ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೀರಪ್ಪ ಮೊಯಿಲಿ ವಿರುದ್ಧ ಜನರ ಆಕ್ರೋಶ

Last Updated 18 ಮಾರ್ಚ್ 2017, 7:44 IST
ಅಕ್ಷರ ಗಾತ್ರ

ಹೆಬ್ರಿ: ಬಹುಕಾಲದ ಕನಸಾದ ಹೆಬ್ರಿ ತಾಲ್ಲೂಕು ರಚನೆಯನ್ನು ಕೈ ಬಿಟ್ಟ ರಾಜ್ಯ ಸರ್ಕಾರದ ವಿರುದ್ಧ ಹೆಬ್ರಿಯಲ್ಲಿ ಶುಕ್ರವಾರ ಪ್ರತಿಭಟನೆ ನಡೆಯಿತು.

ರಾಜ್ಯ ಸರ್ಕಾರ, ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ನಾಯಕ ವೀರಪ್ಪ ಮೊಯಿಲಿ ವಿರುದ್ಧ ಧಿಕ್ಕಾರ ಕೂಗಿ ಪ್ರತಿಭಟನೆ ನಡೆಸಿದರು.

ಹೆಬ್ರಿ ಪೇಟೆಯನ್ನು ಬಂದ್ ನಡೆಸಿ ರಸ್ತೆ ತಡೆ ಮಾಡಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು. ಹೆಬ್ರಿ ಕಾರ್ಕಳದ ಮೂಲಕ ರಾಷ್ಟ್ರೀಯ ಮಟ್ಟಕ್ಕೆ ಬೆಳೆದ ವೀರಪ್ಪ ಮೊಯಿಲಿಗೆ ಹೆಬ್ರಿಯನ್ನು ತಾಲ್ಲೂಕು ಮಾಡಲಾಗದಿದ್ದರೆ, ಅವರಿಗೆ ಹೆಬ್ರಿಗೆ ಬರುವ ನೈತಿಕ ಹಕ್ಕಿಲ್ಲ, ಮೊಯಿಲಿ ನಿಜವಾದ ಸಮರ್ಥ ರಾಷ್ಟ್ರೀಯ ನಾಯಕ ಆಗಿದ್ದರೆ ಮುಂದಿನ ಒಂದು ವಾರದೊಳಗೆ ಹೆಬ್ರಿ ತಾಲ್ಲೂಕು ಮಾಡಿ ತೋರಿಸಲಿ, ತಾಲ್ಲೂಕು ಮಾಡುತ್ತೇವೆ ಎಂದು ಮೋಸ ಮಾಡಬೇಡಿ ಎಂದು ಪ್ರತಿಭಟನಾಕಾರರು ಮೊಯಿಲಿ ಅವರ ವಿರುದ್ಧ ಗುಡುಗಿದರು.

ಹೆಬ್ರಿ ತಾಲ್ಲೂಕು ಆಗದಿರುವುದಕ್ಕೆ ಬಿಜೆಪಿಯ ನಾಯಕರು ಹೊಣೆಯಲ್ಲ ಸ್ಥಳೀಯ ಕಾಂಗ್ರೆಸ್ ನಾಯಕರೆ ಹೊಣೆ ಬಿಜೆಪಿ ಮುಖಂಡ ನಂದ ಕುಮಾರ ಹೆಗ್ಡೆ ಹೇಳಿದರು. ತಾಲ್ಲೂಕು ಮಾಡುವುದಾಗಿ ಹೇಳಿ ಜನರನ್ನು ಸಿದ್ದರಾಮಯ್ಯ ನೇತೃ ತ್ವದ ಕಾಂಗ್ರೆಸ್ ಸರ್ಕಾರ ನಾಯಕರು ವಂಚಿ ಸಿದ್ದಾರೆ ಎಂದು ಜಿಲ್ಲಾ ಪಂಚಾ ಯಿತಿ ಸದಸ್ಯೆ ಜ್ಯೋತಿ ಹರೀಶ್ ಪೂಜಾರಿ ದೂರಿದರು.

ಮಾಜಿ ಶಾಸಕ ಗೋಪಾಲ ಭಂಡಾರಿ ಮತ್ತು ಶಾಸಕ ಸುನೀಲ್ ಕುಮಾರ್ ತಾಲ್ಲೂಕು ರಚನೆಗೆ ಸಾಕಷ್ಟು ಪ್ರಯತ್ನ ಮಾಡಿದ್ದಾರೆ. ಹೆಚ್ಚಿನ ಒತ್ತಡ ಇಲ್ಲದೆ ಹೆಬ್ರಿ ತಾಲ್ಲೂಕು ಆಗಿಲ್ಲ, ಸಕಲ ಅರ್ಹತೆ ಹೆಬ್ರಿಯನ್ನು ಕೈಬಿಟ್ಟು ಜಿಲ್ಲೆಯ ಉಳಿದ ತಾಲ್ಲೂಕು ಮಾಡಿರುವುದು ಮತ ಬ್ಯಾಂಕ್ ತಾಲ್ಲೂಕು, ಹೆಬ್ರಿ ತಾಲ್ಲೂಕು ಇನ್ನು ಕನಸು ಮಾತ್ರ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಸಂಚಾಲಕ ಸಿ.ಎಂ. ಪ್ರಸನ್ನ ಕುಮಾರ್ ಶೆಟ್ಟಿ ಹೇಳಿದರು.

ನಮ್ಮ ಹೋರಾಟ ಕೇವಲ ಪತ್ರಿಕೆಗಳಿಗೆ ಸೀಮಿತವಾಯಿತು. ನಮ್ಮ ಕೂಗು ಬೆಂಗಳೂರಿಗೆ ಕೇಳಿಲ್ಲ, ಸರಿಯಾದ ಹೋರಾಟ ನಮ್ಮ ಕಡೆಯಿಂದ ಆಗಿಲ್ಲ ಎಂಬುದು ಸತ್ಯ, ತಾಲ್ಲೂಕು ಆಗಿಯೇ ಆಗುತ್ತದೆ ಎಂಬ ಧೈರ್ಯದಲ್ಲಿದ್ದೇವು ಎಂದು ತಾಲ್ಲೂಕು ಹೋರಾಟ ಸಮಿತಿ ಸಂಚಾಲಕ ಹೆಬ್ರಿ ಭಾಸ್ಕರ ಜೋಯಿಸ್ ಬೇಸರ ವ್ಯಕ್ತ ಪಡಿಸಿದರು.

ನಿಮಗೆ ಹೆಬ್ರಿ ಬಗ್ಗೆ ನಿಜವಾದ ಕಾಳಜಿ ಇದ್ದರೆ, ವಿಶೇಷ ನ್ಯಾಯಲಯ ಮತ್ತು ವಿಶೇಷ ತಹಶೀಲ್ದಾರ್‌ ಅವರನ್ನು ನೇಮಿಸಿ, ಆಗ ನಿಮ್ಮ ಜನಪರ ಕಾಳಜಿ ಅರ್ಥವಾಗುತ್ತದೆ, ಜನರಿಗೆ ಮೋಸ ಮಾಡಿ ಬಿಜೆಪಿ ಮೇಲೆ ಆರೋಪ ಹೊರಿ ಸಬೇಡಿ ಎಂದು ಮೊಯಿಲಿ, ಗೋಪಾಲ ಭಂಡಾರಿ ವಿರುದ್ಧ ಬಿಜೆಪಿ ನಾಯಕರಾದ ಕಾರ್ಕಳ ಎಪಿಎಂಸಿ ಅಧ್ಯಕ್ಷ ಮುಟ್ಲುಪಾಡಿ ಸತೀಶ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಶಕ್ತಿಕೇಂದ್ರದ ಅಧ್ಯಕ್ಷ ಶಿವಪುರ ಸುರೇಶ ಶೆಟ್ಟಿ, ತಾಲ್ಲೂಕು ಪಂಚಾಯಿತಿ ಸದಸ್ಯೆ ಲಕ್ಷ್ಮೀದಯಾ ನಂದ್, ಜಯಕರ್ನಾಟಕ  ಹೆಬ್ರಿ ಘಟಕದ ಅಧ್ಯಕ್ಷ ಕಳ್ತೂರು ವಿಜಯ ಹೆಗ್ಡೆ, ನವೀನ ಅಡ್ಯಂತಾಯ ಇದ್ದರು.

ಸಭೆಯಲ್ಲಿ ಬಿಜೆಪಿ ಮತ್ತು ವಿವಿಧ ಸಂಘಟನೆಯ ಪ್ರಮುಖರಾದ ಸಮೃದ್ಧಿ ಪ್ರಕಾಶ ಶೆಟ್ಟಿ, ರಾಘವೇಂದ್ರ ಡಿ.ಜಿ, ಸೀತಾನದಿ ವಿಠ್ಠಲ ಶೆಟ್ಟಿ ಸಂಜೀವ ನಾಯ್ಕ್, ದಿನೇಶ್ ಶೆಟ್ಟಿ,ಗಣೇಶ್ ಕುಮಾ ರ್ ಜರ್ವತ್ತು,  ಪಂಚಾಯಿತಿ ಸದಸ್ಯರು, ತಾಲ್ಲೂಕು ಪಂಚಾಯಿತಿ ಸದಸ್ಯ ಚಂದ್ರಶೇಖರ ಶೆಟ್ಟಿ, ಅಮೃತ್ ಕುಮಾರ್ ಶೆಟ್ಟಿ,ರಮೇಶ್ ಕುಮಾರ್,  ಪಂಚಾಯಿತಿ ಅಧ್ಯಕ್ಷರಾದ ಹೆಬ್ರಿಯ ಸುಧಾಕರ ಹೆಗ್ಡೆ, ವರಂಗದ , ಸುರೇಂದ್ರ ಶೆಟ್ಟಿ, ನಾಡ್ಪಾಲಿನ ಜಲಜ ಪೂಜಾರಿ, ಶಿವಪುರದ ಸುಗಂಧಿ ನಾಯ್ಕ್  ಇದ್ದರು.

**

‘ಹೆಬ್ರಿ  ತಾಲ್ಲೂಕು: ಸಂಸದೆ ಶೋಭಾ ಎಲ್ಲಿದ್ದಾರೆ’

ಹೆಬ್ರಿ ತಾಲ್ಲೂಕು ಬಗ್ಗೆ ಈ ಭಾಗದ ಶಾಸಕ ಸುನೀಲ್ ಕುಮಾರ್, ಸಂಸದೆ ಶೋಭಾ ಕರಂದ್ಲಾಜೆ ಏನು ಮಾಡಿದ್ದಾರೆ. ಸಂಸದೆ ಶೋಭಾ ಎಲ್ಲಿದ್ದಾರೆ, ಸರ್ಕಾರದ ಮಟ್ಟದಲ್ಲಿ ಏನು ಮಾಡಿದ್ದಾರೆ ಎಂಬುದನ್ನು ಜನರ ಮುಂದೆ ಇಡಲಿ, ಇಲ್ಲದಿದ್ದರೆ ರಾಜೀನಾಮೆ ನೀಡಲಿ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮಂಜುನಾಥ ಪೂಜಾರಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಆಗಾಗ್ಗೆ ಬಂದ್ ಮಾಡಿ ಜನರಿಗೆ ತೊಂದರೆ ಮಾಡಬೇಡಿ, ಮತ ರಾಜಕೀಯ ಮಾಡಬೇಡಿ, ನಾವು ಪಕ್ಷದ ನೆಲೆಯಲ್ಲಿ ಗೋಪಾಲ ಭಂಡಾರಿ ಮತ್ತು ವೀರಪ್ಪ ಮೊಯಿಲಿ ಮೂಲಕ ಮತ್ತೇ ಹೆಬ್ರಿ ತಾಲ್ಲೂಕು ರಚನೆಗೆ ಹೋರಾಟ ಮಾಡುತ್ತೇವೆ. ಬಿಜೆಪಿಯವರು ಕಸ್ತೂರಿರಂಗನ್ ವರದಿ ಮತ್ತು ಹುಲಿ ಯೋಜನೆ  ಬಗ್ಗೆಯೂ ಜನತೆಗೆ ಉತ್ತರ ಕೊಡಿ ಎಂದು ಅವರು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT