸಾವು; ನೆಲಕ್ಕುರುಳಿದ ಚಾವಣಿ

Last Updated 18 ಮಾರ್ಚ್ 2017, 5:44 IST
ಅಕ್ಷರ ಗಾತ್ರ

ಬಳ್ಳಾರಿ: ಜಿಲ್ಲೆಯ ವಿವಿಧೆಡೆ ಬುಧವಾರ ರಾತ್ರಿ ಮತ್ತು ಗುರುವಾರ ಬೆಳಗಿನ ಜಾವ ಗುಡುಗು– ಮಿಂಚು, ಗಾಳಿ, ಆಲಿಕಲ್ಲು ಸಹಿತ ಧಾರಾಕಾರ ಮಳೆ ಸುರಿದು ಹಲವು ಜಾನುವಾರುಗಳುಸತ್ತಿವೆ. ರೇಷ್ಮೆ ಹುಳು ಸಾಕಣೆ ಮನೆ ಮೇಲ್ಛಾವಣಿ ನೆಲಕ್ಕೆ ಉರುಳಿದೆ. ಬಳ್ಳಾರಿ ನಗರದ ಬಂಡಿ ಮೋಟು ಪ್ರದೇಶದ ತಗ್ಗಿನ ಪ್ರದೇಶಗಳಿಗೆ ಮಳೆ ನೀರು ನುಗ್ಗಿತ್ತು. ನಗರದ ರೈಲು ಕೆಳಸೇತುವೆಯಲ್ಲಿ ನೀರು ನಿಂತು ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು.

ಜಿಲ್ಲೆಯಲ್ಲಿ ಬುಧವಾರ ರಾತ್ರಿ ಮತ್ತು ಗುರುವಾರ ಬೆಳಗಿನ ಜಾವ ಸುರಿದ ಈ ವರ್ಷದ ಮೊದಲ ಧಾರಾಕಾರ ಮಳೆಯು ತಂಪೆರೆದಿದೆ.

ನಗರದಲ್ಲಿ ಮನೆಗಳಿಗೆ ನೀರು ನುಗ್ಗಿರುವುದು, ಅಲ್ಲಲ್ಲಿ ಜಾನುವಾರುಗಳ ಸಾವು, ರೇಷ್ಮೆಹುಳು ಸಾಕಣೆ ಕೇಂದ್ರದ ಮೇಲ್ಚಾವಣಿ ಹಾರಿಬಿದ್ದುದನ್ನು ಹೊರತು ಪಡಿಸಿದರೆ, ಮಳೆಯು ಜಿಲ್ಲೆಯ ಜನರಿಗೆ ಅದರಲ್ಲೂ ರೈತರಿಗೆ ಸಂತಸ ತಂದಿದೆ.

ಬೇಸಿಗೆಯ ಬಿಸಿಲಿನಿಂದ ಕಂಗೆಟ್ಟಿದ್ದ ನಗರದ ಜನ ತಂಪು ವಾತಾವರಣ ಮೂಡಿದ್ದರಿಂದ ಉಲ್ಲಸಿತರಾದರು. ಜಮೀನುಗಳು ಮಳೆನೀರಿನಲ್ಲಿ ತೋಯ್ದಿ ದ್ದನ್ನು ಕಂಡ ರೈತರು ಸಂಭ್ರಮಿಸಿದರು.

ಬುಧವಾರ ರಾತ್ರಿ 11.20ರ ವೇಳೆಗೆ ಆರಂಭವಾದ ಮಳೆ ಸತತ ಒಂದು ಗಂಟೆ ಕಾಲ ಸುರಿದ ಪರಿಣಾಮವಾಗಿ ನಗರದ ಬಹುತೇಕ ಚರಂಡಿಗಳು ಉಕ್ಕಿ ಹರಿದವು. ನಗರದ ಜಿಲ್ಲಾ ಕ್ರೀಡಾಂಗಣ ಸಮೀಪದ ರೈಲು ಕೆಳಸೇತುವೆಯನ್ನು ಮೂರು ಅಡಿಗೂ ಹೆಚ್ಚು ಎತ್ತರ ನೀರು ನಿಂತ ಪರಿಣಾಮವಾಗಿ ವಾಹನ ಸವಾ ರರು ತೊಂದರೆ ಅನುಭವಿಸಿದರು. ಪಾದ ಚಾರಿಗಳು ಬೇರೆ ದಾರಿಯನ್ನು ಹಿಡಿ ದರು. ಬೆಳಿಗ್ಗೆ 10ರ ಬಳಿಕ ಪಾಲಿಕೆ ಸಿಬ್ಬಂದಿ ಮೋಟರ್‌ ಸಹಾಯದಿಂದ ನೀರನ್ನು ಬೇರೆಡೆಗೆ ಹರಿಸಿದರು.

ಮನೆಗೆ ನುಗ್ಗಿದ ನೀರು: ನಗರದ ಎಪಿಎಂಸಿ ಮಾರುಕಟ್ಟೆ ಸಮೀಪದಲ್ಲಿ ಇರುವ ಬಂಡಿಮೋಟು ಪ್ರದೇಶದಲ್ಲಿ ತಗ್ಗಿನಲ್ಲಿರುವ ಮನೆಗಳಿಗೆ ನೀರು ನುಗ್ಗಿದ ಪರಿಣಾಮ, ನಿವಾಸಿಗಳು ರಾತ್ರಿಯಿಡೀ ನಿದ್ದೆಗೆಟ್ಟರು. ಬೆಳಿಗ್ಗೆ ನೀರು ಹೊರಚೆಲ್ಲುವ ಕಾರ್ಯ ಕೆಲವು ಗಂಟೆ ಕಾಲ ನಡೆಯಿತು.

ಮಳೆ ನೀರು ಚರಂಡಿ ಮೂಲಕ ಉಕ್ಕಿ ಹರಿದಿದ್ದರಿಂದ ಸುತ್ತಲಿನ ಪ್ರದೇಶ ದುರ್ವಾಸನೆಯಿಂದ ಕೂಡಿತ್ತು.

ಹಗರಿಬೊಮ್ಮನಹಳ್ಳಿ ವರದಿ: ಸಿಡಿಲು ಹೊಡೆದ ಪರಿಣಾಮ 16 ಕುರಿಗಳು ಸಾವಿ ಗೀಡಾದ ಘಟನೆ ತಾಲ್ಲೂಕಿನ ಹಗರಿ ಕ್ಯಾದಿಗಿಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಕಿತ್ನೂರು ಗೋಣೆಪ್ಪ ಅವರ ಕುರಿಗಳನ್ನು ಜಮೀನೊಂದರ  ಕುರಿ ಮಂದೆಯಲ್ಲಿ ಬಿಡಲಾಗಿತ್ತು. ಸ್ಥಳದಲ್ಲೇ 15 ಕುರಿಗಳು ಸಾವಿಗೀಡಾದವು. ಅದ ರಿಂದ ₹ 75 ಸಾವಿರ ನಷ್ಟವಾಗಿದೆ ಎಂದು ಗೋಣೆಪ್ಪ ತಿಳಿಸಿದರು. ಇದೇ ಸಮಯದಲ್ಲಿ ನಾಯಿ ಒಂದಕ್ಕೆ ಸಿಡಿಲು ಬಡಿದು ಅದೂ ಕೂಡ ಸಾವಿಗೀಡಾಗಿದೆ.

ಘಟನಾ ಸ್ಥಳಕ್ಕೆ ತಹಶೀಲ್ದಾರ್ ಆನಂದಪ್ಪ ನಾಯಕ, ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಸೂರಪ್ಪ, ಕಂದಾಯ ನಿರೀಕ್ಷಕ ಶಿವ ಕುಮಾರ್‌ ಭೇಟಿ ನೀಡಿ ಪರಿ ಶೀಲನೆ ನಡೆಸಿದರು. ಸಾವಿಗೀಡಾದ ಕುರಿಗಳಿಗೆ ಸರ್ಕಾರದಿಂದ ತಲಾ ₹ 5,000 ಪರಿ ಹಾರ ನೀಡಲಾಗುವುದು ಎಂದರು.

ತಾಲ್ಲೂಕಿನ ತಂಬ್ರಹಳ್ಳಿಯ ಬಂಡಿ ಕ್ಯಾಂಪ್‌ ಬಳಿ ಮುತ್ಕೂರು ಯಮನಪ್ಪ ಅವರ ರೇಷ್ಮೆ ಹುಳು ಸಾಕಣೆ ಮನೆಯ ಛಾವಣಿ ಸಂಪೂರ್ಣ ನೆಲಕ್ಕುರುಳಿ 40ಕ್ಕೂ ಹೆಚ್ಚು ತಗಡುಗಳು ಚೆಲ್ಲಾಪಿಲ್ಲಿ ಆಗಿವೆ. ₹ 1 ಲಕ್ಷಕ್ಕೂ ಹೆಚ್ಚು ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಸ್ಥಳಕ್ಕೆ ರೇಷ್ಮೆ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದರು.

ಹಡಗಲಿ ವರದಿ: ತಾಲ್ಲೂಕಿನ ಹರವಿ ಸಿದ್ದಾಪುರದದ ಕಣವಿ ಹೊನ್ನಪ್ಪ ಎಂಬು ವವರ ಮನೆಯ ಗೋಡೆ ಕುಸಿದು ಒಂದು ಎಮ್ಮೆ ಸಾವಿಗೀಡಾಗಿದೆ.  ಹೊಸಪೇಟೆ ತಾಲ್ಲೂಕಿನ ಹಂಪಿಯ ಕೆಲ ಸ್ಮಾರಕಗಳು ಮತ್ತು ತಗ್ಗಿನ ಪ್ರದೇಶಗಳು ಮಳೆ ನೀರಿನಿಂದ ಆವೃತವಾಗಿದ್ದವು.

**

ಜಿಲ್ಲೆಯಲ್ಲಿ 112.6 ಮಿ.ಮೀ ಮಳೆ
ಬಳ್ಳಾರಿ:
ಜಿಲ್ಲೆಯಾದ್ಯಂತ ಬುಧವಾರ ರಾತ್ರಿ ಮತ್ತು ಗುರುವಾರ ಬೆಳಿಗ್ಗೆ ಒಟ್ಟಾರೆ 112.6 ಮಿ.ಮೀ ಮಳೆಯಾಗಿದೆ ಎಂದು ಜಿಲ್ಲಾ ಅಂಕಿ ಸಂಖ್ಯಾಧಿಕಾರಿ ಪ್ರಕಟಣೆ ತಿಳಿಸಿದೆ.

ಬಳ್ಳಾರಿ ತಾಲೂಕಿನಲ್ಲಿ 49.6 ಮಿ.ಮೀ, ಹಡಗಲಿ ತಾಲೂಕಿನಲ್ಲಿ 32.2 ಮಿ.ಮೀ, ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿ 16.2 ಮಿ.ಮೀ, ಹೊಸಪೇಟೆ ತಾಲೂಕಿನಲ್ಲಿ 3.4 ಮಿ.ಮೀ, ಕೂಡ್ಲಿಗಿ ತಾಲೂಕಿನಲ್ಲಿ 3.2 ಮಿ.ಮೀ, ಸಂಡೂರು ತಾಲೂಕಿನಲ್ಲಿ 8.0 ಮಿ.ಮೀ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT